ಐದು ಜನರ ಬಲಿ ಪಡೆದ ಕವಾಡಿಗರ ಹಟ್ಟಿ ಚಿತ್ರಣ ಬದಲಾಗಲಿದೆ: ಸಚಿವ ಡಿ‌.ಸುಧಾಕರ್

ರಾಜ್ಯ

ಕಲುಷಿತ ನೀರು ಸೇವನೆಯಿಂದ ಐದು ಜನರ ಬಲಿ ಪಡೆದ ಕವಾಡಿಗರ ಹಟ್ಟಿ ಗ್ರಾಮದ ಅಭಿವೃದ್ದಿಗೆ ನಗರಾಭಿವೃದ್ದಿ ಮತ್ತು ಕೆಡಬ್ಲಿಯು ಎಸ್ ಎಸ್ ಬಿ ಯಿಂದ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಯೋಜನಾ ಮತ್ತು ಸಾಂಖಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
4 ಕೋಟಿ ವೆಚ್ಚದಲ್ಲಿ ಕವಾಡಿಗರ ಹಟ್ಟಿಯ ಸಂಪೂರ್ಣ ಚಿತ್ರಣ ಬದಲಿಸಲಾಗುತ್ತದೆ. 21/2 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕ್ ಗಳು, ಒಳ ಚರಂಡಿ ವ್ಯವಸ್ಥೆ , ತಾತ್ಕಾಲಿಕ ಸಾಮೂಹಿಕ ಶೌಚಾಲಯಗಳು, ಮನೆ ಇಲ್ಲದ ದಲಿತ ಕುಟುಂಬಗಳಿಗೆ ಮನೆಗಳು,ಕುಡಿಯುವ ನೀರಿನ ನೂತನ ಸಂಪರ್ಕಗಳನ್ನು ಮಾಡಿಕೊಡಲಾಗುತ್ತದೆ. ಈಗಾಗಲೇ ಹಣ ಬಿಡುಗಡೆಯಾಗಿದ್ದು, ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಅದರ ನೀಲಿ ನಕಾಶೆಯನ್ನು ಸಿದ್ದ ಪಡಿಸಿ ಸದ್ಯದಲ್ಲೆ ಕಾಮಗಾರಿ ಆರಂಭಿಸಲಾಗುತ್ತದೆ. ಎಂದರು.
ಇದೇ ಸಮಯದಲ್ಲಿ ಶಾಸಕರಾದ ಕೆ ಸಿ‌ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಒ ಸೋಮಶೇಖರ್, ಎಸ್ಪಿ ಕೆ.‌ಪರುಶುರಾಮ್ ಅವರಿದ್ದರು.

 

 

Leave a Reply

Your email address will not be published. Required fields are marked *