ಹಿರಿಯೂರು ಪೊಲೀಸರ ಮಿಂಚಿನ‌ ಕಾರ್ಯಾಚರಣೆ: ಕಡಲೆ ಚೀಲಗಳ‌ ಕಳ್ಳರ‌ ಬಂಧನ

ರಾಜ್ಯ

ಹಿರಿಯೂರು ನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಚರಣೆ ನೆಡೆಸಿ ಕಡಲೆ ಚೀಲಗಳ ಕಳ್ಳರನ್ನು ಬಂಧಿಸಿ ಅವರಿಂದ 2 ಲಕ್ಷದ 52 ಸಾವಿರ ರೂ ಮೌಲ್ಯದ 60 ಕಡಲೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಿಸಿದ ಗ್ರಾಂಡ್ ವಿತರಾ ಹಾಗೂ ಟ್ರಾಕ್ಟರ್ ನ್ನು ವಶಕ್ಕೆ ಪಡೆದಿದ್ದಾರೆ. ನಗರದ ತಾಹಾ ಪ್ಯಾಲೇಸ್ ಬಳಿಯಿರುವ ಲಕ್ಷ್ಮಿ ಚಂದ್ ಎನ್ನುವವರ ಗೋಡೌನ್ ನನ್ನು ಸಾಗರ್ ಎನ್ನುವವರು ಬಾಡಿಗೆ ಪಡೆದು ಅಲ್ಲಿ, ತಲಾ 60 ಕೆಜಿಯುಳ್ಳ 60 ಚೀಲಗಳನ್ನು ಶೇಖರಿಸಿಟ್ಟಿದ್ದರು. ಇದರ ಮೌಲ್ಯ 2ಲಕ್ಷದ 40 ಸಾವಿರವಾಗಿದ್ದು, ಇದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆಂದು ನಗರ ಠಾಣೆಗೆ ಸಾಗರ್ ದೂರು ಕೊಟ್ಟಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ನಗರದ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದ ತಂಡವನ್ನು ಆರೋಪಿಗಳ ಪತ್ತೆಗಾಗಿ ರಚಿಸಲಾಗಿತ್ತು. ತಂಡವು ತಾಂತ್ರಿಕ ಸಾಕ್ಷಿಗಳ ಪರಿಶೀಲಿಸುವಾಗ, ಎ1 ಆರೋಪಿ ಮೇಲೆ ಅನುಮಾನ ಬಂದು ಅವನನ್ನು ಠಾಣೆಗೆ ಕರೆಯಿಸಿ, ವಿಚಾರಿಸಿದಾಗ ಅವನು, ತಾನು ಬಹಳ ಸಾಲ‌ಮಾಡಿಕೊಂಡಿದ್ದು, ಆ ಸಾಲದ ಕಂತು ಕಟ್ಟಲು ಕಡಲೆ ಚೀಲಗಳನ್ನು ಮತ್ತೊಬ್ಬ ಆರೋಪಿ ಸಿ‌ ಮಂಜುನಾಥ್ ನ ಸಹಾಯದಿಂದ ಕಳವು ಮಾಡಿ, ನಗರದ ಬೈ ಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ಟ್ರೇಡರ್ಸ್ ಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.2 ನೇ ಆರೋಪಿ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನೆಡೆಸಿದಾಗ ಅವನೂ‌ ಕೂಡ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಿಂದ 2ಲಕ್ಷದ 52 ಸಾವಿರ ಮೌಲ್ಯದ 60 ಕಡಲೆ ಚೀಲಗಳು ಹಾಗೂ ಗ್ರಾಂಡ್ ವಿತರ ಕಾರು ಒಂದು ಟ್ರಾಕ್ಟರ್ ವಶಪಡಿಸಿಕೊಂಡಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಹಿರಿಯೂರಿನ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಶ್ಲಾಘಿಸಿದ್ದಾರೆ.

 

 

Leave a Reply

Your email address will not be published. Required fields are marked *