ಗ್ಯಾರಂಟಿ ಯೋಜನೆಯಿಂದ ಬಡವರ ಮನೆಗಳಲ್ಲಿ ಜ್ಯೋತಿ ಬೆಳಗುತ್ತಿದೆ

ರಾಜ್ಯ

ಸರಕಾರದ ಗ್ಯಾರಂಟಿ ಯೋಜನೆಯಿಂದ ಬರುವ ಹಣದಿಂದ, ರಾಜ್ಯದ ಬಡವರ ಮನೆಗಳಲ್ಲಿ ಜ್ಯೋತಿ ಬೆಳಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು. ಅವರು ಪಟ್ಟಣದ ಸ್ನೇಹ ಕಂಫರ್ಟ್ ನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವಿಧಾನ ಪರಿಷತ್ ಅಭ್ಯರ್ಥಿ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಯಾವುದೇ ಸಮಸ್ಯೆ ಪರಿಹರಿಸುವ ಶಕ್ತಿ ಸರಕಾರಕ್ಕೆ ಇದೆ. ಸರಕಾರವನ್ನು ಬೆಂಬಲಿಸ ಈ ಬಾರಿ ಶಿಕ್ಷಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ನಿವಾಸ್ ಗೆ ಬೆಂಬಲಿಸಬೇಕೆಂದರು.
ಶಿಕ್ಷಕರ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದ ನಾರಾಯಣ ಸ್ವಾಮಿಯನ್ನು ಈ ಬಾರಿ ಸೋಲಿಸಲು ಶಿಕ್ಷಕರ ಶಪಥ ಮಾಡಿದ್ದಾರೆ ಎಂದರು.
ಮಾಜಿ ಶಾಸಕಿ ಪೂರ್ಣಿಮಾ ಮಾತನಾಡಿ,ಕಾಂಗ್ರೆಸ್ ಪಕ್ಷದ ಸರಕಾರ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಬಿಜೆಪಿ ನೌಕರರ ವಿರೋಧಿ ನೀತಿ ನಿಯಮ ಜಾರಿಗೆ ತಂದು ಶಿಕ್ಷಕರನ್ನು ಹತ್ತಿಕ್ಕುವ ಕೆಲಸ ನಡೆಸಿದೆ.
ಪಕ್ಷದ ಪ್ರಣಾಳಿಕೆ ಜತೆ ೭ ನೇ ವೇತನ ವರದಿ, ಹಳೆಯ ಪಿಂಚಣಿ, ಕಾಲಮೀತಿ ಭಡ್ತಿ ನೀಡಲಿದೆ. ಬಿಸಿ ಉಟ ನೀಡಿದ್ದು, ಮಕ್ಕಳಿಗೆ ಹಾಲು, ಶೋ,ಮೊಟ್ಟೆ, ನೀಡಿದ್ದು ಕಾಂಗ್ರೆಸ್ ಸರಕಾರ.
ಶ್ರೀನಿವಾಸ, ಕೆಎಸ್ ಅಧಿಕಾರಿಯಾಗಿ ಶಿಕ್ಷಣ ಸಂಸ್ಥೆಗಳ ಕಾರ್ಯದಶಿಯಾಗಿ ಶಿಕ್ಷಕರ ಸಮಸ್ಯೆ ಅರಿತುಕೊಂಡಿದ್ದು, ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ.ಕಳೆದ ಹದಿನೈದು ವರ್ಷಗಳ ಕಾಲ ಎಂ ಎಲ್ ಸಿ ಆಗಿದ್ದ ನಾರಾಯಣ ಸ್ವಾಮಿ ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆ ಕುರಿತು ಯಾವುದೇ ಕೆಲಸ ಮಾಡಿಲ್ಲ, ಯಾವ ಮುಖ ಇಟ್ಟು ಕೊಂಡು ಮತ ಕೇಳುತ್ತಾರೆ. ಬದಲಾವಣೆ ಕಾಲ ಬಂದಿದೆ. ಶಿಕ್ಷಕರು ಕಾಂಗ್ರೆಸ್ ಪಕ್ಷದ ಶ್ರೀನಿವಾಸ ಗೆ ಮತ ನೀಡಿ ಈ ಕ್ಷೇತ್ರವನ್ನು ಗೆಲ್ಲಿಸಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಜಿ.ಎಸ್. ಮಾತನಾಡಿ, ರಾಜ್ಯದ ಸರ್ಕಾರದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತಂದು ಸರಕಾರಿ ನೌಕರರ ಹಿತ ಕಾಯಲಾಗುತ್ತದೆ ಎಂದು ಸಿಎಂ.ಭರವಸೆ ನೀಡಿದ್ದಾರೆಂದು ತಿಳಿಸಿದರು.
ಅಧ್ಯಕ್ಷ ಹನುಮಂತಪ್ಪ,ಮಾಜಿ ಸಂಸದ ಬಿ.ಎಸ್.ಚಂದ್ರಪ್ಪ, ಹನುಮಲಿಷಣ್ಮುಖಪ್ಪ, ಜಿಲ್ಲಾಧ್ಯಕ್ಷ ತಾಜಾ ಪೀರ್, ಜಿ.ಪಂ.ಸದಸ್ಯರಾದ ಬಿ.ಗಂಗಾಧರ, ಡಿ.ಕೆ.ಶಿವಮೂರ್ತಿ, ಎಂ.ಜಿ.ಲೋಹಿತ್ ಕುಮಾರ್,ಎಸ್.ಜಿ.ರಂಗಸ್ವಾಮಿ,ನರಸಿಂಹಮೂರ್ತಿ,ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಸೈಯದ್ ಸಜೀಲ್, ಕೆ.ಸಿ.ರಮೇಶ್, ಮನ್ಸೂರ್, ಮಂಜುನಾಥ್, ಮಜರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಶಿವಕುಮಾರ್, ಹೆಚ್.ಡಿ.ರಂಗಯ್ಯ, ಸಿದ್ಧಲಿಂಗ ಸ್ವಾಮಿ, ಶಿವಕುಮಾರ್, ಹಲವಾರು ಮುಖಂಡರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *