ಲೋಕಸಭಾ ಚುನಾವಣೆ: ಎರಡನೇ ಹಂತದ ಅಂಚೆ ಮತಪತ್ರ ಮತ ಎಣಿಕೆ ತರಬೇತಿ

ರಾಜ್ಯ

ಲೋಕಸಭಾ ಚುನಾವಣೆ: ಎರಡನೇ ಹಂತದ ಅಂಚೆ ಮತಪತ್ರ ಮತ ಎಣಿಕೆ ತರಬೇತಿ

 

 

ಚಿತ್ರದುರ್ಗ ಲೋಕಸಭಾ ಚುನಾವಣೆಯ ಎರಡನೇ ಹಂತದ ಅಂಚೆ ಮತಪತ್ರ ಮತ ಎಣಿಕೆ ತರಬೇತಿಯನ್ನು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಉದ್ಘಾಟಿಸಿ ಅಂಚೆ ಮತ ಎಣಿಕೆ ಸಂಪೂರ್ಣ ಪ್ರಕ್ರಿಯೆಯ ಮಾಹಿತಿ ನೀಡಿದರು.
ತದನಂತರ ಜಿಲ್ಲಾ ಮಾಸ್ಟರ್ ಟ್ರೈನರ್ ನಾಗಭೂಷಣ್ ಅವರು, ಅಂಚೆ ಮತ ಎಣಿಕೆ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ಪಿಪಿಟಿ ಮೂಲಕ ವಿವರಿಸಿದರು. ಜಿಲ್ಲಾ ಸಹಾಯಕ ಚುನಾವಣಾ ಅಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಂಚೆ ಮತಪತ್ರ  ಎಣಿಕೆ ಪ್ರಾತ್ಯಕ್ಷಿಕೆ ನೀಡಿದರು.
ತದನಂತರ ಎಲ್ಲಾ ತಂಡಗಳ ಸಹಾಯಕ ಅಂಚೆ ಮತಪತ್ರ ಎಣಿಕೆಯ ಚುನಾವಣಾ ಅಧಿಕಾರಿಗಳು, ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‍ಗಳಿಗೆ ವಿವಿಧ ತಂಡಗಳಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ಪೂರ್ವಭಾವಿಯಾಗಿ ಅಭ್ಯಾಸ ಮಾಡಿಸಿದರು.
ತರಬೇತಿಯಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಎಸ್.ಜೆ.ಸೋಮಶೇಖರ್ ಇದ್ದರು.

Leave a Reply

Your email address will not be published. Required fields are marked *