ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸಿ: ಜೆ ಯಾದವರೆಡ್ಡಿ

ರಾಜ್ಯ

ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸಿ: ಜೆ ಯಾದವರೆಡ್ಡಿ

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಹಿಂದ ಎನ್ನುವ ಹೆಸರಿಗೆ ಕಪ್ಪು ಚುಕ್ಕಿತಂದುಕೊಳ್ಳದೆ ಕಾಂತರಾಜ್ ವರದಿಯನ್ನ ಜಾರಿ ಮಾಡಬೇಕೆಂದು ಸರ್ವೋದಯ ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಜೆ.ಯಾದವರೆಡ್ಡಿಯವರು ಒತ್ತಾಯಿಸಿದರು.

 

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಿ ಮಾತನಾಡಿದರು ಕಾಂತರಾಜ್ ವರದಿಯಿಂದ ಕಡು ಬಡತನದ ಮುಸ್ಲಿಂ ಸಮುದಾಯಗಳಿಗೆ ಸಾಕಷ್ಟು ಅನುಕೂಲಗಳಾಗಲಿವೆ. ಕೆಲ ಪ್ರಭಾವಿ ರಾಜಕಾರಣಿ ವ್ಯಕ್ತಿಗಳು ಕಾಂತರಾಜ್ ಆಯೋಗ ಅವೈಜ್ಞಾನಿಕತೆಯಿಂದ ಕೂಡಿದ ಎಂದು ಬಿಂಬಿಸುತ್ತಿದ್ದಾರೆ.

ಆಯೋಗವು ಬಹಳಷ್ಟು ಸ್ಪಷ್ಟತೆಯಿಂದ ಸತ್ಯದಿಂದ ಕೂಡಿದ್ದು ಈ ಆಯೋಗವನ್ನು ಮುಖ್ಯಮಂತ್ರಿಗಳು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ನಾಯಕ ಎಂಬ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಈ ವರದಿಯನ್ನು ಜಾರಿಗೊಳಿಸಬೇಕು ಅಹಿಂದ ಪರವಾಗಿ ಇರುವುದಾದರೆ ಕಾಂತರಾಜ್ ಆಯೋಗವನ್ನು ಜಾರಿಗೊಳಿಸಿ ಬಡವರ ಶೈಕ್ಷಣಿಕ ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಅಲ್ಪ ಸಂಖ್ಯಾತರ ಸಮುದಾಯದ ಮುಖಂಡ ಟಿ.ಶಫೀವುಲ್ಲ ಮಾತಾಡಿ, ಬಿಜೆಪಿ ಸರ್ಕಾರವಿದ್ದಾಗ ಮುಸ್ಲಿಮರಿಗೆ 2 ಬಿ‌ಮೀಸಲಾತಿಯನ್ನು ರದ್ದು ಮಾಡಿದೆ.‌ಇದರಿಂದ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕವಾಗಿ ಮುಂದುವರೆಯುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ 2 ಬಿ‌ಮೀಸಲಾತಿ ಕೊಡುತ್ತೇವೆಂದು ಪ್ರಣಾಳಿಕೆಯಲ್ಲಿ‌ ಹೇಳಿದ್ದು, ಅದರಂತೆ ಸಿದ್ದರಾಮಯ್ಯ ಪುನಃ 2 ಬಿ ಮೀಸಲಾತಿ‌ ನೀಡುವಂತೆ ಆಗ್ರಹಿಸಿದರು. ಈ ಸಮಯದಲ್ಲಿ‌ ಬಡಗಿ ಸಂಘದ ಜಿಲ್ಲಾಧ್ಯಕ್ಷ ಹಾಗು ಕಾರ್ಮಿಕ‌ಸಂಘಟನೆಯ ಮುಖಂಡ ಜಾಕೀರ್ ಹುಸೇನ್, ಶಿವಕುಮಾರ್ ದಲಿತ ಮುಖಂಡರು, ಸೋಲೋಮಾನ್ ರಾಜ್ ಕುಮಾರ್ ಕ್ರಿಶ್ಚಿಯನ್ ಒಕ್ಕೂಟ, ಉಪ್ಪಾರ ಸಂಘದ ಮೂರ್ತಿ ಇದ್ದರು.

Leave a Reply

Your email address will not be published. Required fields are marked *