ಭೋವಿ ಜನೋತ್ಸವ ಅದ್ದೂರಿಯಾಗಿ ನಡೆಸಲು ತೀರ್ಮಾನ: ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಭೆ

ರಾಜ್ಯ

 

ಭೋವಿ ಜನೋತ್ಸವ ಅದ್ದೂರಿಯಾಗಿ ನಡೆಸಲು ತೀರ್ಮಾನ

ಬೆಂಗಳೂರು : ಜುಲೈ 18 ರಂದು ಚಿತ್ರದುರ್ಗದ ಭೋವಿ ಗುರುಪೀಠ ವು ಪ್ರತಿ ವರ್ಷದಂತೆ ನಡೆಸುವ ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಹುಟ್ಟು ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ ಕುರಿತು ಜೂ. ೨೦ ರಂದು ಗುರುವಾರ ಬೆಂಗಳೂರಿನ‌ ಜಸ್ಮಾ ಭವನದಲ್ಲಿ‌ ಪೂರ್ವ ಭಾವಿ ಸಭೆ ನಡೆಯಿತು.

 

 

ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಈ ಸಭೆಯಲ್ಲಿ‌ ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಜುಲೈ 18 ರಂದು ನಡೆಯು ಭೋವಿ ಜನೋತ್ಸವ ಕಾರ್ಯಕ್ರಮ‌ ನಡೆಯುವ ಕುರಿತು ಸಲಹೆ ನೀಡಿದರು.‌ಸಮಾಜದ ಸಂಘಟನೆಯ ದೃಷ್ಟಿಯಿಂದ ಭೋವಿ ಜನೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು, ನೂತನವಾಗಿ ಆಯ್ಕೆಗೊಂಡ ಸಂಸದರ, ನಿಗಮ ಮಂಡಳಿ ಅಧ್ಯಕ್ಷರ ಗೌರವ ಸಮರ್ಪಣೆ ಮತ್ತು ನೂತನವಾಗಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭದ ನಿಮಿತ್ತ ಭೋವಿ ಜನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಅದಕ್ಕೆ ಸಮಾಜದ ಜನರನ್ನು ಸಮಗ್ರವಾಗಿ ತೊಡಗಿಸಿಕೊಳ್ಳಬೇಕೆಂದು ಸಭೆಯು ಸಲಹೆ‌ ನೀಡಿತು.ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ,ಸಮಾಜ ಸಂಘಟನೆಯಲ್ಲಿ ಬಲಿತ ಹಾಗೂ ದಲಿತ ಎರಡು ವರ್ಗಗಳಿಗೂ ಶಕ್ತಿ ತುಂಬುವ ಚೇತನವಿದೆ. ಸಂಘಟನೆಗೊಂಡ ಸಮಾಜ ಮಾತ್ರ ಎಲ್ಲಾ ರಂಗಗಳಲ್ಲಿಯೂ ಮುಖ್ಯವಾಹಿನಿಗೆ ಬಂದಿದೆ. ಇದನ್ನರಿತು ಬಾಬಾ ಸಾಹೇಬರ ನುಡಿಯಂತೆ ಶಿಕ್ಷಣ ಸಂಘಟನೆ ಹೋರಾಟಕ್ಕೆ ಆದ್ಯತೆ ನೀಡಬೇಕು. ಎಲ್ಲಾ ರಂಗಗಳ ಸಾಧಕರನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕ್ಷೇತ್ರವಾಗಿ ಭೋವಿ ಗುರುಪೀಠ ಕಾರ್ಯನಿರ್ವಹಿಸುತ್ತಿದೆ.

ಭೋವಿ ಸಮಾಜದ ಬೇಡಿಕೆಗಳು ಸರ್ಕಾರದ ಮಟ್ಟಕ್ಕೆ ತಲುಪಬೇಕು
ಈ‌ ನಿಟ್ಟಿನಲ್ಲಿ‌‌ ಸಮಾಜದ‌ ಮುಖಂಡರು ಚಿಂತನೆ ಮಾಡಬೇಕಿದೆ ಎಂದರು.
‌ ಸಚಿವ ಶಿವರಾಜ್ ತಂಗಡಗಿ ಅವರ‌ ಸಮಾಜಪರ ಕಾಳಜಿಯನ್ನು ಮುಕ್ತ ಕಂಠದಿಂದ ಬಣ್ಷಿಸಿದ ಶ್ರೀಗಳು, ಸಮಾಜದ ಒಬ್ಬರು ಸಚಿವರಾಗಿದ್ದಕ್ಕೆ ಸಾಕಷ್ಟು ಅವಕಾಶಗಳು ಸಮಾಜಕ್ಕೆ ಸಿಕ್ಕಿವೆ. ಎಲ್ಲದಕ್ಕೂ ಸ್ಪಂದನೆ ಮಾಡುವ ಸಕರಾತ್ಮಕ ಮನೋಭಾವ ತಂಗಡಗಿ ಅವರದ್ದು, ತಂಗಡಗಿ ಅವರು ತುಂಬಾ ಪ್ರಬುದ್ದ ರಾಜಕಾರಣಿ. ವೈಯಕ್ತಿಕ ವಾಗಿ ಗೆದ್ದ‌ಬಂದು ಸಚಿವರಾದವರು ಅವರು‌ .‌ಅವರು‌ ಸಚಿವರಾಗಿದ್ದು ಭೋವಿ ಸಮಾಜದಿಂದಲಲ್ಲ, ತಮ್ಮ‌ವೈಯಕ್ತಿಕ ಶಕ್ತಿಯಿಂದ. ಆದರೆ ನಮಗೆ ನಮ್ಮವರೊಬ್ಬರು ಸಚಿವರಾಗಿದ್ದಾರೆನ್ನುವುದು ನಮ್ಮ ಹೆಮ್ಮೆ. ಜಗತ್ತಿಗೆ ಸೂರ್ಯ ಬೆಳಕು‌ನೀಡುವ ಹಾಗೆ ತಂಗಡಗಿ ಅವರು ಸಮಾಜಕ್ಕೆ ಬೆಳಕು.‌ಅವರು ಒಬ್ನ ಪ್ರಬುದ್ದ ರಾಜಕಾರಣಿ‌ ಎಂದು ಬಣ್ಣಿಸಿದರು.

ಭೋವಿ ಸಮಾಜವನ್ನು ಕಟ್ಟುವ ಕೆಲಸ ಬಹು ಕ್ಲಿಷ್ಟಕರವಾದುದು, ಕಳೆದ ಮೂರು ದಶಮಾನಗಳನ್ನು ಗಮನಿಸಿ, ಅನುಭವವನ್ನು ಹಂಚಿಕೊಳ್ಳುತ್ತಿರುವೆ. ಕಳೆದ ಎರಡು ದಶಮಾನಗಳನ್ನು ಅತ್ಯಂತ ಸೂಕ್ಷಮವಾಗಿ ಗಮನಿಸಿದ್ದಾಗ, ಭೋವಿ ಗುರುಪೀಠದ ಜಗದ್ಗುರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸಿದ ಪರಿಣಾಮ ನಾನಿಂದು ಮಂತ್ರಿಯಾಗಿರುವೆ. ಭೋವಿ ನಿಗಮ ಸ್ಥಾಪನೆಯಾಗಿದೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ಆಯಾಕಟ್ಟಿನ ಜಾಗದಲ್ಲಿ ಅಧ್ಯಕ್ಷರು ನಿರ್ದೇಶಕರು ನೇಮಕಗೊಳ್ಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಆಪ್ತವಲಯದ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ. ಪರಿಣಾಮ ಕೆಪಿಎಸ್ಸಿ ಸದಸ್ಯರ ನೇಮಕವಾಗುತ್ತಿದೆ. ಇಮ್ನಡಿ ಶ್ರೀಗಳ ಸಮಾಜ ಬದ್ಧತೆಯಿಂದಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ.

ಅಪರೂಪದ ಮಾಣಿಕ್ಯದಂತಹ ಇಮ್ಮಡಿ ಶ್ರೀಗಳ ದೀಕ್ಷಾ ರಜತ ಮಹೋತ್ಸವವನ್ನು ಯುಪಿಎಸ್ಸಿಯಲ್ಲಿ ಆಯ್ಕೆಗೊಂಡ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಷಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಧುವರರ ಸಮಾವೇಶ, ನೂತನ ನಿಗಮ ಮಂಡಳಿಗಳ ಅಧ್ಯಕ್ಷರ ಹಾಗೂ ನಿರ್ದೇಶಕರ ಅಭಿನಂದನ ಸಮಾರಂಭವನ್ನು ಅರ್ಥಪೂರ್ವಾಗಿ ಅದ್ದೂರಿಯಾಗಿ ಆಚರಿಸೋಣ ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *