ಹೆದ್ದಾರಿ ಪ್ರಾಧಿಕಾರಕ್ಕೆ ರೈತರಿಂದ ಎಚ್ಚರಿಕೆ

ಜಿಲ್ಲಾ ಸುದ್ದಿ

  1. Chitradurga warning to nhai from farmersಹೆದ್ದಾರಿ ಪ್ರಾಧಿಕಾರಕ್ಕೆ ರೈತರಿಂದ ಎಚ್ಚರಿಕೆ

ಚಿತ್ರದುರ್ಗ,ನ04(ಸಂವಾ)-ದಾವಣಗೆರೆ ಹಾಗೂ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಲಕ್ಚ್ಮೀ ಸಾಗರದ ಬಳಿ ಅಪಘಾತಗಳು ಹೆಚ್ಚಾಗುತ್ತಿದ್ದು ಈ ತಿರುವು ಜೀವ ಕಂಟಕವಾಗಿದೆ ಇದರಿಂದ ಹೆದ್ದಾರಿ ರಸ್ತೆ ಪ್ರಾಧಿಕಾರ ಕೂಡಲೇ ಮೇಲ್ಸೆತುವೆ  ನಿರ್ಮಿಸಬೇಕು ಇಲ್ಲದೆ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ರೈತ ಸಂಘ ಪುಟ್ಟಣ್ಣಯ್ಯ ಬಣ ಎಚ್ಚರಿಕೆಯನ್ನು ನೀಡಿದೆ.

 

 

ಹೆದ್ದಾರಿ ರಸ್ತೆ ಪ್ರಾಧಿಕಾರವೂ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕೆಲಸವನ್ನು ಮಾಡುತ್ತಿದೆ. ಆದರೆ ಲಕ್ಷ್ಮಿ ಸಾಗರದ ಬಳಿ ಅವೈಜ್ಞಾನಿಕ ತಿರುವನ್ಬು ನೀಡಿದ್ದು ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ರೈತರು ರಸ್ತೆ ಪಕ್ಕದಲ್ಲಿ ಒಕ್ಕಲು ಮಾಡುತ್ತಾರೆ.  ಇದರಿಂದ ಈ ತಿರುವು ಜೀವ ಕಂಟಕವಾಗಿದೆ. ಇಂತಹ ಜೀವ ಕಂಟಕವಾಗಿರುವ ತಿರುವನ್ನು ತೆಗದು ಮೇಲ್ಸೇತುವೆಯನ್ನು ಮಾಡಿ ಜನರ ಜೀವ ರಕ್ಷಣೆ ಮಾಡಬೇಕು. ನಾವು ಅಭಿವೃದ್ದಿಗೆ ವಿರೋಧ ಮಾಡುವುದಿಲ್ಲ. ಜೀವವನ್ನು ರಕ್ಷಿಸುವ ಕೆಲಸವನ್ನು ಮಾಡಿ ಇದು ಕೂಡಲೇ ನಡೆಯಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಸುರೇಶ್ ಬಾಬು ಎಚ್ಚರಿಸಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *