ಗುಲಾಬಿ ಹೂವು ಸಿಹಿ ನೀಡಿ ಮೆರವಣಿಗೆ ಮೂಲಕ ಮಕ್ಕಳನ್ನು ಶಾಲೆಗೆ ಕರ್ಕೊಂಡು ಬಂದ ಶಿಕ್ಷಕರು

ರಾಜ್ಯ

2024-25 ನೇ ಸಾಲಿನ ದಾಖಲಾತಿ ಆಂದೋಲನ ಮತ್ತು ಪ್ರಾರಂಭೋತ್ಸವ ಕಾರ್ಯಕ್ರಮ

 

 

ಈ  ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ದಾಖಲಾತಿ ಆಂದೋಲನವನ್ನು ಚಿತ್ರದುರ್ಗ ತಾಲೂಕಿನ  ಕವಾಡಿಗರಟ್ಟಿ ಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಎಸ್ ಜಿ ಸೋಮಶೇಖರ್  ಹಾಗೂ ಉಪ ಕಾರ್ಯದರ್ಶಿ  ತಿಮ್ಮಪ್ಪ  ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ, ಉಚಿತ ಪಠ್ಯಪುಸ್ತಕ ಹಾಗೂ ಶಾಲಾ ಸಮವಸ್ತ್ರ, ನೀಡುವ ಮೂಲಕ ಗುಲಾಬಿ ಹೂಗಳನ್ನು ನೀಡಿ ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾತಾಡಿದ, ಶಾಲೆಯ ಮುಖ್ಯ ಶಿಕ್ಷಕರು, 29 ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದರು. ಕವಾಡಿಗರಟ್ಟಿ ಜನ ವಸತಿ ಪ್ರದೇಶದಿಂದ ವಿದ್ಯಾರ್ಥಿಗಳಿಗೆ ಟೋಪಿಗಳು ಹಾಗೂ ಗುಲಾಬಿ ಹೂವನ್ನು ನೀಡಿ ಮೆರವಣಿಗೆಯ ಮೂಲಕ ಶಾಲೆಯ ಬಳಿ ಕರೆದುಕೊಂಡು ಬಂದು ಶಾಲೆಯ ಒಳಗೆ ಸಿಹಿ ವಿತರಣೆ ಮಾಡಿ ಈ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಸಿರುದ್ದೀನ್, ಡಿವೈಪಿಸಿ ವೆಂಕಟೇಶಪ್ಪ,ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ನಾಗಭೂಷಣ್  ಕ್ಷೇತ್ರ ಸಮನ್ವಯಾಧಿಕಾರಿ, ಸಂಪತ್ ಕುಮಾರ್ ಈ, ಶಾಲಾ ಸಿಬ್ಬಂದಿ ಪೋಷಕರು ಎಸ್ ಡಿಎಂಸಿ ಸಿಬ್ಬಂದಿ ಸಿ ಆರ್ ಪಿ  ಅಜಯ್ ಕುಮಾರ್ ಕರ.ಜಿ ಹಾಗೂ ಬಿ ಐ ಇ ಆರ್ ಟಿ ಗಳಾದ ರಾಜೀವ್ ಹಾಗೂ ರಾಜಣ್ಣ  ಹಾಗೂ ಸಮಸ್ತ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *