ನಾಳೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಪಟ್ಟಾಭಿಷೇಕೋತ್ಸವ

ರಾಜ್ಯ

ನಾಡ ದೊರೆ ರಾಜವೀರ ಮದಕರಿನಾಯಕ ಪಟ್ಟಾಭಿಷೇಕ ಅಲಂಕರಿಸಿದ ದಿನವಾದ ಜು.1 ರಂದು ತರಾಸು ರಂಗ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಎಂದು ಮಾಜಿ ನಗರಸಭೆ ಅಧ್ಯಕ್ಷ ಮತ್ತು ನಾಯಕ ಸಮಾಜದ ತಾಲೂಕು ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮನವಿ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ರಾಜವೀರ ಮದಕರಿನಾಯಕ 270ನೇ ಪಟ್ಟಾಭಿಷೇಕ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಮದಕರಿನಾಯಕನ ಆಳ್ವಿಕೆಯಲ್ಲಿ ಎಲ್ಲಾ ಸಮಾಜದ ರಕ್ಷಣೆ ಮಾಡುವ ಮೂಲಕ ದುರ್ಗದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಂತಹ ಮಹಾನ್ ದೊರೆಯನ್ನು ವರ್ಷಕ್ಕೆ ಮೂರು ಬಾರಿ ನೆನಪು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದು ಅವರ ಪಟ್ಟಾಭೀಷೇಕ, ಜಯಂತಿ ಮತ್ತು ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಜುಲೈ 1 ರಂದು ಸಹ ಮದಕರಿನಾಯಕ ಪಟ್ಟಕ್ಕೇರಿದ ದಿನವಾಗಿರುವುದಿಂದ ಸ್ಮರಿಸಿ ಅವರ ನೆನಪಿನ ಜೊತೆ ಅವರ ಜೀವನ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮದಕರಿನಾಯಕನ ನೆನಪುಗಳನ್ನು ತಿಳಿಸೋಣ ಎಂದರು.

ಚಿತ್ರದುರ್ಗದ ಅಭಿವೃಧ್ದಿಗೆ ಮದಕರಿ ನಾಯಕರು ತಮ್ಮದೇ ಆದ ಕೂಡುಗೆ ನೀಡಿದ್ದಾರೆ. ಅದರ ಸ್ಮರಣೆ ಇಂದಿನ ದಿನದಲ್ಲಿ ಆಗತ್ಯವಾಗಿದೆ. ನಮ್ಮ ನಾಯಕರ ಬಗ್ಗೆ ಕೇಂದ್ರ ಸರ್ಕಾರ ಕಳೆದ ಚುನಾವಣೆಯಲ್ಲಿ ಮದಕರಿ ನಾಯಕ ಥಿಮ್ ಪಾರ್ಕ್‌ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ ಅದರ ಬಗ್ಗೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು. ಇದರೊಂದಿಗೆ ಚಿತ್ರದುರ್ಗದ 7 ಸುತ್ತಿನ ಕೋಟೆಯ ಅಭಿವೃದ್ದಿಯ ಬಗ್ಗೆ ಸಹ ನೆನಪು ಮಾಡಲಾಗುವುದು ಎಂದು ಕಾಂತರಾಜ್ ತಿಳಿಸಿದರು.

 

 

ಇಂದಿನ ದಿನಮಾನದಲ್ಲಿ ರಾಷ್ಟ್ರ ನಾಯಕರನ್ನು ಜಾತಿಗೆ ಸೀಮಿತ ಮಾಡಲಾಗಿದೆ. ಆದರೆ ಮದಕರಿ ನಾಯಕರು ಜಾತ್ಯಾತೀತ ನಾಯಕರಾಗಿದ್ದಾರೆ, ಅವರ ಕಾರ್ಯಕ್ರಮವನ್ನು ಎಲ್ಲರು ಸೇರಿ ಮಾಡಬೇಕಿದೆ. ಇಲ್ಲಿ ಜಾತಿಗಿಂತ ನೀತಿ ಮುಖ್ಯವಾಗಿದ್ದು ಅವರು ಮಾಡಿದ ಕಾರ್ಯಗಳು ನಮಗೆ ದಾರಿದೀಪವಾಗಿವೆ ಎಂದು ತಿಳಿಸಿ, ಕಾರ್ಯಕ್ರಮದಲ್ಲಿ ಮದಕರಿನಾಯಕರ ಆಳ್ವಿಕೆ, ಚಿತ್ರದುರ್ಗದ ಜಲಮೂಲಗಳ ಬಗ್ಗೆ ಮಹಾಂತೇಶ್ ಉಪನ್ಯಾಸ ನೀಡಲಿದ್ದಾರೆ ಎಂದರು.

ಜುಲೈ 1 ರಂದು ಸೋಮವಾರ ಬೆಳಗ್ಗೆ ಮದಕರಿನಾಯಕ ಪ್ರತಿಮೆಗೆ 11 ಗಂಟೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ತರಾಸು ರಂಗ ಮಂದಿರದಲ್ಲಿ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯ ಕ್ರಮದಲ್ಲಿ ಭಾಗವಹಿಸುವ ಅತಿಥಿಗಳು ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಮದಕರಿನಾಯಕ ಅವರ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲು ಪ್ರಯತ್ನ ನಡೆಸಲಾಗುತ್ತದೆ. ಮುಂದಿನ ದಿನದಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಓನಕೆ ಒಬವ್ವರವರ ಜೀವನ ಚರಿತೆ ಈಗಾಗಲೇ ಪುಸಕ್ತದಲ್ಲಿ ಇದೆ. ಇದೇ ರೀತಿ ನಮ್ಮ ನಾಯಕ ಮದಕರಿಯ ಜೀವನ ಚರಿತೆಯನ್ನು ನಮ್ಮ ಪೀಳೀಗೆಗೆ ತಿಳಿಸುವ ಕಾರ್ಯವನ್ನು ಪಠ್ಯದ ಮೂಲಕ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮಾಜದ ಮುಖಂಡರಾದ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಗೋಪಾಲಸ್ವಾಮಿ ನಾಯಕ, ಅಂಜಿನಪ್ಪ, ಕಾಟೀಹಳ್ಳಿ ಕರಿಯಪ್ಪ ಮತ್ತು ಸಮಾಜ ಅನೇಕ ಮುಖಂಡರು ಇದ್ದರು.

Leave a Reply

Your email address will not be published. Required fields are marked *