ಶರಣಬಸವಶ್ರೀಗಳ ಕೊಡುಗೆ ಅಪಾರ : ಸಿದ್ದರಾಮೇಶ್ವರ ಸ್ವಾಮೀಜಿ

ಜಿಲ್ಲಾ ಸುದ್ದಿ

 

 

 

ಶರಣಬಸವಶ್ರೀಗಳ ಕೊಡುಗೆ ಅಪಾರ: ಇಮ್ಮಡಿ‌ಸಿದ್ದರಾಮೇಶ್ವರಸ್ವಾಮೀಜಿ

 

 

ಚಿತ್ರದುರ್ಗ,ನ03(ಸಂವಾ)-ಶರಣಬಸವಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು, ಮುಗ್ಧರನ್ನು 

ಪ್ರಬುದ್ಧರನ್ನಾಗಿಸಿದವರು ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಗೆ ಮತ್ತೊಮ್ಮೆ ಸೇರಿಸಿದವರು. ಶ್ರಮಿಕ ವರ್ಗವನ್ನು
ಅಕ್ಷರದ ವಾರಸುದಾರರನ್ನಾಗಿಸಿದವರು. ಎಂದು ಚಿತ್ರದುರ್ಗ-ಬಾಗಲಕೋಟದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ
ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ಶರಣಬಸವ
ಮಹಾಸ್ವಾಮಿಗಳ 12ನೇ ಸ್ಮರಣೋತ್ಸವದ ವೆಬಿನಾರ್ ವಿಚಾರ ಸಂಕಿರಣದಲ್ಲಿ ಅವರು ಮಾತ ನಾಡಿದರು.
ಅಸಂಘಟಿತ ¸ ಸಮಾಜವನ್ನು ಕಾರ್ಮಿಕ ತಳಹದಿಯಿಂದ ಸಂಘಟಿಸಿದವರು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ
ನಾಂದಿ ಹಾಡಿದವರು. ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎನ್ನುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಜನಾಂಗದಲ್ಲಿ
ಜಾಗೃತಿ ಮೂಡಿಸಿದರು. ಭೋವಿ ಗುರುಪೀಠದ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿದರು. ಭೋವಿ ನಿಗಮದ ಸ್ಥಾಪನೆಯ
ಸಂಕಲ್ಪ ಮಾಡಿದವರು. ಜಾತ್ಯಾತೀತ ಪಕ್ಷಾತೀತವಾಗಿಭಕ್ತಿಯ ಸ್ನೇಹವನ್ನು ಚಾಚಿದ್ದರು. ಮಠದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು ಎಂದು ಹೇಳಿದರು.
ತುಮಕೂರು ವಿಶ್ವ
ವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ,
ಸಮುದಾಯದಲ್ಲಿ ಶಿಕ್ಷಣದ ಕೊರತೆ, ಪಡೆದ ಶಿಕ್ಷಣದ ಮನವರಿಕೆಯ ಕೊರತೆ, ಉದಾಸೀನತೆ ನಮ್ಮನ್ನು ಹೆಚ್ಚು ಆವರಿಸಿದೆ.
ಇತರೆ ಸಮುದಾಯಗಳು ಭೋವಿ ಸಮುದಾಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಅಭಿವೃದ್ಧಿಯಾಗುತ್ತಿವೆ. ನಾವು
ಅಲ್ಪತೃಪ್ತಿಗೋಸ್ಕರ ನಮ್ಮತನವನ್ನು ಮಾರಿಕೊಳ್ಳುತ್ತಿವೆ. ಇದನ್ನು ಬಿಟ್ಟಾಗ ಮಾತ್ರ ನಮ್ಮ ಧ್ಯೇಯ, ಅಭಿಲಾಷೆಗಳನ್ನು
ಈಡೇರುತ್ತವೆ. ಆ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಮುದಾಯದಲ್ಲಿ ಶಿಕ್ಷಣ ಪಡೆದವರು ಕೂಡ ಜಾಗೃತಿಯ ಕೊರತೆಯಿಂದ ಹಿಂದುಳಿದಿದ್ದಾರೆ. ಕಾಲೆಳೆಯುವ ಪ್ರವೃತ್ತಿ
ಕಡಿಮೆಯಾಗಿ ಉತ್ತೇಜನ ನೀಡುವ ಪ್ರಯತ್ನ ಆಗಬೇಕು. ಸಮುದಾಯ ರಾಜಕೀಯಕ್ಕಾಗಿ ಮಾತ್ರ ಸಂಘಟನೆ ಆಗಬಾರದು.
ಶಿಕ್ಷಣ-ಬದುಕು ಜೊತೆ ಜೊತೆಯಾಗಿ ಸಾಗಿದಾಗ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದರು.
ಯುವಕರಾಗಿರುವ ಇಮ್ಮಡಿ ಸಿದ್ದರಾಮೇಶ್ವರ
ಶ್ರೀಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಅವರು ಬದ್ಧತೆಯಿಂದ, ಜವಾಬ್ದಾರಿಯಿಂದ ಸಮುದಾಯವನ್ನು
ಸಹಭಾಗಿತ್ವದ ಕಡೆ ಕೊಂಡೊಯ್ಯಬೇಕು ಎಂದರು.

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *