ಮೇ 15 ರಂದು ಮದಕರಿ ನಾಯಕರ ಪುಣ್ಯ ಸ್ಮರಣೆ ಕಾರ್ಯಕ್ರಮ

ರಾಜ್ಯ

 

 ರಾಜವೀರ ಮದಕರಿನಾಯಕರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮೇ 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಾಯಕ ಸಮಾಜದ ಮುಖಂಡರು ನೆಡೆಸಿದ, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮದಕರಿನಾಯಕರ ಹೆಸರು  ಮರೆಯಗಬಾರದು ಎಂಬ ದೃಷ್ಟಿಯಿಂದ ವರ್ಷದಲ್ಲಿ, ಮದಕರಿನಾಯಕರ ಪಟ್ಟಾಭಿಷೇಕ, ಪುಣ್ಯ ಸ್ಮರಣೆ ಮತ್ತು ಮದಕರಿನಾಯಕ ಜಯಂತ್ಯೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ. ಅದರಂತೆ ಮೇ ೧೫ ರಂದು ಪುಣ್ಯಸ್ಮರಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ ೧೧ಕ್ಕೆ ಪ್ರತಿಮೆ ಮುಂಭಾಗದಲ್ಲಿ ಹೂವಿನ ಅಲಂಕಾರ, ಪುಷ್ಪಾರ್ಚನೆ, ಸಂಜೆ ಮೇಣದ ಬತ್ತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಾಲ್ಮೀಕಿ ಭವನ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ:

ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕ ಸಮುದಾಯ ಭವನ ಇನ್ನೂ ಪೂರ್ಣವಾಗಿಲ್ಲ, ಅದು ಆವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಇದಕ್ಕೆ ಅಧಿಕಾರಿಗಳು ಹಾಗು ರಾಜಕಾರಣಿಗಳು ಕಾರಣವಾಗಿದ್ದಾರೆ, ಇದರ ಬಗ್ಗೆ ತಿಳಿಸಲಾಗಿದೆ ಹಿನ್ನಲೆಯಲ್ಲಿ ವಾಲ್ಮಿಕಿ ಭವನದ ಉದ್ಘಾಟನೆ ತಡವಾಗುತ್ತಿದೆ ಎಂದು ಕಾಂತರಾಜ್, ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಇರುವುದಿಂದ  ರಾಜಕಾರಣಿಗಳು ಆಗಮಿಸುತ್ತಿಲ್ಲ. ಹಾಗೂ ಯಾವ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜ ಸೇರಿ ಎಲ್ಲಾ ಸಮಾಜದ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕಾಂತರಾಜ್ ಮನವಿ ಮಾಡಿದರು.

 

 

 

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ನೀತಿ ಸಂಹಿತೆ ಜಾರಿ ಇರುವುದಿಂದ ಸರಳವಾಗಿ ಮದಕರಿನಾಯಕ ಪುಣ್ಯ ಸ್ಮರಣೆ ಮಾಡಲಾಗುತ್ತಿದ್ದು ಮುಂದಿನ ಬಾರಿ ಅದ್ದೂರಿಯಾಗಿ ಮಾಡಲಾಗುತ್ತದೆ. ಪುಣ್ಯ ಸ್ಮರಣೆಗೆ ಎಲ್ಲಾ ಸಮಾಜದವರು ಭಾಗವಹಿಸಿ ಎಂದರು.

 

ಸಂದರ್ಭದಲ್ಲಿ ಮುಖಂಡರಾದ ಜೆ.ಎನ್.ಕೋಟೆ ಗುರುಸಿದ್ದಪ್ಪ, ಗೋಪಾಲಸ್ವಾಮಿನಾಯಕ್, ದೀಪು, ಅಂಜಿನಪ್ಪ, ಕಾಟೀಹಳ್ಳಿ ಕರಿಯಪ್ಪ, ತಿಪ್ಪೇಸ್ವಾಮಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *