ನೀಟ್ ಮರು ಪರೀಕ್ಷೆ ಮಾಡಿ, ಸಿಇಟಿಯನ್ನೇ ಮುಂದುವರೆಸಿ: ಆಪ್ ಒತ್ತಾಯ

ರಾಜ್ಯ

 

 

ನೀಟ್ ಪರೀಕ್ಷೆಯನ್ನು ಮರು ಪರೀಕ್ಷೆ ಮಾಡಬೇಕು ಹಾಗೂ ಸಿಇಟಿಯನ್ನೇ ಮುಂದುವರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಜಗದೀಶ್ ಅಗ್ರಹಿಸಿದ್ದಾರೆ.

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಮಕ್ಕಳಿಗೆ ನೀಟ್ ನಿಂದ ಅನ್ಯಾಯವಾಗುತ್ತಿದೆ.. ಇದನ್ನು ರಾಜ್ಯ ಸರ್ಕಾರ ಸರಿಪಡಿಸಬೇಕು. ಮೊದಲು ಸಿಇಟಿ ಒಂದೇ ಇತ್ತು. ಆದರೆ ಕೇಂದ್ರ ಸರ್ಕಾರ ನೀಟ್ ಜಾರಿಗೆ ತಂದಿದ್ದರಿಂದ ಇದು ಉತ್ತರ ಭಾರತದ ಮಕ್ಕಳಿಗೆ ಅನುಕೂಲವಾಗುತ್ತಿದೆ.ನಮ್ಮ ರಾಜ್ಯದ ಮಕ್ಕಳಿಗೆ ನೀಟ್ ಸಮಸ್ಯೆಯಾಗುತ್ತಿದೆ..ಕಡಿಮೆ ಅಂಕಗಳಿಕೆಯಿಂದ ನೀಟ್ನಲ್ಲಿ ಪಾಸ್ ಆಗುತ್ತಿಲ್ಲ. ಹಿನ್ನಲೆಯಲ್ಲಿ ನಮ್ಮ ರಾಜ್ಯದ ಮಕ್ಕಳು ಉತ್ತರ ಭಾರತದ ಮಕ್ಕಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿ ನೀಟ್ ಪರೀಕ್ಷೆಯನ್ನು ಮರು ಪರೀಕ್ಷೆ ಮಾಡಬೇಕು.. ಹಾಗೂ ಸಿಇಟಿಯನ್ನೇ ಮುಂದುವರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

 

 

 

ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತ ಆಗುತ್ತಿದ್ದರೂ ಸಹಾ ನಮ್ಮ ರಾಜ್ಯದ ಚಿಂತಕರು ಬುದ್ಧಿಜೀವಿಗಳು ಸುಮ್ಮನಿದ್ದಾರೆ ಯಾರು ಸಹ ಧ್ವನಿ ಎತ್ತುತ್ತಿಲ್ಲ. ಮೊದಲು ಏನು ಇತ್ತು ಸಿಇಟಿ ಅದೇ ರೀತಿ ಮುಂದುವರಿಯಬೇಕು. ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟು ಕೈಕಟ್ಟಿ ಕುಳಿತಿದೆ. ನೀಟ್ ಪರೀಕ್ಷೆಯಲ್ಲಿ ಸ್ಕ್ಯಾಂ ಆಗಿದೆ ಇದರಿಂದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ ಅವರು ನಮ್ಮ ರಾಜ್ಯದ ಜಿಎಸ್ಟಿ ಪಾಲಿನಿಂದ ಹಾಗೂ ಇತರೆ ಮೂಲಗಳಿಂದ ಅನ್ಯಾಯಕ್ಕೆ ಒಳಗಾಗಿದೆ.. ನಮ್ಮ ರಾಜ್ಯದ ಸಂಸದರು ಯಾರು ಸಹ ಕೇಳುತ್ತಿಲ್ಲ.. ನಮ್ಮ ಸಂಸದರ ಕೊಡುಗೆ ರಾಜ್ಯಕ್ಕೆ ಏನು ಇಲ್ಲ. ನಮ್ಮ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದರೂ ಸಹಾ ಇದರ ಬಗ್ಗೆ ಯಾವ ಸಂಸದನು ಸಹಾ ಧ್ವನಿ ಎತ್ತಿಲ್ಲ, ರಾಜ್ಯದಿಂದ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಲೋಕಸಬಾ ಸದಸ್ಯರು ಆಯ್ಕೆಯಾಗಿದ್ದಾರೆ ಮುಂದಿನದಲ್ಲಿ ಇದರ ಬಗ್ಗೆ ಲೋಕಸಭೆಯಲ್ಲಿ ಧ್ವನಿಯನ್ನು ಎತ್ತುವುದರ ಮೂಲಕ ನಮ್ಮ ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಜಗದೀಶ್ ನೂತನ ಸಂಸತ್ ಸದಸ್ಯರನ್ನು ಆಗ್ರಹಿಸಿದರು

 

ನೂತನ ಸಂಸದರು ಹೇಳುತ್ತಾರೆ 5300 ಕೋಟಿ ರೂ ತಂದು ಭದ್ರಾ ಮೇಲ್ದಂಡೆ ಯೋಜನೆಯನ್ನು ಮುಗಿಸುತ್ತೇನೆ ಅಂತ ಹೇಳಿದ್ದಾರೆ. ಕಾದು ನೋಡೋಣ ಏನು ಮಾಡುತ್ತಾರೆ ಅಂತ ವ್ಯಂಗವಾಗಿ ಜಗದೀಶ್ ಹೇಳಿದರು.

 

ಗೋಷ್ಟಿಯಲ್ಲಿ ಆಮ್ ಆದ್ಮಿ ಪಾರ್ಟೀಯ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ, ಕಾರ್ಯದರ್ಶಿ ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ರಾಮಪ್ಪ, ಟಿ.ಸಿ.ಚಂದ್ರೇಶೇಖರ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್, ಜಬೀವುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *