ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣ ಸಿಬಿಐಗೆ ವಹಿಸಿ: ಗೋವಿಂದ ಕಾರಜೋಳ

ರಾಜ್ಯ

ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಿಂದ, ಸರ್ಕಾರದ ಖಜಾನೆ ನಿರಂತರ ಲೂಟಿಯಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಇದು ಭ್ರಷ್ಟಾಚಾರ ಅಲ್ಲ, ಹಗಲು ದರೋಡೆ, ಮಾರ್ಚ್ ತಿಂಗಳಲ್ಲಿ 187 ಕೋಟಿ ಹಣವನ್ನು ಬೇರೆ ಬೇರೆ ಖಾತೆ ತೆರೆದು, ಹಣ ವರ್ಗಾವಣೆ ಮಾಡಿದ್ದಾರೆ.ಇದೇ ಹಣವನ್ನು ನೆರೆಯ ಆಂಧ್ರ ಮತ್ತು ತೆಲಂಗಾಣ ಚುನಾವಣೆಗಳಿಗೆ ಕೊಟ್ಟಿದ್ದಾರೆ ಎಂದು ಜನರು ಮಾತಾಡುತ್ತಿದ್ದಾರೆ. ಆದರೆ ಇದುವರೆಗು ಸಿಎಂ ಸಿದ್ದರಾಮಯ್ಯ ಒಂದು ಮಾತಾಡಿಲ್ಲ.ಇಷ್ಟೊತ್ತಿಗಾಗಲೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕಿತ್ತು. ನಿಷ್ಪಕ್ಷಪಾತ ತನಿಖೆ ನೆಡೆಯಬೇಕಿತ್ತು. ಆದರೆ ಭಂಡತನಕ್ಕೆ ಬಿದ್ದು,ಸಚಿವರನ್ನು ಉಳಿಸಿಕೊಳ್ಳುವ ಕೆಲಸವನ್ನು ಕೆಲ ಸಚಿವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.2022ರಲ್ಲಿ ಸುಳ್ಳು ಆರೋಪ ಮಾಡಿದ್ದು, ಅಂದು ಈಶ್ವರಪ್ಪ ಮೇಲೆ ಕೊಲೆ ಆರೋಪ ಹೊರಿಸಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು  ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆದರೆ ಇಂದು ನೇರವಾಗಿ ಸರ್ಕಾರದ ಖಜಾನೆಯಿಂದಲೇ ಹಣ ಹೋಗಿದೆ. ಇದರಿಂದ ಸಿದ್ದರಾಮಯ್ಯ ನೈತಿಕತೆಯನ್ನು ಕಳೆದುಕೊಂಡಿದ್ದು, ನೀವೇ ರಾಜೀನಾಮೆ ಕೊಟ್ಟು, ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಿತ್ತು. ಇಲ್ಲವೇ ಸಿಬಿಐ ತನಿಖೆಗೆ ಆದೇಶಿಸಬೇಕಿತ್ತು. ಇದು ಬಿಟ್ಟು ಸಿಓಡಿ ತನಿಖೆ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಸಿಓಡಿ‌ ತನಿಖೆ ಸಾದ್ಯವಿಲ್ಲ. ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಎಸ್ಟಿ ನಿಗಮದ ಪ್ರಧಾನ ವ್ಯವಸ್ಥಾಪಕರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಮಾಡಿಸಿದ್ದಾರೆ. ಆದ್ದರಿಂದ ಕೂಡಲೇ ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬಂಢತನದಿಂದ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಸಚಿವರಷ್ಟೆ ಅಲ್ಲ, ಇಡೀ ಸವಿವ ಸಂಪುಟ ರಾಜೀನಾಮೆ ಕೊಡಬೇಕಿತ್ತು. ಈಗಲೂ ಇದನ್ನು ಸಿಬಿಗೆ ವಹಿಸಿಬೇಕೆಂದರು. ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ನಿಷ್ಪಕ್ಷಪಾತವಾದ ತನಿಖೆಯಾಗಬೇಕು. ಶಿಕ್ಷೆಗೆ ಗುರುಯಾಗಲೇ ಬೇಕು.

 

 

ಶತ್ರು ಬೈರವಿಯಾಗ: ಮೋದಿಯವರು ಸಿಎಂ ವಿರುದ್ಧ ಶತ್ರು ಭೈರವಿಯಾಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಬಸವ ತತ್ವವನ್ನು ನಂಬಿದವನು, ನಾನು ಗೊಡ್ಡು ಕಂದಚಾರ, ನಂಬಿಕೆಗಳಿಗೆ ಬೆಲೆ ಕೊಟ್ಟಿಲ್ಲ, ಕೊಡೋದು ಇಲ್ಲ.ಇದರಿಂದ ಅದರ ಬಗ್ಗೆ ಪ್ರತಿಕ್ರಿಯೆ ಕೇಳುವುದು ಅನಾವಶ್ಯಕ ಎಂದರು. ಈ ಸಮಯದಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *