ಮಾನವ ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರ ನಾಶ ಮಾಡುತ್ತಿದ್ದಾನೆ

ರಾಜ್ಯ

ಜೂನ್‌ 5 ರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಸ್ ಜೆ ಸೋಮಶೇಖರ್ ಹೇಳಿದರು. ಅವರು
ಭರಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಸಿ ನೆಟ್ಟು, ಪರಿಸರ ಪ್ರಬಂಧ ಸ್ವರ್ದೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತಾನಾಡಿದರು. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಇದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.

 

 

 ಸಾವಯವ ಕೃಷಿಗೆ ಉತ್ತೇಜಿಸುವುದರಿಂದ ಭೂಮಿ ಫಲವತ್ತತೆಯ ವಿನ್ಯಾಸ ರಕ್ಷಣೆ ಮಾಡಬಹುದಾಗಿದೆ. ಜೊತೆಗೆ ಆಹಾರಗಳು ಬೆಳೆಗಳು ಶೇ 100ರಷ್ಟು ಸುರಕ್ಷಿತ ಮತ್ತು ಆರೋಗ್ಯಯುತವಾಗಿರುತ್ತವೆ.

ಇಂದು ನೀರಿನ ಸಾಮರ್ಥ್ಯ ನಷ್ಟದ ಜೊತೆಗೆ ಪ್ರಮುಖ ಪರಿಸರ ಸಮಸ್ಯೆಯಾಗಿದೆ. ಈ ಹಿನ್ನೆಲೆ ಭೂಮಿಯ ಗುಣಮಟ್ಟ ರಕ್ಷಣೆ ಮತ್ತು ಆಮ್ಲಜನಕದ ಉದ್ದೇಶದಿಂದ ನಾವು ನೀವೆಲ್ಲರು, ಸೇರಿ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ.
ಶುದ್ಧ ಜಲ ಪರಿಸರ ವ್ಯವಸ್ಥೆಯ ಜಲಚಕ್ರ ಭೂಮಿ ಫಲವತ್ತತೆ ಕಾಪಾಡುತ್ತದೆ. ಈ ಆಧುನಿಕ ಪ್ರಪಂಚದ ಪರಿಸರ ವಿಪತ್ತುಗಳ ಬಗ್ಗೆ ಜಾಗೃತಿ ಮೂಡಿಸುವುದು, ಇಂದಿನ ಮಕ್ಕಳು ದೇಶ ಪೇಮ ಮತ್ತು ಪರಿಸರ ಪ್ರೇಮವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳ ಬೇಕು ಇದಕ್ಕೆ ಪೋಷಕರು ಶಾಲಾ ಶಿಕ್ಷಕರುಗಳು ಮತ್ತು ಸಾರ್ವಜನಿಕರು ಪ್ರೊತ್ಸಾಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಬಗ್ಗೆ ಪ್ರಬಂಧ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದೀಕ್ಷೀತ್‌ ಪ್ರಥಮ ಸ್ಥಾನ, 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮೋಹನ್‌ ದ್ವಿತೀಯ ಸ್ಥಾನ ಮತ್ತು , 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕಿರಣ್‌ಗೆ ಬಹುಮಾನ ನೀಡಲಾಯಿತು.ಸ್ಪರ್ಥೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಿ,ಸಿಹಿ ಹಂಚಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ನ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಹರೀಶ್‌, ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಜಿಲ್ಲಾ ಪಂಚಾಯತ್‌ ನ ಎಡಿಪಿಸಿ ಮೋಹನ್‌ ಕುಮಾರ್‌, ಸಹಾಯಕ ಉಪ ಸಂರಕ್ಷಣಾಧಿಕಾರಿ ನಾಗೇಂದ್ರನಾಯ್ಕ್‌, ವಲಯ ಅರಣ್ಯಾಧಿಕಾರಿ ಅಕ್ಷತಾ, ಸಹಾಯಕ ನಿರ್ದೇಶಕರಾದ ಯರ್ರೀಸ್ವಾಮಿ, ವಲಯ ಅರಣ್ಯಾಧಿಕಾರಿ ಅಕ್ಷತಾ, ತಾಲ್ಲೂಕು ಐಇಸಿ ಸಂಯೋಜಕರಾದ ಸತ್ಯನಾರಾಯಣ, ತಾಂತ್ರಿಕ(ಒಗ್ಗೂಡಿಸುವಿಕೆ) ಸಂಯೋಜಕರಾದ ಶಶಿಧರ್‌, ಪಿಡಿಒ ಶ್ರೀದೇವಿ, ಡಿವೈಅರ್‌ ಎಫ್‌ ವೀರೇಶ್‌ ಮತ್ತು ಗಾಮ ಪಂಚಾಯಿತಿಯ ಸಿಬ್ಬಂದಿಗಳು , ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *