ನಾವು ಪರಿಸರವನ್ನು ಬೆಳಸಿದರೆ ಅದು ನಮ್ಮನ್ನು ಉಳಿಸುತ್ತದೆ

ರಾಜ್ಯ

 

ನಾವು ಪರಿಸರವನ್ನು ಬೆಳಸಿದರೆ ಅದು ನಮ್ಮನ್ನು ಉಳಿಸುತ್ತದೆ. ಮರಗಳನ್ನು ಕಡಿಯುವುದಕ್ಕಿಂತ ಸಸಿಗಳನ್ನು ನೆಡುವ ಕೆಲಸವನ್ನು ಮಾಡಬೇಕಿದೆ ಎಂದು ಬಿಜೆಪಿ ಯುವ ಮಖಂಡ ರಘುಚಂದನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಯಂಗಮ್ಮನ ಕಟ್ಟೆ ಬಡಾವಣೆಯಲ್ಲಿನ ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಯನ್ನು ನೆಟ್ಟು ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಸಿಯನ್ನು ನೆಡಲು ಬನ್ನಿ ಎಂದು ಕಡೆಯುವವರು ಕಡಿಮೆಯಾಗಿದ್ದಾರೆ ದೇವಸ್ಥಾನಕ್ಕೆ ಸಹಾಯ ಮಾಡಿ ರಸ್ತೆಯನ್ನು ಮಾಡಿಸಿಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಸಮಯದಲ್ಲಿ ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದವರು ವಿಶ್ವ ಪರಿಸರ ದಿನಾಚರಣೆಯನ್ನು ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ನಾವು ಪರಿಸರವನ್ನು ಉಳಿಸಿ ಬೆಳಸಿದರೆ ಅದು ನಮ್ಮನ್ನು ಮುಂದಿನ ದಿನದಲ್ಲಿ ಉಳಿಸುತ್ತದೆ. ಉತ್ತಮವಾದ ಗಾಳಿ ಸೇವನೆಯಿಂದ ನಮ್ಮ ಆರೋಗ್ಯವೂ  ಚನ್ನಾಗಿರುತ್ತದೆ. ಇಂದಿನ ದಿನಮಾನದಲ್ಲಿ ಕಲುಷಿತವಾದ ಗಾಳಿ ಮತ್ತು ನೀರನ್ನು ಸೇವನೆ ಮಾಡುವುದರ ಮೂಲಕ ನಮ್ಮ ಬದುಕು ದುಸ್ಥರವಾಗಿದೆ. ವಾರಕ್ಕೊಮ್ಮೆ ವೈದ್ಯರನ್ನು ಬೇಟಿ ಮಾಡುವ ಪ್ರಸಂಗ ಬರುತ್ತಿದೆ. ಆದರೆ ಉತ್ತಮವಾದ ಪರಿಸರ ಇದ್ದರೆ ಇವೆಲ್ಲಾ ತಪ್ಪಿಸುತ್ತದೆ. ಹಿನ್ನಲೆಯಲ್ಲಿ ಪರಿಸರವನ್ನು ಉಳಿಸಿ ಬೆಳಸುವ ಕಾರ್ಯಕ್ಕೆ ನಾವೆಲ್ಲರು ಸಹಾ ಮುಂದಾಗಬೇಕಿದೆ ಎಂದು ರಘು ಚಂದನ್ ಕರೆ ನೀಡಿದರು

 

 

