ಕಾರ್ಮಿಕರಿಗೆ ಸಿಗುವ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು: ದಿನೇಶ್

ರಾಜ್ಯ

 

ಸರ್ಕಾರದವತಿಯಿಂದ ಕಟ್ಟಡ ಕಾರ್ಮಿಕರಿಗೆ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ದೂರಕಿಸಿಕೊಡಲು ಪ್ರಮಾಣಿಕವಾದ ಪ್ರಯತ್ನವನ್ನು ಮಾಡುವುದಾಗಿ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಫೆರಸ್ಟ್ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಫೆರಸ್ಟ್ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಸಂಘಟನೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸವನ್ನು ಮಾಡಿದ್ದಲ್ಲದೆ ಮತವನ್ನು ನೀಡಿದೆ. ಇದರಿಂದ ಹಲವಾರು ಕಡೆಯಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದೆ, ನಮ್ಮಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನು ಕಾಂಗ್ರೆಸ್ ಸರ್ಕಾರದಲ್ಲಿ ಬಗೆಹರಿಸಿಕೊಳ್ಳಬೇಕಿದೆ. ನಮ್ಮ ಸಂಘಟನೆಯಲ್ಲಿ ಹಲವಾರು ಜನರನ್ನು ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ, ಅವರು ನಮ್ಮ ಸಂಘಟನೆ ಬೆಳೆಯಲು ಸಹಕಾರಿಯಾಗಬೇಕಿದೆ, ನೇಮಕಾತಿ ಪಡೆದು ಮನೆಯಲ್ಲಿ ಕೂರದೆ  ಹೊರಗೆ  ಬಂದು ಕೆಲಸ ಮಾಡುವಂತೆ ಕರೆ ನೀಡಿದರು.

 

 

ಜಿಲ್ಲಾ ಡಿಸಿಸಿ ಅಧ್ಯಕ್ಷ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ಮಾತನಾಡಿ, ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯಲ್ಲಿ ಕಾರ್ಮಿಕ ವಿಭಾಗವೂ ಉತ್ತಮ ಕೆಲಸವನ್ನು ಮಾಡಿದೆ. ಇದ್ದಲ್ಲದೆ ಕಾಂಗ್ರೆಸ್ಗೆ ಮತವನ್ನು ನೀಡುವುದರ ಮೂಲಕ ಗೆಲುವನ್ನು ಸಾಧಿಸಲು ಸಹಕಾರಿಯಾಗಿದೆ. ಚುನಾವಣೆಗೂ ಮುನ್ನಾ ಕಾಂಗ್ರೆಸ್ ಪಕ್ಷದ ಮತದಾರರಿಗೆ ಐದು ಗ್ಯಾರಂಟಿ ನೀಡಿತ್ತು ಅದರಂತೆ ಸರ್ಕಾರ ಬಂದ ಆರು ತಿಂಗಳಲ್ಲಿ ಎಲ್ಲಾ ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಇದರಲ್ಲಿ ಶೇ.90 ರಷ್ಟು ಕಾರ್ಮಿಕರು ನಮ್ಮ ಸರ್ಕಾರದ ಗ್ಯಾರೆಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಮುಂದಿನ 4 ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರವನ್ನು ನಡೆಸಲಿದ್ದು ಸಮಯದಲ್ಲಿ ಕಾರ್ಮಿಕರಿಗೆ ಅಗತ್ಯವಾಗಿ ಆಗಬೇಕಾದ ಸೌಲಭ್ಯಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿ ಕೂಡಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದರು.ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಮೂಲೆ ನಿವೇಶನಗಳಿದ್ದು, ಅವುಗಳನ್ನು ಸಂಘಸಂಸ್ಥೆಗಳಿಗೆ ನೀಡಲು ಆವಕಾಶ ಇದೆ. ಇದರ ಪ್ರಯೋಜವನ್ನು ಪಡೆಯಿರಿ ನಿವೇಶನ ಪಡೆದ ಕಟ್ಟಡವನ್ನು ನಿರ್ಮಾಣ ಮಾಡಿ ಅಗತ್ಯ ಇದ್ದವರಿಗೆ ತರಬೇತಿಯನ್ನು ನೀಡಿ ಎಂದು ತಿಳಿಸಿದ ಅವರು, ನಿಮ್ಮ ಸಂಘದಲ್ಲಿರುವ ನಿವೇಶನಗಳನ್ನು ಶೀಘ್ರವಾಗಿ ಹಂಚಿಕೆಯನ್ನು ಮಾಡಿ, ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಸ್ವಂತ ಜಾಗ ಇದ್ದವರಿಗೆ ಸರ್ಕಾರದವತಿಯಿಂದ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ ಇದರ ಪ್ರಯೋಜನ  ಪಡೆಯಿರಿ ಎಂದರು.ಜಿಲ್ಲಾ ಬಡಗಿ ಸಂಘದ ಅಧ್ಯಕ್ಷ, ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಫೆರಸ್ಟ್ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ಉಪಾಧ್ಯಕ್ಷ.ಜಾಕೀರ್ ಹುಸೇನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ. ಉತ್ತಮವಾದ ಸಹಕಾರವನ್ನು ನೀಡಿದ್ದಾರೆ. ಮುಂದೆಯೂ ಸಹಾ ಸಹಕಾರ ಮತ್ತು ಸಹಾಯವನ್ನು ನೀಡಲಿದೆ. ನಮ್ಮ ಸಂಘದಿಂದ ಜಮೀನನ್ನು ಖರೀದಿ ಮಾಡಲಾಗಿದೆ ಅವುಗಳ ಹಕ್ಕು ಪತ್ರವನ್ನು ನೀಡಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇವೆ ಆಗುತ್ತಿಲ್ಲ ಹಿಂದಿನ ಶಾಸಕರು ನಮ್ಮ ಕಾರ್ಯಗಳಿಗೆ ಸಹಕಾರವನ್ನು ನೀಡಲಿಲ್ಲ ಇದರಿಂದ ಇದು ನೆನೆಗುದ್ದಿಗೆ ಬಿದ್ದಿತತು ಆದರೆ ಈಗ ನಮ್ಮ ಶಾಸಕರು ಬಂದಿದ್ದಾರೆ ಮುಂದಿನ ದಿನದಲ್ಲಿ ಎಲ್ಲರಿಗೂ ಸಹಾ ಹಕ್ಕು ಪತ್ರವನ್ನು ನೀಡಲಾಗುವುದು ಇದರ ಸಂಬಂಧ ಜಿಲ್ಲಾಧಿಕಾರಿಗಳನ್ನು ಕಂಡು ಸಹಾ ಮಾತನಾಡಲಾಗಿದೆ ಎಂದರು.ಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ,ನಮ್ಮ ಪಕ್ಷದಲ್ಲಿ ನಾನಾ ಸಂಘಟನೆಗಳಿವೆ ಅದರಲ್ಲಿ ಕಾರ್ಮೀಕ ವಿಭಾಗವೂ ಒಂದಾಗಿದೆ, ಬೇರೆ ಸಂಘಟನೆಗಳಲ್ಲಿ ಆಯಾ ಜಾತಿಯವರು ಮಾತ್ರ ಕಾಣುತ್ತಾರೆ ಆದರೆ ಕಾರ್ಮೀಕ ಸಂಘಟನೆಯಲ್ಲಿ ಎಲ್ಲಾ ಜಾತಿಯವರು ಸಹಾ ಸಿಗುತ್ತಾರೆ. ಕಾರ್ಮಿಕ ವಿಭಾಗದಿಂದ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಸಿಕ್ಕಿವೆ, ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಿ, ಜನರಲ್ಲಿ ಕರುಣೆ, ಕಾಳಜಿ ಪ್ರೀತಿ, ವಿಶ್ವಾಸ ಇದೆ ಯಾರಲ್ಲೂ ಸಹಾ ದ್ವೇಷ ಅಸೂಯೆ ಎಂಬುದು ಇಲ್ಲ ಎಲ್ಲರನ್ನು ಸಹಾ ತಮ್ಮವರು ಎಂದು ಹೇಳಲಾಗುತ್ತದೆ. ಪಕ್ಷದಲ್ಲಿ ಕಾರ್ಮಿಕ ವಿಭಾಗದವರಿಗೆ ಪ್ರಥಮ ಅದ್ಯೆತಯನ್ನು ನಿಡುವುದರ ಮೂಲಕ ವರ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ ಎಂದು ಪಕ್ಷದ ಮುಖಂಡರನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಟಿಪ್ಪು ಖಾಸಿಂಆಲಿ, ಯೂಸೆಫ್, ಮಹಬೂಬ್ ಖಾನ್, ಬಾಬು, ಸಾಧಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಫೆರಸ್ಟ್ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ಅಧ್ಯಕ್ಷರಾದ ದಿನೇಶ್ ವಿತರಣೆ ಮಾಡಿದರು.    

Leave a Reply

Your email address will not be published. Required fields are marked *