ರಾಜಕೀಯ ತಿರುವು ಪಡೆಯುತ್ತಿರುವ ಕಲುಷಿತ ನೀರು ಸೇವನೆ ಪ್ರಕರಣ

ರಾಜ್ಯ

ಕಾವಾಡಿಗರ ಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣವು ಇದೀಗ ರಾಜಕೀಯ ತಿರುವುದು ಪಡೆದಿದೆ. ಕಾವಾಡಿಗರ ಹಟ್ಟಿಯ 17 ನೇ ವಾರ್ಡಿನ ನಗರಸಭೆ ಸದಸ್ಯ ಜಯಣ್ಣ ಅವರ ಸಂಬಂಧಿ ನೀರಗಂಟಿಯ ಮಗಳ ಹಾಗೂ ದಲಿತ ಯುವಕನ ವಿಚಾರವು ಪೋಕ್ಸೋ ಕಾಯ್ದೆಯಡಿಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ದ್ವೇಷ ಮತ್ತು ರಾಜಕೀಯಕ್ಕೆ‌ ತಿರುಗಿದೆ. 2022 ರಲ್ಲಿ ನಡೆದಿದ್ದ ಘಟನೆಯು ಇನ್ನು ಮಾಸಿರಲಿಲ್ಲ, ಕಳೆದ ಒಂದು ವರ್ಷದಿಂದ ಮಗಳು‌ಮನೆಗೆ ಬರುತ್ತಾಳೆ ಎಂದು ಕಾಯ್ದು ಕುಳಿತಿದ್ದ ಪೋಷಕರಿಗೆ ಮಗಳು‌ ಮನೆಗೆಬರವುದಿಲ್ಲ ಎಂದು ತಿಳಿದಾಗ ಅವರು ಕುಡಿಯುವ ನೀರನ್ನು ಕಲುಷಿತಗೊಳಿಸುವ ಕೃತ್ಯವನ್ನು ಎಸಗಿದ್ದಾರೆ. ಇದಕ್ಕೆ‌ ನಗರಸಭೆ ಸದಸ್ಯ ಜಯಣ್ಣ ಬೆಂಬಲವಿದೆ. ಆದ್ದರಿಂದ ಕೂಡಲೇ ಅವರನ್ನು ಬಂಧಿಸಬೇಕು ಎಂದು ಕರುನಾಡ ವಿಜಯ ಸೇನೆ ಕಾರ್ಯಕರ್ತರು ಒತ್ತಾಯಿಸಿ,ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಕಾವಾಡಿಗರ ಹಟ್ಟಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಘಟನಾ ಸ್ಥಳಕ್ಕೆ ಬರಬೇಕು. ಜನರ ಕಷ್ಟಗಳನ್ನು ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.

 

 

Leave a Reply

Your email address will not be published. Required fields are marked *