ಮಕ್ಕಳ ಭವಿಷ್ಯ ಕಟ್ಟುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಸಾಧ್ಯ: ಶಿವ ಶರಣ ಮಾದಾರಚನ್ನಯ್ಯ ಶ್ರೀ

ರಾಜ್ಯ

ಮಕ್ಕಳಲ್ಲಿ ನಾಯಕತ್ವ ಗುಣ, ಶಿಸ್ತು ಸಂಯಮ ಬಹಳ ಅಗತ್ಯವಾಗಿದೆ. ನಾಯಕನ ಆಯ್ಕೆ ಮಾಡುವ ಮನೋಭಾವ ಇಲ್ಲಿ‌ ಕಲಿಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು.
ಅವರು ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ‌ ನಡೆದ ವಿದ್ಯಾರ್ಥಿಗಳ ಹೌಸ್ ಗಳ ಲಾಂಛನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು. ಶಿಕ್ಷಣವನ್ನು ಮಾರ್ಕ್ಸ್ ಕಾರ್ಡ್ ಸೀಮಿತ ಮಾಡಿದ್ದೇವೆ. ಕೆಲಸಕ್ಕಾಗಿ ಶಿಕ್ಷಣವಾಗಿದೆ. ಭವಿಷ್ಯ ರೂಪಿಸುವ ಶಿಕ್ಷಣವಾಗಬೇಕು. ಶಿಕ್ಷಕರು ಇತ್ತ ಕಡೆ ಗಮನಹರಿಸಬೇಕು. ಅಪರಾಧಗಳು ಯುವಕರಲ್ಲಿಯೇ ನೆಡೆಯುತ್ತಿದೆ. ಅಪರಾಧ ವಿಲ್ಲದೆ ಕೌಶಲ್ಯದಿಂದ ಬದಕುವ ಕೆಲಸ ಹೇಳಿಕೊಡಬೇಕಿದೆ. ಇಂದು ಸೋಶಿಯಲ್ ಮೀಡಿಯಾಗಳು ಕೂಡ ಅಪರಾಧಗಳಿಗೆ ದಾರಿಯಾಗುತ್ತಿದೆ. ಎಲ್ಲಿ ಬದ್ದತೆ ಇರೋದಿಲ್ಲ, ಶಿಸ್ತು ಸಂಯಮ‌ ಇರೋದಿಲ್ಲ ಅಲ್ಲಿ ಸಾಧನೆ ಮಾಡಲು ಸಾಧ್ಯವಾಗಲ್ಲ. ಆದ್ದರಿಂದ ಶಿಸ್ತು ಸಂಯಮ. ಬದ್ದತೆ ಇರಬೇಕು. ತಂಡದ ನಾಯಕರು, ತಮ್ಮ ತಂಡವನ್ನು ಉತ್ತಮ ಕಡೆಗೆ ಕರೆದೊಯ್ಯಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತಾಡಿದ, ಶಿವ ಶರಣ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬರಡು ಜಿಲ್ಲೆಯಾದ ಚಿತ್ರದುರ್ಗ ದಲ್ಲಿ‌ ಶಿಕ್ಷಣ ಸಂಸ್ಥೆಗಳ ಕೊರತೆ ಇತ್ತು. ಆದರೆ ಎಸ್ ಆರ್ ಎಸ್ ಸಂಸ್ಥೆಯು ಉತ್ತಮ ದರ್ಜೆಯ ಶಿಕ್ಷಣ ಕೊಡುವ ಸಂಸ್ಥೆಯಾಗಿದೆ.‌ ಚಿತ್ರದುರ್ಗಕ್ಕೆ ಒಂದು ಬ್ರಾಂಡ್ ಆಗಿ ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಶ್ರಮಿಸಿದ್ದಾರೆ. ನಮ್ಮ ಮಕ್ಕಳ‌ ಪ್ರತಿಭೆಯನ್ನು ಹೊರಗೆ ತೆಗೆಯಲು, ಇಲ್ಲಿನ ಬೋಧಕರು ಮಾಡುತ್ತಿದ್ದಾರೆ. ಧರ್ಮವನ್ನು ಮೀರಿದ ಶಿಕ್ಷಣ ನಮ್ಮಲ್ಲಿ ಸಿಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳ ಪ್ರತಿಭೆಯನ್ನು ಓಬಾಮ ಗುರುತಿಸಿದ್ದು, ನಮ್ಮ ಹೆಮ್ಮೆ, ಮಕ್ಕಳ ಭವಿಷ್ಯವನ್ನು ಕಟ್ಟುವ ಕೆಲಸ ರಾಜಕಾರಣ, ಧರ್ಮದಿಂದ ಹಣದಿಂದ ಸಾಧ್ಯವಿಲ್ಲ. ಅದು ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಸಾದ್ಯ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಮಕ್ಕಳಿಗೆ ಆಸ್ತಿ ಎಷ್ಟು ಮಾಡಿದ್ದೇವೆ ಎನ್ನುವುದಕ್ಕಿಂತ ಉತ್ತಮ ಶಿಕ್ಷಣ ಕೊಡಬೇಕು ಎಂದರು. ಎಸ್ ಆರ್ ಎಸ್ ವಿದ್ಯಾ ಸಂಸ್ಥೆಯಲ್ಲಿ ಸಂಸ್ಕಾರವನ್ನು ನೀಡಲಾಗುತ್ತಿದೆ.‌ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾ ರೆಡ್ಡಿ , ಆಡಳಿತಾಧಿಕಾರಿ ಡಾ. ರವಿ ಹಾಗೂ ಪ್ರಾಂಶುಪಾಲ ಪ್ರಭಾಕರ್ ಇದ್ದರು.

 

 

Leave a Reply

Your email address will not be published. Required fields are marked *