ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗ್ರಾಮಾಡಳಿತಾಧಿಕಾರಿಗಳು

ರಾಜ್ಯ

ಚಿತ್ರದುರ್ಗ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮಾಡಳಿತಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಅನಿರ್ಧಿಷ್ಟ ಅವಧಿ ಧರಣಿಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ವೃತ್ತದಲ್ಲಿ ನಡೆಸಿದರು.ನಿ‌ನ್ನೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಧರಣಿಯನ್ನು ನಡೆಸಲಾಗಿತ್ತು. ಇಂದಿನಿಂದ ಚಿತ್ರದುರ್ಗದಲ್ಲಿ ಆರಂಭಿಸಲಾಗಿದೆ. ಇದೇ ಸಮಯದಲ್ಲಿ ಮಾತಾಡಿದ, ಗ್ರಾಮಾಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಮಾತಾಡುತ್ತಾ, ಕಂದಾಯ ಇಲಾಖೆಯಿಂದ ಅಭಿವೃದ್ದಿಪಡಿಸಿರುವ 21 ತತ್ರಾಂಶಗಳ ಮೂಲಕ ನಾವೆಲ್ಲಾ ಕರ್ತವ್ಯ ನಿರ್ವಹಿಸುತ್ತಿದ್ದು,ಸಿ ವೃಂದದ ನೌಕರರಿಗಿಮನದ ಹೆಚ್ಚು ಕೆಲಸ ಹಾಗು ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಇದರಿಂದ ನಮ್ಮ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡಬೇಕು.ಮೂಲ ಭೂತ ಸೌಕರ್ಯ ಒದಗಿಸಬೇಕು.ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸಬೇಕು.ಪ್ರೋಟೋಕಾಲ್ ಕೆಲಸದಿಂದ ಗ್ರಾಮಾಡಳಿತ ಅಧಿಕಾರಿಗಳಿಗೆ ಕೈ ಬಿಡುವಂತೆ ಆದೇಶಿಸಬೇಕು.ದಫ್ತರ್ ಹಾಗು ಜಮಾಬಂಧಿ ರದ್ದು ಪಡಿಸಬೇಕು. ಅನ್ಯ ಇಲಾಖೆ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡಬೇಕು.ಹಾಲಿ ರ್ಯಾಂಕಿಂಗ್ ವ್ಯವಸ್ಥೆ ರದ್ದು ಪಡಿಸಬೇಕು.ಮ್ಯುಟೇಶನ್ ಅವಧಿ ಹೆಚ್ಚಿಸಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನ ಧರಣಿಯಲ್ಲಿ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಮುದ್ದಜ್ಜಿ, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಎನ್ ಜೆ ತಾಯಕ್ಕ, ಉಪಾಧ್ಯಕ್ಷ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇರ್ಫಾನ್ ಖಜಾಂಚಿ ಎಚ್ ಡಿ ಶ್ರೀನಿವಾಸ್ ಹಾಗು ಹಾಗೂ ಗೌರವಾಧ್ಯಕ್ಷರಾದ ಪಾಂಡುರಂಗಪ್ಪ, ಕಂದಾಯ ನೌಕರರ ಜಿಲ್ಲಾಧ್ಯಕ್ಷರು ಬಿಎಸ್ ಸಿದ್ದೇಶ್, ತಾಲೂಕು ಅಧ್ಯಕ್ಷರಾದ ಸಂಪತ್ ಕುಮಾರ್, ಗಂಗಾಧರ ಪ್ರಕಾಶ ಎಂ ಡಿ ಎಸ್ ವಾಲಿಕಾರ್ ಹರೀಶ್ ಗಂಗಾಧರ್ ಬಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *