ರೂ. 5 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ನವೀಕರಣ:
ಚಿತ್ರದುರ್ಗ: .5 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳ ನವೀಕರಣ ಕಾರ್ಯಕೈಗೊಳ್ಳಲಾಗುತ್ತದೆ. 5 ರಿಂದ 6 ತಿಂಗಳಲ್ಲಿ ನವೀಕರಣ ಪೂರ್ಣಗೊಳಲ್ಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್ಪಿ ರವೀಂದ್ರ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಹೆಚ್ಚುವರಿಯಾಗಿ 32 ಬೆಡ್ ಸ್ಪೆಷಲ್ ವಾರ್ಡಗಳು ಸಿದ್ದಪಡಿಸಲಾಗಿದೆ. 10 ರಿಂದ 12 ಲಕ್ಷ ವೆಚ್ಚದಲ್ಲಿ ಫಿಜಿಯೋತೆರಪಿ ಉಪಕರಣಳನ್ನು ಖರೀದಿಸಿ, ಉಚಿತವಾಗಿ ಫಿಜಿಯೋತೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ನಿಮ್ಹಾಸ್ ಸಹಯೋಗದಲ್ಲಿ ಕರ್ನಾಟಕ ಬ್ರೈನ್ ಹೆಲ್ತ್ ಇನ್ಸಿಯೇಟ್ (ಕಬಿ) ಕಾರ್ಯಕ್ರಮ ಜಿಲ್ಲಾ ಆಸ್ಪತ್ರೆಯಲ್ಲಿ ಶುರು ಮಾಡಲಾಗಿದೆ. 1040 ನರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತಿ ಶುಕ್ರವಾರ ನಿಮ್ಹಾಸ್ ನರರೋಗ ತಜ್ಞ ಡಾ.ಕಿರಣ್‌ಗೌಡ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವರು. ದಾವಣಗೆರೆ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ತಪಾಸಣೆ ಚಿಕಿತ್ಸೆ ನೀಡಲಾಗುತ್ತಿದೆ. 10 ಬೆಡ್‌ಗಳ ಕಿಮೋ ಥೆರಪಿ ಚಿಕಿತ್ಸೆ ಕೇಂದ್ರ ಸ್ಥಾಪನೆಯಾಗಿದೆ. ಇಂಡಿಯಾ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಪ್ರತಿ ಗುರುವಾರ 30 ರಿಂದ 40 ಹೃದಯ ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ಈ ಎಲ್ಲಾ ನೂತನ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗಿವೆ.
5454 ಯನಿಟ್ ರಕ್ತ ಸಂಗ್ರಹ:
ನವೀಕರಣ ಪರವಾನಿಗೆ ಕಾರಣದಿಂದ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಕಾಯಾಚರಣೆ ಸ್ಥಗಿತಗೊಳ್ಳುವ ಸಂಭವ ಉಂಟಾಗಿತ್ತು. ಇದನ್ನು ಸರಿಪಡಿಸಿ ನವೀಕರಣ ಪರವಾನಿಗೆ ಪಡೆಯಲಾಗಿದೆ. ರಕ್ತ ನಿಧಿ ಕೇಂದ್ರಕ್ಕೆ ವಾರ್ಷಿಕವಾಗಿ 5760 ಯನಿಟ್ ರಕ್ತ ಸಂಗ್ರಹದ ಗುರಿ ನೀಡಲಾಗಿತ್ತು. 50 ರಕ್ತದಾನ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನಿಗಳ ನೆರವಿನಿಂದ ಇದರುವರೆಗೂ 5454 ಯನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಹೀಗೆ ಸಂಗ್ರಹಿಸಿದ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಬಳಸಲಾಗಿದೆ.
ಜಿಲ್ಲಾ ಆಸ್ಪತ್ರೆಯ ಹಳೆಯ ತಾಯಿ ಮತ್ತು ಮಗು ಆರೈಕೆ ಕೇಂದ್ರದಲ್ಲಿ 50 ರಿಂದ 60 ಲಕ್ಷ ವೆಚ್ಚದಲ್ಲಿ ನೂತನ ರಕ್ತ ನಿಧಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸ್ಥಳಾಂತರಕ್ಕೆ ಅನುಮತಿ ದೊರೆತ ತಕ್ಷಣವೇ ನೂತನ ರಕ್ತ ನಿಧಿ ಕೇಂದ್ರ ಕಾರ್ಯಾರಂಭ ಮಾಡಲಿದೆ. ಹಳೆಯ ರಕ್ತ ನಿಧಿ ಕೇಂದ್ರದ ಜಾಗವನ್ನು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನೀಡಲಾಗುವುದು ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ರವೀಂದ್ರ ಮಾಹಿತಿ ನೀಡಿದರು.