ಚಿತ್ರದುರ್ಗದಲ್ಲಿ ರಸ್ತೆಯ ಆಗಲೀಕರಣ ಮಾಡುವ ನೆಪದಲ್ಲಿ ಹಲವಾರು ಹಳೆಯದಾದ ಮರಗಳನ್ನು ಕಡಿದಿದ್ದಾರೆ. ಮರಗಳ ಕಡಿಯವುವಿಕೆಯಿಂದ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಸಸಿ‌ನೆಡುವ ಕಾರ್ಯ ಉತ್ತಮವಾದದು. ಇದು ಚಿತ್ರದುರ್ಗದ ಜನತೆಗೆ ಮಾದರಿಯಾಗಲಿ, ಇದಕ್ಕೆ ನಾವು ಸಹಾ ಕೈಜೋಡಿಸುತ್ತೇನೆ 1000 ಸಸಿಗಳನ್ನು ಕೂಡಿಸುತ್ತೇನೆ, ಅಲ್ಲದೆ ಇಲ್ಲಿ ಕೊಳವೆ ಬಾವಿಯನ್ನು ಹಾಕಿಸುವಂತೆ ಸಂಘದವರು ಮನವಿ ಮಾಡಿದ್ದಾರೆ ಅದಕ್ಕೂ ಸಹಾ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಇಲ್ಲಿ ಸಸಿಗಳನ್ನು ನಡೆವಾಗ ದೊಡ್ಡವರು ನೆಡದೆ ಮನೆಯಲ್ಲಿನ ಮಕ್ಕಳಿಂದ ನೆಡಿಸಿ, ಅದಕ್ಕೆ ಅವರ ಹೆಸರನ್ನು ಇಡಿ, ಅಲ್ಲದೆ ಅವುಗಳಿಗೆ ಪ್ರತಿ ದಿನ ನೀರನ್ನು ಹಾಕಿಸುವ ಅಭ್ಯಾಸವನ್ನು ಮಾಡಿಸಿ ಇದ್ದಲ್ಲದೆ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಿರಿ ಇದರಿಂದ ಮುಂದೆ ನಿಮ್ಮ ಮಕ್ಕಳು ನಿಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ. ಇದರಿಂದ ನಿಮ್ಮ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ. ಇಂದಿನ ಮಕ್ಕಳಿಗೆ ಜಾತಿ ಬದಲು ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿಸುವ ವಾತಾವರಣ ನಿರ್ಮಾಣ ಮಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನ ಅಚರಣೆ ಮಾಡುವ ಹಬ್ಬವಾಗದೆ ವರ್ಷದಲ್ಲಿ ಪೂರ್ತಿ ದಿನ ಮಾಡುವ ಹಬ್ಬವಾಗಬೇಕು ಆಗ ಮಾತ್ರ ನಮ್ಮ ಭೂಮಿ ಹಸಿರಾಗಲು ಸಾಧ್ಯವಿದೆ ಎಂದು ರಘುಚಂದನ್ ತಿಳಿಸಿದರು.

ಪರಿಸರವಾದಿ ಹೆಚ್.ಎಸ್.ಕೆ.ಸ್ವಾಮಿ ಮಾತನಾಡಿ, ವಿದೇಶಿ ವಸ್ತ್ರಗಳಿಗೆ ಮಾರು ಹೋಗಿ, ಖಾದಿ ಬಳಕೆ ಮಾಡುತ್ತಿಲ್ಲ, ಇದರಿಂದ ಹಲವಾರು ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಿ, ಹೂರಗಡೆ ಹೋಗುವಾಗ ಕೈ ಚೀಲ  ತೆಗೆದುಕೊಂಡು ಹೋದರೆ, ಅದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದಂತಾಗುತ್ತದೆ. ಮನೆ ಕಸವನ್ನು ಎಲ್ಲೆಂದರಲ್ಲಿ  ಹಾಕ ಬೇಡಿ ನಗರಸಭೆಯ ವಾಹನಕ್ಕೆ ನೀಡಿ ಇದರಿಂದ ಪರಿಸರವನ್ನು ಉಳಿಸಿ ಎಂದರು. ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸಂಘವನ್ನು 4 ಬಡಾವಣೆಯವರು ಸೇರಿ ನಿರ್ಮಾಣ ಮಾಡಲಾಗಿದೆ ಇಲ್ಲಿ 42 ಮನೆಗಳಿದ್ದು 180 ಜನರಿದ್ದಾರೆ. ಉತ್ತಮವಾದ ಪರಿಸರ ನಿರ್ಮಾಣ ಮಾಡಬೇಕೆಂದು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದ್ದಲ್ಲದೆ ವಿಶ್ವ ತಾಯಂದಿರ ದಿನ, ತಂದೆಯಂದಿರ ದಿನ, ಹುಟ್ಟು ಹಬ್ಬ, ವಿವಾಹ ವಾರ್ಷಿಕ ದಿನ, ಮಕ್ಕಳ ದಿನಾಚರಣೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಇಲ್ಲಿ ಸುಮಾರು 4 ಎಕರೆ ವಿಸ್ತಿರ್ಣದಲ್ಲಿ ಪಾರ್ಕ್ ಇದೆ. ಜಾಗದಲ್ಲಿ ಉತ್ತಮವಾದ ರಸ್ತೆ ಇಲ್ಲ, ಇದರಿಂದ ಬಾಗಕ್ಕೆ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಮಹಿಳಾ ಘಟಕದ ಅಧ್ಯಕ್ಷ ನಳಿನಿ, ರಾಮಪ್ಪ ಭಾಗವಹಿಸಿದ್ದರು.

 

   

Leave a Reply

Your email address will not be published. Required fields are marked *