ಚಿತ್ರದುರ್ಗ: ಕೆಲವು ಬಾರಿ ಜನರಿಗೆ ಬಿಜೆಪಿಮಾತು ಇಂಪಾಗಿ ಕೇಳಿಸುತ್ತದೆ ಜನರು ಬಿಜೆಪಿ ಸುಳ್ಳನ್ನು ಬೇಗ ನಂಬುತ್ತಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿ ಎಕ್ಸಪರ್ಟ್ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಈ ಬಾರಿಯೂ ಬಿಜೆಪಿಗರ ಮಾತು ಇಂಪಾಗಿ ಕೇಳಿಸಿದೆ. ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ, ನಾನು ಇರ್ತಾರೆ ಅಂತ ಹೇಳ್ತಿನಿ. ವಿಜಯೇಂದ್ರ ಅವರಿಗೆ ಮಲಗಿದ್ದಾಗ ಕನಸು ಬೀಳುತ್ತದೆ. ಅದನ್ನೆ ನಿಜ ಎಂದು ಎಲ್ರಿಗು ಹೇಳಿಕೊಂಡು ಬರ್ತಾರೆ. ಜಾತಿ ಗಣತಿ ಬಹಳ ದಿನಗಳಿಂದ ಬಾಕಿ ಇತ್ತು. ಯಾವಾತ್ತಿದ್ರು ಅದು ಬರಬೇಕಿತ್ತು. ಇನ್ನು ಮುಡಾ ಕೇಸ್ ಅದರ ಪಾಡಿಗೆ ಅದು ನಡೆಯುತ್ತದೆ. ಬಿಜೆಪಿ ಜೆಡಿಎಸ್ ನ ನೂರಾರು ಹಗರಣಗಳಿವೆ. ಅದರ ಬಗ್ಗೆ ಮಾತಾಡೋಣ ಆಮೇಲೆ ಇದರ ಬಗ್ಗೆ ಮಾತಾಡೋಣ, ಜಾತಿ ಗಣತಿಯನ್ನು ಯಾರು ಓದಿಲ್ಲ. ವರದಿ ಬಂದ ಮೇಲೆ ಏನಿದೆ ಎಂದು ಗೊತ್ತಾಗುತ್ತದೆ. ಒಳ್ಳೆದು ಇದ್ರೆ ಸರಿ, ತಪ್ಪಿದ್ರೆ ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಲಿ, ಜಾತಿ ಗಣತಿ ವರದಿ ಜಾರಿಯಾದ ಮೇಲೆ ತಪ್ಪಿದೆಯೋ ತಪ್ಪಿದೆಯೋ ಎಂದು ಗೊತ್ತಾಗುತ್ತದೆ. ಸತೀಶ್ ಜಾರಕಿಹೊಳಿ ಮತ್ತು ಪರಮೇಶ್ವರ್ ಭೇಟಿ ವೈಯುಕ್ತಿಕ ಸಭೆ ನಡೆಸಿಲ್ಲ. ರಾಜ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ಬಗ್ಗೆ ಚರ್ಚೆ ನಡೆಸಿರಬಹುದು. ಸಿಎಂ ಕುರ್ಚಿ ಖಾಲಿ ಇಲ್ಲ. ದಲಿತ ನಾಯಕರು ಸಾಕಷ್ಟು ಇದ್ದಾರೆ. ಮುಂದಕ್ಕೆ ಅವರು ಸಿಎಂ ಆಗಲಿ, ಮುಂದೆ ಅವ್ರು ದೇಶಕ್ಕೆ ಪ್ರಧಾನಿ ರಾಷ್ಟ್ರಪತಿಯೂ ಆಗಬಹುದು ಎಂದರು. ಇನ್ನು ಹರಿಯಾಣದಲ್ಲಿ ಬಿಜೆಪಿ ಬರಲ್ಲ ಎಂದುಕೊಂಡಿದ್ದೆವು.ನಾವು ಹತ್ತು ವರ್ಷ ಆಡಳಿತದಲಿದ್ದೆವು, ಜನರಿಗೂ ಮೋದಿ ಆಡಳಿತದ ಬಗ್ಗೆ ಬೇಸರವಿದೆ. ಬಿಜೆಪಿ ಮುನ್ನೆಡೆ ಇದ್ದು, ಕಾಂಗ್ರೆಸ್ ಸ್ವಲ್ಪ ಹಿನ್ನಡೆಯಲ್ಲಿದೆ ಎಂದರು. ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ತಿಪ್ಪೇಸ್ವಾಮಿ ಇತರರಿದ್ದರು.