ತಿಂಗಳಿಗೆ 98 ರೋಗಿಗಳಿಗೆ ಡಯಾಲಿಸಿಸ್ :
ಈ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಕಿಡ್ನಿ ವೈಪಲ್ಯಗೊಂಡ 50 ರಿಂದ 60 ರೋಗಿಗಳಿಗೆ ಡಯಾಲಿಸ್ ಮಾಡಲಾಗುತ್ತಿತ್ತು. ಈ ಪ್ರಮಾಣ ತಿಂಗಳಿಗೆ 98 ಏರಿಕೆಯಾಗಿದೆ. ಡಯಾಲಿಸಿಸ್ ಕೇಂದ್ರದ ಕಾರ್ಯಕ್ಷಮತೆಯಲ್ಲಿ ದ್ವಿಗುಣಗೊಳಿಸಲಾಗಿದೆ. ಸದ್ಯ 15 ಡಯಾಲಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ತಿಂಗಳಿಗೆ 345 ಸೈಕಲ್‌ಗಳಷ್ಟು ಮಾತ್ರ ಡಯಾಲಿಸ್ ನಡೆಸಲಾಗುತ್ತು. ಈ ಪ್ರಮಾಣ 900 ಸೈಕಲ್‌ಗಳಿಗೆ ಏರಿಕೆಯಾಗಿದೆ. ಡಯಾಲಿಸಿಸ್‌ಗೆ ಏಕ ಬಳಕೆಯ ಡಯಾಲಿಸರ್‌ಗಳನ್ನು ಬಳಸುತ್ತಿದ್ದು, ರೋಗಿಗಳ ಆರೋಗ್ಯದ ಕಾಳಜಿ ವಹಿಸಲಾಗುತ್ತಿದೆ. ಸದ್ಯ ರೋಗಿಗಳು ಡಯಾಲಿಸಿಸ್ ಕಾಯುವ ಪರಿಸ್ಥಿತಿಯಿಲ್ಲ. ಡಯಾಲಿಸಿಸ್ ಸಂಪೂರ್ಣ ಉಚಿತವಾಗಿದೆ.
ಬಲಗೊಂಡ ಎಕ್ಸರೇ ಹಾಗೂ ಸ್ಕಾö್ಯನಿಂಗ್ ವಿಭಾಗ :
ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ವಿಭಾಗದಿಂದ ಒಂದು ವರ್ಷ ಅವಧಿಯಲ್ಲಿ 31,996 ಎಕ್ಸ್ ರೇಗಳನ್ನು ತೆಗೆಯಲಾಗಿದೆ. ಪ್ರತಿದಿನ ನೂರಾರು ರೋಗಿಗಳಿಗೆ ಉಚಿತವಾಗಿ ಎಕ್ಸ್ ರೇ ಸೌಲಭ್ಯ ಒದಗಿಸಲಾಗುತ್ತದೆ. ಆಸ್ಪತ್ರೆಯ ಎಂಆರ್‌ಐ ಸ್ಕಾö್ಯನಿಂಗ್ ವಿಭಾಗದಲ್ಲಿ ಅನಾವಶ್ಯಕವಾಗಿ ಸ್ಕಾö್ಯನಿಂಗ್ ನಡೆಸಲಾಗುತ್ತಿತ್ತು. ಇದರಿಂದ ಅಗತ್ಯ ರೋಗಿಗಳಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಇದನ್ನು ತಡೆಗಟ್ಟಲಾಗಿದೆ. ಇದರಿಂದ ರೋಗಿಗಳಿಗೆ ಒಂದು ದಿನಗ ಒಳಗೆಯೇ ಸ್ಕಾö್ಯನಿಂಗ್ ಲಭ್ಯವಾಗಿದೆ. ತಲೆಗಾಯ, ಪಾರ್ಶ್ವವಾಯು, ಕ್ಯಾನ್ಸರ್ ಸೇರಿಂದತೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತಾಗಿ ಎಂಆರ್‌ಐ ಸ್ಕಾö್ಯನಿಂಗ್ ನಡೆಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ 60 ರಿಂದ 70 ಅಲ್ಟಾç ಸೌಂಡ್ ಸ್ಕಾö್ಯನಿಂಗ್ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಲ್ಲಿ 900 ಅಲ್ಟಾç ಸೌಂಡ್ ಸ್ಕಾö್ಯನಿಂಗ್ ನಡೆಸಲಾಗುತ್ತಿದೆ. ಒಬ್ಬ ರೆಡಿಯೋಲಾಜಿಸ್ಟ್ಗಳ ಕೊರತೆ ಇರುವ ಕಾರಣದಿಂದ ಬಸವೇಶ್ವರ ಹಾಗೂ ಸತ್ಯ ಕ್ಲಿನಿಕ್‌ಗಳಲ್ಲಿ ಒಪ್ಪಂದ ಮಾಡಿಕೊಂಡು ಸರ್ಕಾರಿ ದರಗಳಲ್ಲಿ ಸ್ಕಾö್ಯನಿಂಗ್ ನಡೆಸಲಾಗುತ್ತಿದೆ. ಪ್ರತಿದಿನ 25ಕ್ಕೂ ಹೆಚ್ಚಿನ ಸಿಟಿ ಸ್ಕಾö್ಯನಿಂಗ್ ನಡೆಸಲಾಗುತ್ತಿದೆ. ಈ ಮೊದಲು ಜಿಲ್ಲಾ ಆಸ್ಪçತೆಯಲ್ಲಿ ತಿಂಗಳಿಗೆ 15 ರಿಂದ 20 ಸಾವಿರ ರಕ್ತ ಪರೀಕ್ಷೆ ನಡೆಸಲಾಗುತ್ತು. ಈ ಪ್ರಮಾಣ 65 ರಿಂದ 70 ಸಾವಿರಕ್ಕೆ ಏರಿಕೆಯಾಗಿದೆ. ರಕ್ತ ಪರೀಕ್ಷೆ ಕೇಂದ್ರವು 24*7 ಕೆಲಸ ನಿರ್ವಹಿಸುತ್ತಿದೆ.
