ಹೊಳಲ್ಕೆರೆ ತಾಲೂಕಿನ ವಿಶೇಷ ಚೇತನರಿಗೆ ಗುಡ್ ನ್ಯೂಸ್

ಜಿಲ್ಲಾ ಸುದ್ದಿ

ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

 

 

ಹೊಳಲ್ಕೆರೆ ಪುರಸಭಾ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಇತರೆ ಬಡ ಜನಾಂಗದವರಿಗೆ ಮತ್ತು ವಿಶೇಷಚೇತನರಿಗೆ 2023-24ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನ ಯೋಜನೆಯಡಿ ಶೇ.7.25 ಮತ್ತು ಶೇ.5 ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಗದಿತ ಅರ್ಜಿ ನಮೂನೆಗಳನ್ನು ಹೊಳಲ್ಕೆರೆ ಪುರಸಭಾ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದು ಹಾಗೂ ಹೊಳಲ್ಕೆರೆ ಪುರಸಭೆಯ ಅಧಿಕೃತ ಜಾಲತಾಣ http://www.holalkeretown.mrc.gov.in ನ ನೋಟಿಪಿಕೇಷನ್ ವಿಭಾಗದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಹೊಳಲ್ಕೆರೆ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *