ಶಾರ್ಟ್ ಸರ್ಕ್ಯೂಟ್ ನಿಂದ ಹೊಳಲ್ಕೆರೆ ಪಟ್ಟಣದಲ್ಲಿ ಮನೆಯೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹೊಳಲ್ಕೆರೆ ಪಟ್ಟಣದ ಖಾಜಿ ಮೊಹೊಲ್ಲಾ ಬಡಾವಣೆಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು ಯಶಸ್ವಿಯಾಗಿದ್ದಾರೆ. ಘಟನೆಗೆ ಕಾರಣ: ಮಹಮದ್ ಮುಸ್ತಾಫ ಎನ್ನುವವರು ಮನೆ ಮೇಲೆ ಕೊಬ್ಬರಿ ರಾಶಿಯನ್ನ ಒಣಗಿ ಹಾಕಿದ್ದರು. ಆ ರಾಶಿಗೆ ವಿದ್ಯುತ್ ಕೇಬಲ್ ನಿಂದ ಬೆಂಕಿ ತಗುಲಿದ್ದು, ನೋಡುತ್ತಲೇ ಬೆಂಕಿ ಕೆನ್ನಾಲಿಗೆ ಸಂಪೂರ್ಣ ಮನೆಗೆ ಆವರಿಸಿದೆ. ಇದರಿಂದ ಅಕ್ಕ ಪಕ್ಕದ ಮನೆಯವರಿಗೂ ಆತಂಕ ಸೃಷ್ಠಿಯಾಗಿತ್ತು. ಮನೆಯಲ್ಲಿದ್ದ 2.5 ಲಕ್ಷ ನಗದು ಸೇರಿ ಹಲವು ವಸ್ತುಗಳು ಸುಟ್ಟು ಕರಕಲಾಗಿದ್ದು,ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.