ಸರ್ಕಾರ ನೌಕರರ ಪರವಾಗಿದೆ: ಪೂರ್ಣಿಮಾ ಶ್ರೀನಿವಾಸ್

ರಾಜ್ಯ

ಕಾಂಗ್ರೆಸ್  ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ.
ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಡಿ. ಕೆ ಶಿವಮೂರ್ತಿ ತಿಳಿಸಿದರು.ಅವರು ತಾಲೂಕಿನ ಹೆಚ್, ಡಿ, ಪುರದ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಪರ ಕೈಗೊಂಡ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಯಾವುದೇ ಸಮಸ್ಯೆ ಪರಿಹರಿಸುವ ಶಕ್ತಿ ನಮ್ಮ ಸರಕಾರಕ್ಕೆ ಇದೆ. ಶಿಕ್ಷಕರು ಚುನಾವಣೆಯಲ್ಲಿ ಸರಕಾರಕ್ಕೆ ಬೆಂಬಲಿಸಬೇಕು. ಅದಕ್ಕೆ ಪ್ರತಿಫಲವಾಗಿ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಈ ಬಾರಿ ಶಿಕ್ಷಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ನಿವಾಸಗೆ ಬೆಂಬಲಿಸಿ ಗೆಲ್ಲಿಸಿಕೊಂಡಬರಬೇಕೆಂದರು.
ಅಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಈಭಾರಿ ಶಿಕ್ಷಕರು ಕಾಂಗ್ರೇಸ್ ಪಕ್ಷದ ಪರವಾಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯಾದ ಡಿ ಟಿ ಶ್ರೀನಿವಾಸ್ ಪೊಲೀಸ್ ಇಲಾಖೆ ಹಾಗೂ ಕೆ ಎ ಎಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಒಂದು ದೊಡ್ಡ ಶಿಕ್ಷಣ ಸಂಸ್ಥೆಯ ಸದಸ್ಯರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದ ವೈ.ಎ.ನಾರಾಯಣಸ್ವಾಮಿಯನ್ನು ಈ ಬಾರಿ ಸೋಲಿಸಲು ಶಿಕ್ಷಕರು ಈಗಾಗಲೆ ಎಲ್ಲಾ ಕಡೆಯಲ್ಲಿ ಶಪಥ ಮಾಡಿದ್ದಾರೆ ಎಂದರು.
ಮಾಜಿ ಶಾಸಕಿ ಪೂರ್ಣಿಮಾ ಮಾತನಾಡಿ, ಕಾಂಗ್ರೆಸ್ ಪಕ್ಷದ ಸರಕಾರ ಕೂಡಲೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುತ್ತದೆ. ನೌಕರರ ಪರವಾಗಿದೆ ಸರಕಾರ. ಬಿಜೆಪಿ ಸರಕಾರ ನೌಕರರ ವಿರೋಧಿ ನೀತಿ ನಿಯಮ ಜಾರಿಗೆ ತಂದಿತ್ತು. ಈಗಿನ ಸರಕಾರ ಎಲ್ಲಾ ಸಮಸ್ಯೆಗೆ ಮುಕ್ತಿ ನೀಡಿ ಉತ್ತಮ ಸೌಲಭ್ಯಗಳನ್ನು ಕೊಡಲಿದೆ. ಶಿಕ್ಷಕರ ಎಲ್ಲಾ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಪಕ್ಷದ ಪ್ರಣಾಳಿಕೆ ಜತೆ ೭ ನೇ ವೇತನ ವರದಿ, ಹಳೆಯ ಪಿಂಚಣಿ, ಕಾಲಮೀತಿ ಭಡ್ತಿ ನೀಡಲಿದ್ದು, ಸರಕಾರಕ್ಕೆ ಬೆಂಬಲಿಸಲು ನಮ್ಮ ಅಭ್ಯರ್ಥಿ ಗೆಲ್ಲಿಸಿ ಸರಕಾರ ಶಿಕ್ಷಕರ ಪರವಾಗಿ ಕೆಲಸ ಮಾಡಲು ಶಕ್ತಿ ನೀಡಬೇಕೆಂದರು.
ರಾಜ್ಯದಲ್ಲಿ ಬಿಸಿ ಊಟ ನೀಡಿದ್ದು, ಮಕ್ಕಳಿಗೆ ಹಾಲು, ಬಾಳೆಹಣ್ಣು ಶೂ, ಸಮವಸ್ತ್ರ ನೀಡಿದ್ದು ಕಾಂಗ್ರೆಸ್ ಸರಕಾರ. ಶ್ರೀನಿವಾಸ್, ವೃತ್ತಿಯಲ್ಲಿ ಕೆಎಎಸ್ ಅಧಿಕಾರಿಯಾಗಿ, ನಮ್ಮ ಶಿಕ್ಷಣ ಸಂಸ್ಥೆಗಳ ಕಾರ್ಯದಶಿಯಾಗಿದ್ದವರು. ಶಿಕ್ಷಕರ ಸಮಸ್ಯೆ ಗೊತ್ತು. ಶಿಕ್ಷಕರ ಧ್ವನಿಯಾಗಿ ಸರಕಾರದಲ್ಲಿ ಕೆಲಸ ಮಾಡಲು ಅವಕಾಶ ನೀಡಿ ಎಂದರು.
ಕಳೆದ ಹದಿನೈದು ವರ್ಷದಿಂದ ಎಂಎಲ್‌ಸಿಯಾಗಿರುವ ವೈ.ಎ.ನಾರಾಯಣಸ್ವಾಮಿ ಎಂದು ಶಿಕ್ಷಕರ ಸಮಸ್ಯೆ ಕುರಿತು ಹೋರಾಟ ನಡೆಸಿದ್ದಾರೆ. ಏಕೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿಲ್ಲ. ಬಿಜೆಪಿ ಸರಕಾರದಲ್ಲಿ ಇವರ ಕೊಡುಗೆ ಏನು. ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆ ಕುರಿತು ಸುಳ್ಳು ಭರವಸೆ ಇವರ ಸಾಧನೆ. ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೋಂದು ಜ್ವಲಂತ ಸಮಸ್ಯೆಗಳಿಗೆ ಏಕೆ ಪರಿಹಾರ ಕೊಡಿಸಿಲ್ಲ ವೈ.ಎ.ಎನ್ ಎಂದು ಪ್ರಶ್ನಿಸಿದರು. ಕೆಲಸ ಮಾಡದೆ ಯಾವ ಮುಖ ಇಟ್ಟು ಕೊಂಡು ಶಿಕ್ಷಕರನ್ನು ಮತ ಕೇಳುತ್ತಾರೆ. ಬದಲಾವಣೆ ಕಾಲ ಬಂದಿದೆ. ಶಿಕ್ಷಕರು ಕಾಂಗ್ರೆಸ್ ಪಕ್ಷದ ಶ್ರೀನಿವಾಸ ಗೆ ಮತ ನೀಡಿ ಈ ಕ್ಷೇತ್ರವನ್ನು ಗೆಲ್ಲಿಸಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಎನ್, ಎಸ್, ಯು, ಐ, ಅಧ್ಯಕ್ಷರಾದ ಕಿರಣ್ ಯಾದವ್, ಮುಖಂಡರಾದ ದುಮ್ಮಿ ಚಿತ್ತಪ್ಪ, ಗ್ರಾ. ಪಂ ಅಧ್ಯಕ್ಷರಾದ ದಿವಾಕರ್, ಹೆಚ್ ಡಿ ರಂಗಯ್ಯ, ಸೇರಿದಂತೆ ಅನೇಕ ಶಿಕ್ಷಕರು ಮುಖಂಡರುಗಳಿದ್ದರು.

 

 

 

Leave a Reply

Your email address will not be published. Required fields are marked *