ಕೆರೆ ಹೆಸರಲ್ಲಿ ಕೋಟಿ ಕೋಟಿ ಲೂಟಿ ಶಾಸಕ ಎಂ.ಚಂದ್ರಪ್ಪ ಸಾಧನೆ:ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಜಿಲ್ಲಾ ಸುದ್ದಿ

ಕೆರೆ ಹೆಸರಲ್ಲಿ ಕೋಟಿ ಕೋಟಿ ಲೂಟಿ ಶಾಸಕ ಎಂ.ಚಂದ್ರಪ್ಪ ಸಾಧನೆ:ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆರೆಗಳು ಎಷ್ಟು ಇವೆ ಎಂಬ ಸ್ಪಷ್ಟ ಮಾಹಿತಿ ಇಲ್ಲದ ಶಾಸಕ ಎಂ.ಚಂದ್ರಪ್ಪ, ಮುನ್ನೂರು ಕೆರೆ ಅಭಿವೃದ್ಧಿ ಪಡಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪ ಮಾಡಿದರು.

 

 

ಸಿರಿಗೆರೆ ಗ್ರಾಮದಲ್ಲಿ ಸೋಮವಾರ ಸಾವಿರಾರು ಸಂಖ್ಯೆಯ ಬೆಂಬಲಿಗರ ಜೊತೆ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದರು.
ಕೇವಲ ಕೆರೆ ಹೂಳೆತ್ತುವ ಹೆಸರಲ್ಲಿಯೇ ಕ್ಷೇತ್ರದಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ. ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯದ ಗುತ್ತಿಗೆದಾರರ ಹೆಸರಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿಸಿ, ಕೋಟಿ ಕೋಟಿ ಹಣವನ್ನು ನುಂಗಲಾಗಿದೆ. ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ತೀವ್ರ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋಲಿನ ಭಯಕ್ಕೆ ಇತ್ತೀಚೆಗೆ ಕೆಲ ಮುಖಂಡರು, ಗುತ್ತಿಗೆದಾರರಿಗೆ ತಲಾ ಐದು ಲಕ್ಷ ರೂಪಾಯಿ ಕೆಲಸ ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಚಂದ್ರಪ್ಪನ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದರು.

ಕೆರೆ ಅಭಿವೃದ್ಧಿ ಸಂಬಂಧ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಸ್ವತಃ ಹೇಳಿದ್ದ ಮಾತನ್ನು ಶಾಸಕರು ಪಾಲಿಸುತ್ತಿಲ್ಲ. ಅದರ ಅರ್ಥ ಭ್ರಷ್ಟಾಚಾರ ನಿರೀಕ್ಷೆಗೂ ಮಿತಿಮೀರಿ ಹೆಚ್ಚು ಆಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಕುರಿತು ಕಾಂಗ್ರೆಸ್ ಪಕ್ಷದಿಂದ ತನಿಖೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ತನಿಖೆ ಕೈಗೆತ್ತಿಕೊಂಡರೆ ಜೈಲು ಸೇರುವುದು ಖಚಿತ ಎಂದು ಹೇಳಿದರು.

