ಮೈಸೂರು ವಿವಿಯ ಡಾ.ಬಿ.ಆರ್.‌ ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸೋಮಶೇಖರ್ ರನ್ನು ಅಮಾನತು ಮಾಡಿ

ರಾಜ್ಯ

ಮೈಸೂರು ವಿವಿಯ ಡಾ.ಬಿ.ಆರ್.‌ ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸೋಮಶೇಖರ್ ರನ್ನು
ಅಮಾನತು ಮಾಡುವಂತೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿ ಹೆಚ್ ಮೋಹನ್ ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಮೈಸೂರು
ವಿಶ್ವವಿದ್ಯಾನಿಲಯಗಳಲ್ಲಿರುವ, ಡಾ. ಬಿ. ಆರ್ ಅಂಬೇಡ್ಕರ್ ಪೀಠಗಳ ಕ್ರಿಯಾಶೀಲತೆ ಆಯೋಜಿಸುವ ವಿಚಾರಗೋಷ್ಠಿಗಳ ಮೂಲಕ ವ್ಯಕ್ತವಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್ ಅಂಬೇಡ್ಕರ್ ಪೀಠ ಇದೇ ಆಗಸ್ಟ್ 17 ರಂದು ಆಯೋಜಿಸಿದ್ದ ಒಳಮೀಸಲಾತಿ ಕುರಿತ ವಿಚಾರಗೋಷ್ಠಿ ಭಿನ್ನ ಕಾರಣಕ್ಕೆ ಗಮನ ಸೆಳೆದಿದೆ. ಈ ವಿಚಾರಗೋಷ್ಠಿಯನ್ನು ಆಯೋಜಿಸಿದವರು ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ್ನು ವಿರೋಧಿಸಿ, ಅಭಿಪ್ರಾಯ ಸಂಗ್ರಹಿಸಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಗೋಷ್ಠಿಯ ವಿಚಾರ ಪ್ರತಿಪಾದಕರೆಲ್ಲ ಒಳಮೀಸಲಾತಿಯನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಹೈದರಾಬಾದಿನಿಂದ ಬಂದಿದ್ದ ಡಾ. ವೈ ಚಿನ್ನಾರಾವ್ ಚನೈನಿಂದ ಬಂದಿದ್ದ ಪ್ರೊ. ಎಲ್ ಜವಹರ್ ಜೀಸನ್ ಇಬ್ಬರು‌ ಒಳ ಮೀಸಲಾತಿ ವಿರೋಧಿಸಿದ್ದರು. ಉಳಿದ ಆಹ್ವಾನಿತರೂ ಸುತ್ತಿ ಬಳಸಿ ಅದನ್ನು ಹೇಳಿದ್ದರು. ಮಾದಿಗ ಸಮಾಜ ಕಳೆದ ಮೂರು ದಶಕಗಳಿಂದ ಕರ್ನಾಟಕದಲ್ಲಿ ಹೋರಾಟವನ್ನು ಮುನ್ನಡೆಸುತ್ತಿದೆ. ಮಾದಿಗ ಸಮಾಜದ ಒಬ್ಬ ಪ್ರಾಧ್ಯಾಪಕ, ಚಿಂತಕರನ್ನೂ ಕರೆಯದೇ ಒಳಮೀಸಲಾತಿಯ ಗೋಷ್ಠಿಗಳನ್ನು ಆಯೋಜಿಸಿರುವುದರ ಹಿಂದೆ ಸ್ಪಷ್ಟವಾದ ರಾಜಕೀಯ ಚಿತಾವಣೆ ಇದ್ದಂತೆ ಕಾಣಿಸುತ್ತದೆ. ಡಾ. ಅಂಬೇಡ್ಕರ್ ಪೀಠದ ನಿರ್ದೇಶಕರಾದ ಡಾ. ಜೆ ಸೋಮಶೇಖರ್ ಕಾರ್ಯಕ್ರಮದ ಆರಂಭದಲ್ಲಿ‌ಮಾತಾಡಿ, ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಭಾರತ ಬಂದ್ ಕರೆಕೊಡಲಾಗಿತ್ತು. ಅದಕ್ಕೆ ಉತ್ತರ ಭಾರತದಲ್ಲಿ ಸಿಕ್ಕ ಪ್ರತಿಕ್ರಿಯೆ ನೋಡಿ ನಾವೂ ರಚನಾತ್ಮಕವಾಗಿ ಸ್ಪಂದಿಸಬೇಕೆನಿಸಿತು. ಹಾಗಾಗಿ ಈ ಗೋಷ್ಠಿಗಳನ್ನು ಆಯೋಜಿಸಿದ್ದೇವೆ ಎಂದಿದ್ದರು. ನಿರ್ದೇಶಕರ ಈ ಧ್ವನಿ ಏನನ್ನು ಸೂಚಿಸುತ್ತದೆ? ಸುಪ್ರೀಂಕೋರ್ಟಿನ ಏಳು ಸದಸ್ಯರ ಸಂವಿಧಾನ ಪೀಠದ ಬಗ್ಗೆ ಸರ್ಕಾರಿ ಅನುದಾನ‌ ಬಳಿಸಿ, ಈ ರೀತಿಯ ಏಕಪಕ್ಷೀಯ ವಿಚಾರಗೋಷ್ಠಿಗಳನ್ನು ಆಯೋಜಿಸುವುದು ಎಷ್ಟು ಸರಿ? ಪರಿಶಿಷ್ಟ ಜಾತಿಗಳನ್ನು ಎತ್ತಿಕಟ್ಟುವ ಉಸಾಬರಿ ಈ ಪೀಠಕ್ಕೆ ಬೇಕೆ? ಬಾಬಾಸಾಹೇಬರ ಸಹಬಾಳ್ವೆಯ ಆಶಯವನ್ನು ತೆಳುವಾಗಿ ಮುಗಿಸುವ ಇಂತಹ ಆಯೋಜಕ ಪ್ರಾಧ್ಯಾಪಕರ ಮೇಲೆ ಶಿಸ್ತುಕ್ರಮ ಜರುಗಿಸಬೇಕು.ಹಾಗೂ ಮತ್ತೆಲ್ಲೂ ಇಂತಹ ಕುತ್ಸಿತ ಪ್ರಯತ್ನಗಳು ಆಗದಂತೆ ಎಚ್ಚರವಹಿಸಬೇಕು.
ಡಾ. ಸೋಮಶೇಖರ್‌, ನಿರ್ದೇಶಕರು ಡಾ.ಬಿ.ಆರ್.‌ ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರ ಮೈಸೂರು ವಿ.ವಿ ಇವರು ಸರ್ಕಾರಿ ಹಣಕಾಸು ಖರ್ಚಿನಲ್ಲಿ ಸುಪ್ರೀಮ್‌ ಕೋರ್ಟ್‌ ನ 7 ಜನ ಸದಸ್ಯರ ಪೀಠವನ್ನು ವಿಚಾರ ಗೋಷ್ಟಿ ಮೂಲಕ ಅವಮಾನಿಸಿರುವುದು ಸುಪ್ರೀಮ್‌ ಕೋರ್ಟ್‌ ಗೆ ತೋರಿಸಿದ ಅಗೌರವ, ಇಂತಹ ಪ್ರಕ್ರಿಯೆಗಳು ಮುಂದೊಂದು ದಿನ ನಡೆಯದಂತೆ ಡಾ. ಸೋಮಶೇಖರ್‌ ವಿರುದ್ದ ಕ್ರಮ ಕೈಗೊಳ್ಳುವಂತೆ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯಪಾಲರಿಗೆ ಕೋರಿದ್ದಾರೆ.

 

 

Leave a Reply

Your email address will not be published. Required fields are marked *