ಕೋಟೆ ನಾಡಿನಲ್ಲಿ ಶ್ರೀ ರಾಮ ಮಂದಿರದ ಮಾದರಿ 45001ಕ್ಕೆ ಹರಾಜು

ರಾಜ್ಯ

ಆಯೋಧ್ಯೆಯಿಂದ ತರಿಸಿದ್ದ ರಾಮ ಮಂದಿರದ ಮಾದರಿಯು 45001 ರೂಪಾಯಿಗಳಿಗೆ ಹರಾಜಾಗಿದ್ದು,ಇದನ್ನು ಫೋರ್ಟ್ ಸಿಟಿ ಕ್ರಿಕೆಟ್ ಅಸೋಸಿಯೆಷನ್ ತನ್ನದಾಗಿಸಿಕೊಂಡಿತು. ಆಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಸಾಕ್ಷಿಯಾಗಿತ್ತು. ಇದರ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗದಲ್ಲಿ ಕೂಡ ಎಲ್ಲೆಡೆ ಶ್ರೀರಾಮ ರಾಮೋತ್ಸವ ಕಾರ್ಯಕ್ರಮಗಳು ನಡೆದವು. ಅನೇ ಬಾಗಿಲ ಬಳಿಯ ಪ್ರಸನ್ನ ಗಣಪತಿಯ ಆವರಣದಲ್ಲಿ ನಡೆದ ಶ್ರೀರಾಮ ರಾಮೋತ್ಸವ ಕಾರ್ಯಕ್ರಮವು ರಾಜಸ್ಥಾನ ಸಮಾಜದಿಂದ ಅದ್ದೂರಿಯಾಗಿ ನಡೆಯಿತು. ಇದರಲ್ಲಿ ಎಲ್ ಇಡಿ ಯಲ್ಲಿ ರಾಮ ಪ್ರತಿಷ್ಠಾಪನೆಯ ವೀಕ್ಷಣೆಯನ್ನು ಆಯೋಜಿಸಲಾಗಿತ್ತು. ಪಕ್ಕದ ಮಂಟಪದಲ್ಲಿ ಬೃಹದಾಕಾರದ ಶ್ರೀರಾಮ ಮೂರ್ತಿ ಸಮೇತ ರಾಮಮಂದಿರದ ಮಾದರಿಯನ್ನು‌ ಕೂಡ‌ ಇರಿಸಿ ಪೂಜಿಸಲಾಯಿತು. ನೆರೆದಿದ್ದ ಭಕ್ತರ ಸುಮ್ಮುಖದಲ್ಲಿ ಶ್ರೀರಾಮ‌ಧ್ವಜ ಹಾಗೂ ರಾಮ ಮಂದಿರದ ಮಾದರಿಯನ್ನು ಹರಾಜಾಕಲಾಯಿತು. ಹರಾಜಿನಲ್ಲಿ ಹಲವರು ಭಾಗವಹಿಸಿ ಕೂಗಿದರು. ಕೊನೆಗೆ ಮಂದಿರದ ಮಾದರಿಯನ್ನು ಚಿತ್ರದುರ್ಗ ಫೋರ್ಟ್ ಸಿಟಿ ಕ್ರಿಕೆಟ್ ಅಸೋಸಿಯೇಷನ್ ಪಾಲಾಯಿತು. ಧ್ವಜವು ಮಂಗಳಾ ಟ್ರೇಡರ್ಸ್ ನ ಮಂಗಳ ಸಿಂಗ್ ಅವರ ಪಾಲಾಯಿತು. ರಾಮ ಮಂದಿರದ ಮಾದರಿಯನ್ನು‌ ಉತ್ತರ ಪ್ರದೇಶದಿಂದ ತಯಾರು ಮಾಡಿಸಿ ತರಿಸಲಾಗಿತ್ತು. ಇದಕ್ಕೆ 35 ಸಾವಿರ ವೆಚ್ಚ ತಗುಲಿದ್ದು, ಚಿತ್ರದುರ್ಗದಲ್ಲಿ ರಾಮ ಮಂದಿರದ ಬಳಿಯಿರುವ ಏರ್ ಪೋರ್ಟ್, ರೈಲ್ವೇ ನಿಲ್ದಾಣ ಇವುಗಳ ಮಾದರಿ ತಯಾರಿಸಿದ್ದು, 15 ಸಾವಿರ ಒಟ್ಟು 50 ಸಾವಿರ ಖರ್ಚಾಗಿತ್ತು. ಹರಾಜಿನಲ್ಲಿ 45 ಸಾವಿರ ಬಂದಿದೆ ಎಂದು ರಾಜಸ್ಥಾನ ಸಮಾಜದ ಮುಖಂಡರು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *