ಉತ್ತಮ ಆರೋಗ್ಯ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಜಿ. ಪಂ.ಸಿ ಇ ಒ
ಚಿತ್ರದುರ್ಗ ಜಿಲ್ಲೆಯು ಬರಪೀಡಿತ ಮತ್ತು ಅತೀ ಹೆಚ್ಚು ಎಸ್. ಸಿ ಮತ್ತು ಎಸ್. ಟಿ ಹಾಗೂ ಹಿಂದುಳಿದ ವರ್ಗಗಗಳಿರುವ ಜಿಲ್ಲೆಯಾಗಿದ್ದು, ಅವರನ್ನು ಅಲೆದಾಡಿಸದೇ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಸಮುದಾಯ ಆರೋಗ್ಯಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿ ಪಂ ನ ಸಿಇಒ ಎಸ್. ಜೆ. ಸೋಮಶೇಖರ್ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಚಿತ್ರದುರ್ಗ ಮತ್ತು ಕಾವೇರಿ ಆಸ್ವತ್ರೆ. ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ, ಸ್ಟ್ರೋಕ್, ಸಿ ಪಿ ಆರ್ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತಾಡುತ್ತಾ, ಗ್ರಾಮೀಣ ಭಾಗದಲ್ಲಿ ಹಾವು, ನಾಯಿಗಳ ಕಡಿತ,ಇತರೇ ಕಾಯಿಲೆಗಳು,
ಅಪಘಾತಗಳು, ಹಾಗು ಪಾರ್ಶ್ವವಾಯುವಾದಾಗ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ. ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದಂತಾಗುವುದು,
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ
ಎದೆ ನೋವು,ಉಸಿರಾಟದ ತೊಂದರೆ ದೇಹದ ವಿವಿಧ ಕಾಯಿಲೆಗಳ ಬಗ್ಗೆ ಹಾಗೂ ತುರ್ತು ಚಿಕಿತ್ಸೆಗಳಲ್ಲಿ ಎಚ್ಚರ ವಹಿಸಿ ಚಿಕಿತ್ಸೆ ನೀಡುವ ಬಗ್ಗೆ ಈ ತರಬೇತಿ ಕಾರ್ಯಗಾರದಲ್ಲಿ ತರಬೇತುದಾರರು ವಿವರವಾಗಿ ತಿಳಿಸಲಿದ್ದಾರೆ. ತರಬೇತಿ ಪಡೆದ ನಂತರ ತಾವುಗಳು ಸಮುದಾಯದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ನಿಮ್ಮಗಳ ಕರ್ತವ್ಯ ಎಂದು ಕಿವಿ ಮಾತು ಹೇಳಿದರು. ಕಾರ್ಯಗಾರದಲ್ಲಿ ಡಿ ಹೆಚ್ ಒ ಡಾ.ರೇಣು ಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿ ಮಠ, ಬೆಂಗಳೂರು ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಸುರೇಂದ್ರ ಸಂಪತ್, ಕಾವೇರಿ ಆಸ್ಪತ್ರೆ ನ್ಯೂರೋಲಾಜಿಸ್ಟ್ ಡಾ. ಹೆಚ್. ಸಂತೋಷ್ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.