ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾ ಸರ್ಕಾರ ಎಂಬ ಹಣೆಪಟ್ಟಿ ಇದ್ದು ಇದನ್ನು ಮರೆ ಮಾಚಲು ಜಾತಿ ಗಣತಿ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮೀಸಲಾತಿ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಜವಾಹರಲಾಲ್ ನೆಹರು ಮೀಸಲಾತಿ ವಿರೋಧಿಸಿದ್ದರು. ಅದರ ಪತ್ರವನ್ನು ಮೋದಿಯವರು ಇತ್ತಿಚೆಗೆ ಬಿಡುಗಡೆ ಮಾಡಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಿದ್ದು ಕಾಂಗ್ರೆಸ್ ಅಲ್ಲ , ಬಿಜೆಪಿ ಸರ್ಕಾರ ಎಂದು ಮರೆಯಬಾರದು. ಬಿಜೆಪಿಗೆ ಪ್ರಮಾಣಿಕ ಬದ್ದತೆ ಇದೆ. ಹಿಂದುಳಿದ ವರ್ಗಕ್ಕೆ ಸಂವಿಧಾನ ಬದ್ದತೆ ಕೊಟ್ಟಿದ್ದು ಬಿಜೆಪಿ ಸರ್ಕಾರವಿದೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ನಮಗೆ ಅನುಮಾನವಿದೆ. ನಿಮ್ಮ ಸರ್ಕಾರ ಭ್ರಷ್ಟಾಚಾರ ಮುಚ್ಚಿ ಹಾಕಲು ಮೀಸಲಾತಿ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.
ಹಿಂದುಳಿದ ವರ್ಗಗಳಿಗೆ ಸಹ ಒಳ ಮೀಸಲಾತಿ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ. ಎಸ್ಟಿ, ಎಸ್ಸಿ ರೀತಿಯಲ್ಲಿ ಹಿಂದುಳಿದ ವರ್ಗಕ್ಕೆ ಒಳಮೀಸಲಾತಿಯಿಂದ ಬಡವರಿಗೆ ಅನುಕೂಲವಾಗಲಿ. ಮುಸ್ಲಿಂ ಜಾತಿಯಲ್ಲಿ 48 ಜಾತಿಗಳಿವೆ. ಒಳಗಿನ ಜಾತಿಗಳಲ್ಲಿ ಬಡವರಿದ್ದು ಅವರಿಗೆ ಸಹ ಒಳ ಮೀಸಲಾತಿ ಜಾರಿಯಾಗಲಿ.ಆರ್ಥಿಕ, ಶೈಕ್ಷಣಿಕ ಮೀಸಲಾತಿ ಜಾರಿಯಾಗಲಿ.ಹಿಂದೂಗಳಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದರೆ ಬಿಜೆಪಿ ಎಂದು ಕ್ಷಮಿಸುವುದಿಲ್ಲ. ವಾಲ್ಮೀಕಿ ಹಗರಣದಲ್ಲಿ ಇಡಿ ದಾಖಲೆ ಹೊರ ತಂದಿದ್ದು ಮಾಜಿ ಸಚಿವ ನಾಗೇಂದ್ರ ಅಪ್ತ ವಿಜಯಕುಮಾರ್ ಮೊಬೈಲ್ನಲ್ಲಿ ಇರುವ ದಾಖಲೆ ಮೂಲಕ ಬಯಲಾಗಿದೆ. ಎಸ್ಐಟಿ ಕೇಸ್ನಲ್ಲಿ ನಾಗೇಂದ್ರ ಮತ್ತು ಬಸವನಗೌಡ ದದ್ದಲ್ ಹೆಸರು ದಾಖಲು ಮಾಡಿಲ್ಲ. ಮಹರ್ಷಿ ವಾಲ್ಮೀಕಿ ಹಗರಣದ ತನಿಖೆ ಮಾಡಿದ ಎಸ್ ಐ ಟಿ ತಂಡವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣೆಗಾಗಿ ಒಡೆದಾಡುತ್ತಿದ್ದಾರೆ. ಮೊದಲಿನ ಧಮ್ಮು ಹಮ್ಮುನ್ನು ಸಿಎಂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಬ್ರೇಕ್ ಫಾಸ್ಟ್, ಲಂಚ್ ಮಿಟಿಂಗ್, ಡಿನ್ನರ್ ಪಾರ್ಟಿಗಳು ನಡೆಯುತ್ತಿರುವುದು ಸಿಎಂ ಬದಲಾವಣೆ ಭಾಗಗಳೇ ಆಗಿದೆ. ಸಿದ್ದರಾಮಯ್ಯ ಅವರನ್ನು ಯಾರು ಟೀಕೆ ಮಾಡಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ವ್ಯವಸ್ಥೆ ಅಲ್ಲ.ಹರಿಯಾಣದಲ್ಲಿ ಬಿಜೆಪಿ ಗೆದ್ದಿರುವುದು ಇವಿಎಂ ಸರಿ ಇಲ್ಲ ಎನ್ನುತ್ತರಾರೆ, ಆದರೆ ಕಾಂಗ್ರೆಸ್ ಗೆದ್ದರೆ ಮಾತ್ರ ಇವಿಎಂ ಸರಿ ಇದೆ ಎಂಬ ಸಂವಿಧಾನ ವಿರೋಧಿ ನಡವಳಿಕೆ ತೋರಿಸುತ್ತಿದೆ ಎಂದು ರವಿ ತಿಳಿಸಿದರು.
ದಾವಣಗೆರೆ, ಬೆಂಗಳೂರು ನಲ್ಲಿ ಪಾಕಿಸ್ತಾನ ಪ್ರಜೆಗಳು ಪತ್ತೆಯಾಗಿರುವುದು ಆತಂಕದ ಸಂಗತಿಯಾಗಿದೆ. ಭಾರತದ ಆರ್ಥಿಕತೆ ದುರ್ಬಲಗೊಳಿಸಲು ನಕಲಿ ನೋಟು, ಡ್ರಕ್ಸ್ ದಂಧೆ ಪ್ರಕರಣಗಳು ಹೆಚ್ಚುತ್ತಿದೆ. ಕೈಗಾರಿಕೆ ಮತ್ತು ಕಾಫಿ ತೋಟಗಳ ಕೆಲಸಕ್ಕೆ ಬರುತ್ತಿರುವುದು ದೇಶದ ಹಿತ ದೃಷ್ಟಿಯಿಂದ ಅಪಾಯಕಾರಿ ಎಂದರು. ದೇಶದಾದ್ಯಂತ ಎನ್ಆರ್ಸಿನ್ನು ದೇಶದಲ್ಲಿ ನಡೆಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ವಕ್ಫ್ ಆಸ್ತಿ ಯತ್ನಳ್ ಅಪ್ಪನ ಆಸ್ತಿ ಅಲ್ಲ ಎಂದು ಹೇಳಿದ್ದಕ್ಕೆ ಉತ್ತರಿಸಿ ಎಲ್ಲಾವೂ ಸಹ ಸರ್ಕಾರದ ಆಸ್ತಿ ಮತ್ತು ನಮ್ಮ ಪುರಾತನ ಆಸ್ತಿ ಎಂದರು.
ರತನ್ ಟಾಟಾ ಸಾವು ದೇಶಕ್ಕೆ ನಷ್ಟವಾಗಿದೆ. ರತನ್ ಟಾಟಾ ಅವರನ್ನು ಉದ್ಯಮಿ ಸಂತ ಎಂದು ಅವರನ್ನು ಕರೆಯಬಹುದು. ಅವರ ನಮ್ಮನ್ನೆಲ್ಲ ಅಗಲಿರುವುದು ನಮಗೆ ತುಂಬಲಾರದ ನಷ್ಟವಾಗಿದೆ ಎಂದು ಸಿ.ಟಿ.ರವಿಸಂತಾಪವನ್ನು ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಚೆ ಸೌಭಾಗ್ಯ ಬಸವರಾಜನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪತ್, ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಶ್ರೀಮತಿ ಭಾರ್ಗವಿ ದ್ರಾವಿಡ್ ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಇದ್ದರು.