ಜಾತಿ, ಸಮುದಾಯದ ಜನರ ಮಧ್ಯೆ ಕಂದಕ ಸೃಷ್ಟಿಸಿ, ಕೆಲ ಜನರಲ್ಲಿ ಭೀತಿ ಉಂಟು ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಇತ್ತೀಚೆಗೆ ಶಾಸಕರ ಬೆಂಬಲಿಗರ ಗುಂಡವರ್ತನೆಗೆ ಕ್ಷೇತ್ರದ ಜನರು ಬಹಳಷ್ಟು ಮನನೊಂದಿದ್ದಾರೆ. ತಕ್ಕಪಾಠ ಕಲಿಸಲು ಜನರು ಮತದಾನದ ದಿನಕ್ಕೆ ಕಾಯುತ್ತಿದ್ದಾರೆ ಎಂದರು.ಕ್ಷೇತ್ರದಲ್ಲಿ ಈ ರೀತಿ ಭ್ರಷ್ಟಚಾರ ಮಿತಿ ಮೀರಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳಲು ಸಾಧ್ಯವಾಗದಷ್ಟು ಬೆದರಿಸಲಾಗಿದೆ ಎಂದು ದೂರಿದರು. ಜೊತೆಗೆ ಸಿಲಿಂಡರ್ ಬೆಲೆ ಏರಿಕೆ, ಸೊಸೈಟಿಯಲ್ಲಿ ಕೊಡುತ್ತಿದ್ದ ಅಕ್ಕಿ ಕಡಿಮೆ ಮಾಡಲಾಗಿದೆ. ಒಂದು ಕಡೆ ಜನರ ಹಣ ಲೂಟಿ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ಬದುಕನ್ನೇ ಕಿತ್ರುಕೊಂಡಿದೆ. ಬದುಕುವ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ಜನರಲ್ಲಿ ಬದುಕಿನ ಭರವಸೆ ಮೂಡಿಸಲು ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ 2 ಸಾವಿರ ರೂಪಾಯಿ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ನಿರುದ್ಯೋಗಿಗಳಿಗೆ ಸಹಾಯಧನ ಘೋಷಣೆ ಮಾಡಿದೆ. ಇವೆಲ್ಲವೂ ಬಿಜೆಪಿ ರೀತಿ ಸುಳ್ಳು ಭರವಸೆಗಳು ಅಲ್ಲ, ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳು ಎಂದರು.ಈ ಹಿಂದೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಸಿದ್ದರಾಮಯ್ಯ ಸರ್ಕಾರ ಶೇ.95ರಷ್ಟು ಈಡೇರಿಸಿದ್ದು, ಈ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಾತು ತಪ್ಪದೆ ಯೋಜನೆ ಜಾರಿಗೊಳಿಸುತ್ತೇವೆ.ಈಗಾಗಲೇ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದು, ಜನರು ಸ್ವಯಂ ಆಗಿ ಕಾಂಗ್ರೆಸ್ ಪಕ್ಷದ ಪರ ಮತಯಾಚಿಸುತ್ತಿದ್ದಾರೆ ಎಂದು ತಿಳಿಸಿದರು.ಸಿರಿಗೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು, ಈ ಬಾರಿ ಆಂಜನೇಯ ಗೆಲುವು ನಮ್ಮ ಗುರಿ ಎಂಬ ಘೋಷಣೆ, ಬೃಹತ್ ಹೂವಿನ ಹಾರಗಳನ್ನು ಹಾಕಿ ಅಭಿಮಾನ ತೋರಿದ ಜನರ ಪ್ರೀತಿಕಂಡು ಭಾವುಕರಾದ ಆಂಜನೇಯ, ನಿಮ್ಮ ಪ್ರೀತಿಗೆ ಕಿಂಚಿತ್ತೂ ಧಕ್ಕೆ ತರದೇ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ನಿಮ್ಮೊಂದಿಗೆ ನನ್ನ ಕೊನೇ ಉಸಿರು ಇರುವವರೆಗೂ ಇರುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ವಿ.ಉಮಾಪತಿ, ಕೆಪಿಸಿಸಿ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಸಿರಿಗೆರೆ ಗ್ರಾಪಂ ಅಧ್ಯಕ್ಷ ದೇವರಾಜ್,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ತಾಂಡಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಅನಿಲ್, ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್, ಜಿ.ಪಂಮಾಜಿ ಉಪಾಧ್ಯಕ್ಷ ಗಂಗಾಧರ್, ಮಾಜಿ ಸದಸ್ಯರಾದ ಡಿ.ಕೆ.ಶಿವಮೂರ್ತಿ, ರಂಗಸ್ವಾಮಿ, ಲೋಹಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ತಾಪಂ ಮಾಜಿ ಸದಸ್ಯ ಓಂಕಾರಸ್ವಾಮಿ ಮುಖಂಡರಾದ ನಾಗರಾಜ್ ಬೆಲ್ಲದ್, ಡ್ರೈವರ್ ಬಸವರಾಜ್, ಬೈರಪ್ಪ, ಶಶಿಧರ್, ತಿಪ್ಪೇಶಿ, ಸಿದ್ದೇಶ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *