ಭಾರತದ ಆರ್ಥಿಕ ಉನ್ನತಿಯಲ್ಲಿ ಎಂ.ಎಸ್.ಎಂ.ಇ. ಪಾತ್ರ ಬಹಳ ಮುಖ್ಯ : ಸಂಸದ ಗೋವಿಂದ ಕಾರಜೋಳ 

ರಾಜ್ಯ

ಭಾರತದ ಆರ್ಥಿಕ ಉನ್ನತಿಯಲ್ಲಿ ಎಂ.ಎಸ್.ಎಂ.. ಪಾತ್ರ ಬಹಳ ಮುಖ್ಯ : ಸಂಸದ ಗೋವಿಂದ ಕಾರಜೋಳ 

21 ನೇ ಶತಮಾನದ ಭಾರತವು ಯಾವುದೇ ಎತ್ತರವನ್ನು ಸಾಧಿಸುವುದಾದರೂ ಅದು ಸೂಕ್ಷ್ಮ, ಸಣ್ಣ ಮತ್ತು  ಮಧ್ಯಮ ಕೈಗಾರಿಕೆಗಳ ಯಶಸ್ಸಿನ ಮೇಲೆ ಅವಲಂಭಿತವಾಗಿರುತ್ತದೆ, ನಮ್ಮ ದೇಶದ ರಫ್ತು ಪ್ರಮಾಣ ಹೆಚ್ಚಾಗಲು ಮತ್ತು ಭಾರತದ ಉತ್ಪನ್ನಗಳು ಹೊಸ ಮಾರುಕಟ್ಟೆಗಳನ್ನು ತಲುಪಲು ಭಾರತದ ಎಂ.ಎಸ್.ಎಂ.. ವಲಯ ಬಲಿಷ್ಟವಾಗಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಚಿತ್ರದುರ್ಗದ ಜೈಲುರಸ್ತೆಯಲ್ಲಿರುವ ಕೆ...ಡಿ.ಬಿ ಕೈಗಾರಿಕಾ ವಲಯದಲ್ಲಿರುವ ಕೇಂದ್ರ ಸರ್ಕಾರದ ಎಂ.ಎಸ್.ಎಂ. ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ  ನಡೆಯುತ್ತಿರುವ ಕೇಂದ್ರೀಯ ಹಂಜಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದ ಅವರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರತದ ಬೆಳವಣಿಗೆಯ ಪ್ರಯಾಣದ ಬಹುದೊಡ್ಡ ಆಧಾರಸ್ಥಂಭವಾಗಿದೆ ವಲಯವು ಭಾರತದ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ವಲಯವನ್ನು ಬಲಪಡಿಸುವುದು ಇಡೀ ಸಮಾಜವನ್ನು ಬಲಪಡಿಸಿದಂತಾಗುತ್ತದೆ, ಕಾರಣದಿಂದಾಗಿಯೇ ಮೋದಿಜಿ ನೇತೃತ್ವದ ನಮ್ಮ ಸರ್ಕಾರದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿ ವಲಯವನ್ನು ನೋಡುತ್ತಿದೆ  ಎಂದರು. ವಲಯವನ್ನು ಬಲಪಡಿಸಲು ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಗ್ರಪಾಲನ್ನು ಒದಗಿಸುತ್ತಿದೆ. ಸುಮಾರು 11 ಕೋಟಿಗೂ ಹೆಚ್ಚು ಜನರು ವಲಯದೊಂದಿಗೆ ಸಂಪರ್ಕ ಹೊಂದಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ವಲಯವನ್ನು ಉತ್ತೇಜಿಸುವ ಸಲುವಾಗಿ ಅನೇಕ ರಿಯಾಯಿತಿ ಯೋಜನೆಗಳನ್ನು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯ ಮೂಲಕ ನೀಡಿದ್ದರ ಪರಿಣಾಮವಾಗಿ ವಲಯ ಈಗ ಚೇತರಿಸಿಕೊಂಡಿದೆ ಎಂದರು.

 

 

  ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದ ಚಿತ್ರದುರ್ಗ ಮತ್ತು ಕೇರಳದಲ್ಲಿ ಮಾತ್ರ ಕೇಂದ್ರೀಯ ಹಂಜಿ ಕಾರ್ಯಾಗಾರಗಳು ಕಾರ್ಯನಿರ್ವಹಿಸುತ್ತಿವೆಚಿತ್ರದುರ್ಗದ ಹಂಜಿ ಕಾರ್ಯಾಗಾರದಲ್ಲಿ ಸುಮಾರು 90 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಸುಮಾರು 5 ಎಕರೆ ಪ್ರದೇಶದಲ್ಲಿ 1995 ರಲ್ಲಿ ಪ್ರಾರಂಭವಾದ ಘಟಕ ಪ್ರಸ್ತುತ ಪ್ರತಿ ವರ್ಷ 18-20 ಕೋಟಿ ವಹಿವಾಟು ಹೊಂದಿದೆ ಎಂದು ಪ್ರೊಡಕ್ಷನ್ ಉಸ್ತುವಾರಿ ರಮೇಶ್ ಸಂಸದರಿಗೆ ಮಾಹಿತಿ ನೀಡಿದರು. ಇಲ್ಲಿ ತಯಾರಾಗುವ ಖಾದಿ ಕಚ್ಚಾವಸ್ತು ಕರ್ನಾಟಕ, ಆಂದ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ವಿತರಣೆಯಾಗುತ್ತದೆ. ನಮ್ಮ ದೇಶದ ತ್ರಿವರ್ಣ ಧ್ವಜ ತಯಾರಾಗುವ ಗರಗ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿಯ ಬೆಂಗೇರಿಗೂ ಸಹ ಇಲ್ಲಿಂದಲೇ ಖಾದಿ ನೂಲು ಸರಬರಾಜಾಗುತ್ತದೆ ಎಂದರು.

ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನಿವೃತ್ತಿ ವೇತನ ಇಲ್ಲ, ಇನ್ನುಳಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಸಿಬ್ಬಂದಿಗಳು ಸಂಸದರಿಗೆ ವಿವರಿಸಿದರು. ಇನ್ನುಳಿದಂತೆ ಇಲ್ಲಿ ಕೆಲಸ ಮಾಡುವ ನಾವು ರಾತ್ರಿ ಪಾಳದಲ್ಲಿ ಕೂಡ ಕೆಲಸ ಮಾಡುತ್ತಿದ್ದೇವೆ. ನಮಗೆ ಸಿಗಬೇಕಾದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ದೊರೆತದ್ದೇ ಆದರೆ ಇನ್ನೂ ಹುಮ್ಮಸ್ಸಿನಿಂದ ಕೆಲಸ ಮಾಡಲು ನಾವು ಸಿದ್ದರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರನ್ನು ಒಂದು ಬಾರಿ ಘಟಕಕ್ಕೆ ಕರೆತರುತ್ತೇನೆ, ಘಟಕವನ್ನು ಇನ್ನಷ್ಟು ಮೇಲ್ದರ್ಜೇಗೇರಿಸಲು ಅಗತ್ಯವಾದ ಕ್ರಮವನ್ನು ತಗೆದುಕೊಳ್ಳಲು ನಾನು ಅವರ ಮನವೊಲಿಸುತ್ತೇನ ಎಂದರು. ಇದೇ ಸಮಯದಲ್ಲಿ ಸಿಬ್ಬಂದಿಗಳ ಬೇಡಿಕೆಗಳೇನಾದರು ಇದ್ದಲ್ಲಿ ಅವರ ಗಮನಕ್ಕೆ ತರೋಣ ಎಂದರು.

ಸಂಸದರ ಜೊತೆ ಕೇಂದ್ರೀಯಾ ಹಂಜಿ ಕಾರ್ಯಾಗಾರದ ಪ್ರೊಡಕ್ಷನ್ ಉಸ್ತುವಾರಿ ರಮೇಶ್, ಹಂಜಿ ಕಾರ್ಯಾಗಾರದ ಸಹಾಯಕ ನಿರ್ದೇಶಕರು, ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *