ಕೇಂದ್ರದ ಬಜೆಟ್ ಜನ ಸಮಾನ್ಯರ ನಿರೀಕ್ಷೆ ಹುಸಿಹೊಳಿಸಿದೆ: ಪ್ರಕಾಶ್ ರಾಮಾ ನಾಯ್ಕ್

ರಾಜ್ಯ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ದೇಶದ ಯುವಕರಿಗೆ ಉದ್ಯೋಗ ಹಾಗೂ ಬಡತನ ನಿರ್ಮೂಲನೆಗೆ ಅನುಕೂಲಕರವಾದಂತಹ ಯಾವುದೇ ಯೋಜನೆ ನೀಡಿಲ್ಲ ಎಂದು  ಜಿಲ್ಲಾ ಕಾಂಗ್ರೆಸ್ ನ ಪದವಿಧರ ವಿಭಾಗದ ಅಧ್ಯಕ್ಷ ಪ್ರಕಾಶ್  ರಾಮಾನಾಯ್ಕ್ , ಚಿತ್ರದುರ್ಗದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ  ವ್ಯಕ್ತಪಡಿಸಿದರು.

 

ವಿಶೇಷವಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಯಾವುದೇ ಒಂದು ಯೋಜನೆಗೆ ಅನುದಾನ ನೀಡದೇ ಅನ್ಯಾಯ ಎಸಗಲಾಗಿದೆ.ಬಡವರು ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡುವ ಕುರಿತು ನಿರಾಸೆ ಮೂಡಿದೆ. ಯಾವುದೇ ರೀತಿಯ ಮುನ್ನೋಟ ಹಾಗೂ ಜನ ಸಾಮಾನ್ಯರಿಗೆ ಅನುಕೂಲಕರವಾಗುವಂತಹ ಯಾವುದೇ ಸಿಹಿಸುದ್ದಿಯನ್ನೊಳಗೊಳ್ಳದ ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿರುವುದಂತೂ ನಿಜ.

 

 

 

ಇನ್ನೂ ಕರ್ನಾಟಕದ ಪಾಲಿಗಂತೂ ನಿರಾಶೆಯ ಬಜೆಟ್ ಆಗಿದ್ದು , ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ರೂ ಕಳೆದ ಬಜೆಟ್ನಲ್ಲಿ ಮೀಸಲಿಟ್ಟಿದ್ದರೂ ಒಂದು ರೂಪಾಯಿ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಮಾಡಿದೆ .ರಾಜ್ಯಕ್ಕೆ ರೈಲ್ವೇ, ನಿರಾವರಿ ಮತ್ತು ಹೆದ್ದಾರಿ ಯೋಜನೆಗಳಿಗೆ ನಯಾಪೈಸೆ ಅನುದಾನ ನೀಡಿಲ್ಲ.

 

ಬಟ್ಟೆ,ಪ್ಲಾಸ್ಟಿಕ್,ವಿದ್ಯುತ್ ವಸ್ತುಗಳ ಬೆಲೆಯೇರಿಕೆ ಮಾಡಿರುವುದು ದುರದೃಷ್ಟಕರ. ಒಟ್ಟಾರೆಯಾಗಿ ಈ ಬಜೆಟ್ ಜನಸಾಮಾನ್ಯರಿಗೆ ನಿರಾಶಾದಾಯಕವಾದದ್ದಂತೂ ಸತ್ಯ.

 

Leave a Reply

Your email address will not be published. Required fields are marked *