ನೀಗಿದ ಸಿಬ್ಬಂದಿ ಕೊರತೆ:
ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಳಲ್ಲಿ ತಜ್ಞವೈದ್ಯರನ್ನು ನೇಮಕ ಮಾಡಲಾಗಿದೆ. ಯಾವುದೇ ವೈದ್ಯರ ಕೊರತೆಯಿಲ್ಲ. 38 ಹೆಚ್ಚುವರಿ ಶೂಶ್ರಷಕರನ್ನು ಒಂದು ವರ್ಷದ ಅವಧಿಯಲ್ಲಿ ನೇಮಕ ಮಾಡಲಾಗಿದೆ. ಇದರಿಂದ 98 ಇದ್ದ ಶೂಶ್ರುಷಕರ ಸಂಖ್ಯೆ 136ಕ್ಕೆ ಹೆಚ್ಚಳವಾಗಿದೆ. 240 ಪ್ಯಾರಮೆಡಿಕಲ್, 30 ಕಿರಿಯ ಆರೋಗ್ಯ ಸಹಾಯಕರು, 60 ಜೆಎನ್‌ಎಂ, 240 ಬಿಎಸ್ಸಿ ನರ್ಸಿಂಗ್, 30 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆ ವೈದ್ಯರೊಂದಿಗೆ ಸಾರ್ವಜನಿಕ ಸೇವೆಟೊಂಕ ಕಟ್ಟಿ ನಿಂತಿದ್ದಾರೆ.
ಸ್ವಚ್ಛತೆಗೆ 75 ಮಾರ್ಕ್ಸ್ :
ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಿನಕ್ಕೆ ಮೂರು ಬಾರಿ ಸ್ವಚ್ಚತಾಕಾರ್ಯ ನಡೆಸಲಾಗುತ್ತಿದೆ. ಕೊಪ್ಪಳ ಆಸ್ಪತ್ರೆಯಿಂದ ಬಂದ ತಂಡ ಜಿಲ್ಲಾ ಆಸ್ಪತ್ರೆಯ ಸ್ವಚ್ಚತೆ 75 ಮಾರ್ಕ್ಸ್ ನೀಡಿದೆ. ಇದರಿಂದ ರಾಜ್ಯದಲ್ಲಿ ಸ್ವಚ್ಚತೆ ಕಾಯ್ದುಕೊಂಡ ಕೆಲವೇ ಆಸ್ಪತ್ರೆಗಳ ಸಾಲಿಗೆ ಜಿಲ್ಲಾ ಆಸ್ಪತ್ರೆ ಸೇರ್ಪಡೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಸ್ವಚ್ಚತೆಗೆ ಹೆಸರುವಾಸಿಯಾಗುವ ಬಲವಾದ ನಿರೀಕ್ಷೆ ಮೂಡಿಸಿದೆ. ಇದರೊಂದಿಗೆ ಜಿಲ್ಲಾ ಆಸ್ಪತ್ರೆ ವೈದ್ಯರು ಹೊರ ಔಷಧ ಅಂಗಡಿಗಳಿಗೆ ಚೀಟಿ ಬರದು ಕೊಡುವುಕ್ಕೆ ವಿರಾಮ ನೀಡಿದ್ದಾರೆ. ಈ ಕುರಿತು ಪರಿಶೀಲನೆ ಆಗಮಿಸಿದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಹ ಮಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ಸುಧಾರಣೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಉತ್ತಮ ಸೇವೆ ನೀಡಲಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ಆಗಮಿಸುವಾಗ ತಪ್ಪದೇ ಆಧಾರ್ ಹಾಗೂ ಪಡಿತರ ಚೀಟಿಯನ್ನು ತರಬೇಕು. ಆಸ್ಪತ್ರೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಹಣವನ್ನು ನೀಡಬಾರದು. ಯಾವುದೇ ತೊಂದರೆಯಾದಲ್ಲಿ ದೂರವಾಣಿ ಅಥವಾ ನೇರವಾಗಿ ತಮ್ಮನ್ನು ಭೇಟಿಯಾಗುವಂತೆ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.