ಅಂಗನವಾಡಿ ಕೇಂದ್ರಗಳಿಗೆ ನ್ಯಾ. ಎಂ. ವಿಜಯ ಅನಿರೀಕ್ಷಿತ ಭೇಟಿ : ಅಸಮಾಧಾನ ವ್ಯಕ್ತ

ರಾಜ್ಯ

ಅಂಗನವಾಡಿ ಕೇಂದ್ರಗಳಿಗೆ ನ್ಯಾ. ಎಂ. ವಿಜಯ ಅನಿರೀಕ್ಷಿತ ಭೇಟಿ : ಅಸಮಾಧಾನ ವ್ಯಕ್ತ

 

 

ಚಿತ್ರದುರ್ಗ ಜು. 22: ತಾಲ್ಲೂಕು ಮಾಡನಾಯಕನಹಳ್ಳಿಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ವಿಜಯ್ ಅವರು ಸೋಮವಾರದಂದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ ಉಚ್ಛ ನ್ಯಾಯಲಯ, ಬೆಂಗಳೂರು ಅವರು ರಿಟ್ ಅರ್ಜಿ ಸಂಖ್ಯೆ 38157/2011 ರನ್ವಯ ಚಿತ್ರದುರ್ಗ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ, ಅಲ್ಲಿನ ಕಟ್ಟಡ ಪರಿಸ್ಥಿತಿ ಹಾಗೂ ಪೌಷ್ಠಿಕ ಆಹಾರ ಪೂರೈಕೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿರುತ್ತಾರೆ.  ಅದರನ್ವಯ ನ್ಯಾ. ಎಂ. ವಿಜಯ್ ಅವರು ತಾಲ್ಲೂಕಿನ ಮಾಡನಾಯಕನಹಳ್ಳಿ ಗ್ರಾಮದ ಎ. ಬಿ ಮತ್ತು ಸಿ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.  ಖಾಸಗಿ ಕಟ್ಟಡದಲ್ಲಿರುವ ಅಂಗನವಾಡಿಗೆ ನಿಯಮಾನುಸಾರ ಸೂಕ್ತ ಮೂಲಭೂತ ಸೌಕರ್ಯ ಒದಗಿಸಿಲ್ಲ,  ಅಂಗನವಾಡಿ ಕೇಂದ್ರದ ಒಳಗೇ ಶೌಚಾಲಯ ನಿರ್ಮಿಸಿರುವುದು ಕೂಡ ಸರಿಯಾದುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ಗ್ರಾಮದ ಬಿ ಮತ್ತು ಸಿ ಅಂಗನವಾಡಿ ಕೇಂದ್ರದ ಕಟ್ಟಡಗಳು, ಅಂಗನವಾಡಿ ನಡೆಸಲು ಸುರಕ್ಷಿತ ಇರುವುದಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಇವರ ಗಮನಕ್ಕೆ ತರಲಾಗಿದೆ ಎಂಬುದಾಗಿ ನ್ಯಾ. ಎಂ. ವಿಜಯ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *