ಮದಕರಿ ಜಯಂತೋತ್ಸವಕ್ಕೆ ಸಜ್ಜುಗೊಂಡ ಕೋಟೆ ನಗರಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಮದಕರಿನಾಯಕ ಪುತ್ಥಳಿಗೆ ಲೈಟಿಂಗ್ ಟ್ರೆಸ್ , ಪುಷ್ಪ ಅಲಂಕಾರದ ಕುರಿತು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಅಲಂಕಾರದ ಪರಿಶೀಲನೆ ನಡೆಸಿದರು.

ರಾಜವೀರ ಮದಕರಿನಾಯಕ ಪುತ್ಥಳಿ ಬಳಿಯಲ್ಲಿ ಸಿನಿಮಾ ಶೈಲಿಯಲ್ಲಿ ಡ್ರೆಟ್ ಸೆಟಪ್ ನ್ನು ಕೂರಿಸಲಾಗಿದೆ. ಮದಕರಿನಾಯಕ ಪ್ರತಿಮೆ ಸುತ್ತ 20 ಅಡಿಯ ಎತ್ತರದ ಲೈಟ್ ಗಳು ಶೂಟಿಂಗ್ ಲೈಟ್ ರೀತಿ ಕಲರ್ ಫುಲ್ ಲೈಟ್ ಗಳು ಹಾಕಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಿಂದ ಹೂವುಗಳನ್ನು ತರಿಸಿದ್ದು ವಿಶೇಷ ಅಲಂಕಾರಕ್ಕಾಗಿ ಬೆಂಗಳೂರಿನಿಂದ ತಂಡ ಆಗಮಿಸಿದ್ದು ಅಂತಿಮ ಹಂತದ ಸಿದ್ದತೆ ಮಾಡಲಾಗುತ್ತಿದೆ. ಸರ್ಕಲ್ ಸುತ್ತಲೂ ಪಿಂಕ್ ಬಣ್ಣದ ಬಟ್ಟೆಯಲ್ಲಿ ಅಲಂಕಾರಮಾಡಲಾಗುತ್ತಿದೆ. .

 

 

ನಗರದ ಚಳ್ಳಕೆರೆ ಗೇಟ್ ನಿಂದ ಕನಕ ವೃತ್ತದವರೆಗೆ ಮದಕರಿನಾಯಕರ ರಾಜ ಆಳ್ವಿಕೆಯ ರಾಜ ಲಾಂಛನದ ಬಾವುಟಗಳು ಕಟ್ಟಲಾಗಿದೆ. ಸಂಗೊಳ್ಳಿ ರಾಯಣ್ಣ, ಓನಕೆ ಒಬವ್ವ, ಕನಕದಾಸರ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ನಗರದ ಮುಖ್ಯ ರಸ್ತೆಯಲ್ಲಿ ಪೂರ್ತಿ ಲೈಟ್ ಅಲಂಕಾರ ಮಾಡಲಾಗಿದೆ.ನೂತನ ವಾಲ್ಮೀಕಿ ಭವನಕ್ಕೆ ಲೈಟ್ ಸರಗಳು ಹಾಕಲಾಗಿದೆ. ಗಾಂಧಿ ಸರ್ಕಲ್ ಸುತ್ತಲೂ ಮದಕರಿನಾಯಕರ ಭಾವಚಿತ್ರದಲ್ಲಿ ಸರ್ಕಲ್ ನಿರ್ಮಿಸಲಾಗಿದೆ. ನಗರದಲ್ಲಿ ಮದಕರಿ ಜಯಂತಿಯ ಬ್ಯಾನರ್ ಗಳು ರಾರಜಿಸುತ್ತಿವೆ.

ಈ ಸಂದರ್ಭದಲ್ಲಿ ಬಿ.ಕಾಂತರಾಜ್ ಮಾತನಾಡಿ ನಾಳೆ ಬೆಳಗ್ಗೆ ಉಚ್ಚೆಂಗಿಯಲ್ಲಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮದಕರಿನಾಯಕ ಭರಮಸಾಗರದ ಹತ್ತಿರ ಇರುವ ನೀರ್ತಡಿ ರಂಗನಾಥಸ್ವಾಮಿ ಮದಕರಿನಾಯಕರ ಮನೆ ದೇವರು ಅಲ್ಲಿ ಸಹ ಪೂಜೆ ಸಲ್ಲಿಸಲಾಗುತ್ತದೆ. ಸುಮಾರು 11 ರಿಂದ 12 ಗಂಟೆಗೆ ಮದಕರಿನಾಯಕರಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಎರಡು ಡಿಜೆಯನ್ನೂ ಪುಣೆಯಿಂದ ತರಿಸಲಾಗಿದೆ. ಅದ್ಭುತವಾಗಿ ಬರುತ್ತಿದ್ದು ಜಿಲ್ಲೆ ಮತ್ತು ರಾಜ್ಯದಿಂದ ಎಲ್ಲಾ ಸಮಾಜದ ಬಂಧುಗಳು ಆಗಮಿಸಲು ಅದ್ದೂರಿ ಮೆರವಣಿಗೆಗೆ ನೀವು ಸಾಕ್ಷಿಯಾಗಿ ಎಂದು ಮನವಿ ಮಾಡಿತ್ತೇನೆ ಎಂದರು.

 

Leave a Reply

Your email address will not be published. Required fields are marked *