ಮೊಳಕಾಲ್ಮೂರು ತಾಲೂಕಿನ ರಂಗಯ್ಯನ ದುರ್ಗ ಜಲಾಶಯವು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ದ್ರಾಕ್ಷಾ ರಸ ಮತ್ತು ವೈನ್ ಮಂಡಳಿ ಅಧ್ಯಕ್ಷರಾದ ಬಿ. ಯೋಗೇಶ್ ಬಾಬು ಕ್ಷೇತ್ರದ ಮುಖಂಡರೊಂದಿಗೆ ತೆರಳಿ ಬಾಗೀನ ಅರ್ಪಿಸಿದರು.ಇದೇ ಸಮಯದಲ್ಲಿ ಮಾತಾಡಿ,ಕ್ಷೇತ್ರದ ಜನತೆಗೆ ಸುಖ ಶಾಂತಿ ಸಮೃದ್ದಿಯಿಂದ ಕೂಡಿರಲಿ, ಕಾಲಕಾಲಕ್ಕೆ ಉತ್ತಮ ಮಳೆ ಬೆಳೆ ಆಗಲಿ, ಎಂದು ಪ್ರಾರ್ಥಿಸಿ, ರಂಗಯ್ಯನ ದುರ್ಗ ಜಲಾಶಯವು ಮಾಜಿ ಮುಖ್ಯ ಮಂತ್ರಿ ದೇವರಾಜ್ ಅರಸ್ ಹಾಗೂ ಮಾಜಿ ಶಾಸಕ ಪಟೇಲ್ ಜಿ.ಪಾಪನಾಯಕ ಹಾಗು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ ಹೆಚ್. ರಂಗನಾಥ್ ಅವಧಿಯಲ್ಲಿ ಬರಪೀಡಿತ ತಾಲೂಕಾದ ಮೊಳಕಾಲ್ಮೂರು ತಾಲೂಕಿನ ಜನತೆಗೆ ಬಳಕೆಯಾಗಲಿ ಎನ್ನುವ ನಿಟ್ಟಿನಲ್ಲಿ ನಿರ್ಮಿಸಲಾಗಿತ್ತು.ಇಂದು ಉತ್ತಮ ಮಳೆಯಿಂದಾಗಿ ತುಂಬಿದೆ, ಎಂದು ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.