ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಾಯಿಸಿ ಸಿಎಂ ಬಳಿ ಮಾದಿಗ ಮುಖಂಡರ ನಿಯೋಗ: ಮನವಿ ಪತ್ರ ಸಲ್ಲಿಕೆ

ರಾಜ್ಯ

ಸಪ್ರೀಂ ಕೋರ್ಟ್ ನ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯದ ಮುಖಂಡರು, ಸಚಿವರಾದ ಆರ್ ಬಿ ತಿಮ್ಮಾಪುರ್ ಮತ್ತು ಕೆ ಹೆಚ್ ಮುನಿಯಪ್ಪ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಿಎಂ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ನಿಯೋಗದಲ್ಲಿನ ಮುಖಂಡರಾದ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ್, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಒಳ ಮೀಸಲಾತಿಗೆ ಅಡ್ಡಿಯಿದ್ದ ತಡೆಗಳನ್ನು ಸುಪ್ರೀ ಕೋರ್ಟ್ ತೆರವು ಮಾಡಿದೆ. ತಾವು ನಿರಾಶ್ರಿತರು, ಬಡವರು, ಶೋಷಿತರ ಪರ ಹೋರಾಟ ಮಾಡುತ್ತಾ, ಯೋಜನೆ ರೂಪಿಸುತ್ತಿದ್ದೀರಿ, ನೀವು ಪ್ರಶ್ನಾತೀತ ನಾಯಕರು,ಒಳ ಮೀಸಲಾತಿ ಜಾರಿಗೊಳಿಸಲು ನಿಮಗೆ ಬಲ‌ ತುಂಬಲು ನಾವು ಈ‌ ನಿಯೋಗ ಬಂದು,ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದರು. ಮನವಿ ಪತ್ರ ಓದಿದ ಮಾಜಿ ಸಚಿವ ಹೆಚ್ ಆಂಜನೇಯ, ನ್ಯಾಯವಾಗಿ ಸಿಗಬೇಕಿದ್ದ ಮೀಸಲಾತಿ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ.ಈ ಸತ್ಯವನ್ನು ಅರಿತು ಹಲವಾರು ವರದಿಗಳನ್ನಿಟ್ಟುಕೊಂಡು ಸಮುದಾಯವು 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಿರಂತರ ಹೋರಾಟದಿಂದಾಗಿ ಈಗ ಸುಪ್ರೀ ಕೋರ್ಟ್ ಒಳ‌ಮೀಸಲಾತಿ‌ ಜಾರಿಗೆ ಅಸ್ತು ಎಂದಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು‌ ಹೇಳಿದೆ.ಈಗ ಆಂಧ್ರ ಮತ್ತು ತೆಲಾಂಗಣ ರಾಜ್ಯಗಳು‌ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿವೆ.ನೀವು ಕೂಡ ಇದನ್ನು ಸ್ವಾಗತಿಸಿ ದ್ದು, ಶೀಘ್ರ ಜಾರಿಗೊಳಿಸಲು‌ಮುಂದಾಗಿ ಸಮುದಾಯದ ಅಭಿವೃದ್ದಿಗೆ ಅಹಕರಿಸಬೇಕು ಎಂದು ಕೋರಿದರು. ಮುಖ್ಯವಾಗಿ ಈಗಾಗಲೇ ಕೆಪಿಎಸ್ ಸಿ ಸೇರಿ ವಿವಿಧ ಇಲಾಖೆಗಳ ಪರೀಕ್ಷೆಗಳನ್ನುಒಳ ಮೀಸಲು ಜಾರಿಯಾಗುವವರೆಗೂ ತಡೆ ಹಿಡಿಯಬೇಕು.384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆದಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಮುಂದೆ ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಒಳ‌ಮೀಸಲಾತಿ ಹಂಚಿಕರ ಪ್ರಕಾರ ಹುದ್ದೆಗಳು ಹಂಚಿಕೆಯಾಗುವಂತೆ ಷರತ್ತು ವಿಧಿಸಿ ನೋಟಿಫಿಕೇಷನ್ ಹೊರಡಿಸಬೇಕು ಎಂದು ಮನವಿ‌ಮಾಡಿದರು.ಒಳ‌ಮೀಸಲಾತಿ‌ಜಾರಿಯಾಗುವವರೆಗೂ ಯಾವುದೇ ಇಲಾಖೆಯ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಮಾಡಬಾರದು. ಸರ್ಕಾರದ ಆರ್ಥಿಕ ಮೀಸಲಾತಿಯಲ್ಲಿ ಕೆಐಎಡಿಬಿ‌ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಸ್ಥಗಿತಗೊಳಿಸಬೇಕು. ಒಳಮೀಸಲಾತಿ ವರ್ಗೀಕರಣದ ತೀರ್ಪು ಬಂದ ಮೇಲೆ ಆಂದ್ರ ತೆಲಾಂಗಾಣ, ಹರಿಯಾಣ ಪಂಜಾಬ್ ಗಳಲ್ಲಿ ಒಳ‌ಮೀಸಲಾತಿ ಜಾರಿ ಆಗುವವರೆಗೆ ಹುದ್ದೆಗಳ ತುಂಬುವ ಪ್ರಕ್ರಿಯೆಗೆ ತಡೆ ಹಿಡಿದಿದ್ದಾರೆ.ಅದೇ ಮಾರ್ಗವನ್ನು ರಾಜ್ಯ ಸರ್ಕಾರ ಅನುಸರಿಸಬೇಕೆಂದು‌ ಕೋರಿದರು. ಸರ್ವರಿಗೂ ಪಾಲು‌ ಸಮ‌ಬಾಳು ಸಮಾಜಿಕ ನ್ಯಾಯ, ಸಮಾನತೆಗಾಗಿ‌ ಹೋರಾಟ ಮಾಡಿಕೊಂಡು ಬಂದಿರುವ ನೀವು,ಅಹಿಂದ ವರ್ಗದ ನೇತಾರರಾಗಿದ್ದೀರಾ,ಅಂತಃಕರಣ ಹೊಂದಿರುವ ನೀವು, ಶೋಷಿತರಲ್ಲೆ ಶೋಷಿತರು, ಅಸ್ಪೃಶ್ಯ ರಲ್ಲಿಯೇ ಅಸ್ಪೃಶ್ಯರಾಗಿರುವ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂ ಕೋರ್ಟಿನ ಆದೇಶದ ಅನ್ವಯ ಒಳ‌ಮೀಸಲಾತಿ ಜಾರಿಗೊಳಿಸುವಂತೆ ವಿನಯಪೂರ್ವಕವಾಗಿವಿನಂತಿಸುತ್ತೇವೆ ಎಂದು ಮನವಿ‌ ಮಾಡಿದರು.ಎಲ್ಲಾ ಮುಖಂಡರ ಮಾತು ಆಲಿಸಿ ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು,ನೊಂದ ಅಸ್ಪೃಶ್ಯ ಸಮಾಜದ ನೋವಿನ ಅರಿವು ನನಗಿದೆ. ಒಳ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿ ದ್ದೇನೆ. ಅದರ್ಥ ನಾನು‌ ನೊಂದ ಜನರ ಪರವಾಗಿ ಎಂದರ್ಥ ಬರುವ ರೀತಿಯಲ್ಲಿ ಒಳ ಮೀಉ ಜಾರಿಗೆ ಬದ್ಧ ಎನ್ನುವ ಅಭಯ ನೀಡಿದರು.ನಮ್ಮದು ರಾಷ್ಟ್ರೀಯ ಪಕ್ಷ ಜೊತೆಗೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಯಾಗಬೇಕು. ನಾನು ಮತ್ತು ನನ್ನ ಪಕ್ಷ ಸದಾ ನೊಂದವರ ಪರವಾಗಿ ಇರುತ್ತೇವೆ ಎಂದರು.ಶಾಸಕರಾದ ಬಸವಂತಪ್ಪ, ನೆಲಮಂಗಲ ಶಾಸಕ ಶ್ರೀನಿವಾಸ್, ಮಾಜಿ ಸಚಿವ ಎಂ. ಶಿವಣ್ಣ,ವಿಧಾನ ಪರಿಷತ್ ಸದಸ್ಯ ಡಾ. ಡಿ. ತಮ್ನಣ್ಣ ಇದ್ದರು.

 

 

Leave a Reply

Your email address will not be published. Required fields are marked *