ಸಡಗರ ಸಂಭ್ರಮದಿಂದ ಜರುಗಿದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ

ರಾಜ್ಯ

ಸಡಗರ ಸಂಭ್ರಮದಿಂದ ಜರುಗಿದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ
ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ಮಂಟಪದಲ್ಲಿ ಬಸವಣ್ಣನವರ ನೂತನ ಮೂರ್ತಿ ಪ್ರತಿಷ್ಠಾಪನೆ ಮತ್ತು 891ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮವು ಸೋಮವಾರ ಸಡಗರ ಸಂಭ್ರಮದಿಂದ ಜರಗಿತು.
ಕೂಡಲ ಸಂಗಮ ಬಸವಧರ್ಮ ಪೀಠದ ಶ್ರೀ ಮನ್ ನಿರಂಜನ ಜಗದ್ಗುರು ಡಾ. ಗಂಗಾ ಮಾತಾಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಉಪಸ್ಥಿತಿಯನ್ನು ಉಳವಿ-ಚಿತ್ರದುರ್ಗ ಅಕ್ಕಮಹಾದೇವಿ ಪೀಠದ ದಾನೇಶ್ವರಿ ಮಾತಾಜಿ, ಚಿತ್ರದುರ್ಗ ದ ಬಸವರತ್ನ ಮಾತಾಜಿ, ನಿಬ್ಬಗೂರು ಅವಧೂತ ಮಠದ ತಿಪ್ಪೇರುದ್ರ ತಾತನವರು ವಹಿಸಿದ್ದರು. ಧ್ವಜಾರೋಹಣವನ್ನ ಚಳ್ಳಕೆರೆ ಬಸವೇಶ್ವರ ಕ್ಲಿನಿಕ್ ನ ಡಾ. ವೀರೇಶ್ ನೆರವೇರಿಸಿದರು. ಉದ್ಘಾಟನೆಯನ್ನು ಚಳ್ಳಕೆರೆ ಬಾಪೂಜಿ ವಿದ್ಯಾಸಂಸ್ಥೆಯ ಜಗದೀಶ್ ನೆರವೇರಿತು.
ಪ್ರಾಸ್ತಾವಿಕ ನುಡಿ ಸೇವೆಯನ್ನು ಬಸವ ದಳದ ಹಿಂದಿನ ರಾಜ್ಯಾಧ್ಯಕ್ಷ ಕೆ. ವೀರೇಶ್ ನಡೆಸಿದರು. ಲೇಖಕಿ ಶಬ್ರೀನ ಮಹಮದ್ ಆಲಿ ಮಾತನಾಡಿದರು. ಮೈಲನಹಳ್ಳಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಎಂ ಜಿ ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮೈಲನಹಳ್ಳಿ ಗ್ರಾಮದ ಮುಖಂಡರು, ಚಿತ್ರನಾಯಾಕನಹಳ್ಳಿ, ದೊಡ್ಡ ಉಳ್ಳಾರ್ತಿ, ಹೀರೆಹಳ್ಳಿ, ಘಟಪರ್ತಿ, ಕಸವಿಗೊಂಡನಹಳ್ಳಿ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಸೇರಿದಂತೆ ಹತ್ತು ಹಳ್ಳಿಗಳ ಜನತೆ ಪಾಲ್ಗೊಂಡಿದ್ದರು.
ಮೈಲನಹಳ್ಳಿ ದಿನೇಶ್ ಸರ್ವರನ್ನೂ ಸ್ವಾಗತಿಸಿದರು. ಪ್ರತಿಭಾ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಮೈಲನಹಳ್ಳಿ ರಾಷ್ಟ್ರೀಯ ಬಸವದಳದ ಚನ್ನವೀರಪ್ಪ, ಲಿಂಗಾರೆಡ್ಡಿ, ಚಂದ್ರಣ್ಣ, ಪಂಚಾಕ್ಷರಪ್ಪ, ಬೋರಣ್ಣ, ಬಸವರಾಜ್, ಶಿವಣ್ಣ, ನಾಗೇಶ್, ಸತೀಶ್, ರಾಜು  ನಡೆಸಿಕೊಟ್ಟರು.

 

 

Leave a Reply

Your email address will not be published. Required fields are marked *