ಕುರಿಗಳ್ಳರನ್ನು ಬಂಧಿಸಿದ ರಾಂಪುರ ಠಾಣೆ ಮೊಳಕಾಲ್ಮೂರು ಪೊಲೀಸರು

ರಾಜ್ಯ

ಮೊಳಕಾಲ್ಮೂರು: ಕುರಿಗಳನ್ನು  ಕಳುವು ಮಾಡಿಕೊಂಡು ಪರಾರಿಯಾಗಿದ್ದ ಕುರಿಗಳ್ಳರನ್ನು‌ ಕುರಿ‌ ಹಾಗೂ ವಾಹನದ ಸಮೇತ ರಾಂಪುರ ಪೊಲೀಸರು ಬಂಧಿಸಿದ್ದಾರೆ.

 

 

ಮೊಳಕಾಲ್ಮೂರಿನ ರಾಮಸಾಗರದ ಸಣ್ಣಗಂಗಪ್ಪ ಕಳೆದ ತಿಂಗಳ 25 ರಂದು ಕುರಿಗಳನ್ನು ಕುರಿ ಹಟ್ಟಿಯಲ್ಲಿ ಕೂಡಿ‌ ರಾತ್ರಿ ಮಲಗಿದ್ದಾಗ ಕುರಿಗಳ್ಳರು ಒಮಿನಿ‌ಯಲ್ಲಿ 12 ಕುರಿಗಳನ್ನು‌ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ರಾಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಪತ್ತೆಗೆ ಎಸ್ಪಿ ರಂಜಿತ್ ಕುಮಾರ್ ‌ಬಂಡಾರು, ಎಎಸ್ ಸ್ಪಿ ಕುಮಾರಸ್ವಾಮಿ, ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಹಾಗೂ ಮೊಳಕಾಲ್ಮೂರು ಸಿಪಿಐ ವಸಂತ್ ವಿ‌ ಅಸೋದೆ ಮಾರ್ಗದರ್ಶ‌ನದಲ್ಲಿ ಒಂದು ತಂಡವನ್ನು ರಚಿಸಿದ್ದು, ತಂಡವು ದಾವಣಗೆರೆ ಹೊರ ವಲಯದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ಅವರಿಂದ 80 ಸಾವಿರ ಮೌಲ್ಯದ 12 ಕುರಿಗಳು ಹಾಗೂ ಮಾರುತಿ‌ ಒಮಿನಿಯ‌ನ್ನು‌ ವಶಕ್ಕೆ ‌ಪಡೆದಿದ್ದಾರೆ. ನಂತರ ಅವರನ್ನು ನ್ಯಾಯಾಲಯದ ಮುಂದೆ‌ ಹಾಜರು ಪಡಿಸಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *