ಪತ್ರಕರ್ತರು ಅಖಂಡ ಕರ್ನಾಟಕದ ಪತ್ರಕರ್ತರಾಗಬೇಕು

ರಾಜ್ಯ

ವಿಜಯಪುರ:ನಾನು ನಾಡಿನ ದೊರೆ ಎಂದರೆ ನನಗೆ ಕಸಿವಿಸಿ ಆಗುತ್ತದೆ ದಯಮಾಡಿ ಅದನ್ನು ಕೈ ಬಿಡಿ‌ ಎಂದು ಅವರು ಮನವಿ ಮಾಡಿದರು.ಗೋಳಗುಮ್ಮಟದ ನಾಡು ದ್ರಾಕ್ಷಿ ನಾಡು ಬಿಜಾಪುರದಲ್ಲಿ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

 

 

ಜನರ ಸೇವಕ ಎಂದು ತಿಳಿಯದಿದ್ದರೆ ನಾವು ನ್ಯಾಯ ಕೊಡಲು ಸಾಧ್ಯವಿಲ್ಲ, ಇಲ್ಲಿನ ಸಿದ್ದೇಶ್ವರ ಸ್ವಾಮಿಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಬಿಜಾಪುರದ ಜೋಳದ ರೀತಿಯಲ್ಲಿ‌ಇಲ್ಲಿನ‌ ಜನರು ಶ್ರೇಷ್ಠತೆ, ಪ್ರಾಮಾಣಿಕತೆಯಿಂದ ಇದ್ದಾರೆ, ಇಂತಹ ಜಿಲ್ಲೆಯು ಅಭಿವೃದ್ದಿ ಪತದಲ್ಲಿದೆ.‌ಇನ್ನಷ್ಟು ಅಭಿವೃದ್ದಿ ಕಾಣಬೇಕಿದೆ.
ಕೃಷ್ಣೆಯ ನೀರು ಎಲ್ಲಡೆ ತಲುಪಿದಾಗ ಇಡೀ‌ ಭಾರತಕ್ಕೆ ಅನ್ನ ಕೊಡುವ ಜಿಲ್ಲೆಯಾಗುತ್ತದೆ. ಆಡಳಿತ ಮಾಡುವವರ ಮನದಾಳದಲ್ಲಿರುವ‌ ಕನಸು ಅದು ನನಸಾಗುತ್ತದೆ. ಕೃಷ್ಣೆಯ ಸ್ಕೀಂನಲ್ಲಿ ಎ ಬಿ ಯಾವುದೂ ಇಲ್ಲ, ರಾಜ್ಯದ 9 ಯೋಜನೆಗಳಲ್ಲಿ 7 ಯೋಜನೆಗಳನ್ನು ನಾನು‌ ನೀರಾವರಿ ಸಚಿವನಾಗಿದ್ದಾಗ ಕೈ ಗೊಂಡಿದ್ದೆ, ಸಮಗ್ರ ಕರ್ನಾಟಕ ಅಭಿವೃದ್ದಿಯಾಗಬೇಕಾದರೆ ಸಮನಾದ ಭಾಗ ಬಂದರೆ ಆಗ ಸಮಗ್ರ ಅಭಿವೃದ್ದಿಯಾಗುತ್ತದೆ. ಪತ್ರಕರ್ತರು ಕೂಡ ಅಖಂಡ ಪತ್ರಕರ್ತರಾಗಬೇಕು, ಆಗ ಸಮಗ್ರ ಕರ್ನಾಟಕ ಅಭಿವೃದ್ದಿಯಾಗುತ್ತದೆ ಇದರ ಬಗ್ಗೆ ಪತ್ರಕರ್ತರು ಚಿಂತನೆ ಮಾಡಬೇಕು. ಪತ್ರಕರ್ತರು ಹಾಗೂ ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ರಾಜಕಾರಣಿ ಇಲ್ಲದೆ ಪತ್ರಕರ್ತರಿಲ್ಲ, ಪತ್ರಕರ್ತರಿಲ್ಲದೆ ರಾಜಕಾರಣಿಗಳಿಲ್ಲ, ಇದೊಂದು ರೀತಿ ಗಂಡ ಹೆಂಡತಿ ಸಂಬಂಧವಾಗಿದೆ. ಆರೋಗ್ಯಕರವಾದ ಸಂಬಂಧ ಪತ್ರಕರ್ತರು ಹಾಗೂ ರಾಜಕಾರಣಗಳ ಮಧ್ಯೆ ಇದ್ದಾಗ ಉತ್ತಮ ಕೆಲಸವಾಗುತ್ತದೆ. ಪತ್ರಕರ್ತರ ವೃತ್ತಿಯನ್ನು ಉಳಿಸಿಕೊಳ್ಳಲು ಗಟ್ಟಿತನವಿರಬೇಕು, ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.

ಮತ್ತೆ ಈಗ ಮತ್ತಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದು, ಗ್ರಾಮೀಣ ಪತ್ರಕರ್ತರಿಗೆ ಪ್ರಾಮಾಣಿಕವಾದ ಪ್ರಮಾಣ ಪತ್ರ ನೀಡಿದರೆ ಅಂತವರಿಗೆ ಅನುಕೂಲ ಮಾಡಲಾಗುತ್ತದೆ. ನಿವೃತ್ತ ಪತ್ರಕರ್ತರಿಗೆ ಮಾಶಾಸನ ನೀಡುವುದು ಅದನ್ನು ಬಜೆಟ್ ನಲ್ಲಿ ಹೆಚ್ಚಿಗೆ ಮಾಡುತ್ತೇನೆ. ಪತ್ರಕರ್ತರ ಭವನ ನಮ್ಮ ಕೈಲಿದೆ ಆದರೆ ನನಗೆ ನಿಮ್ಮ ಕೈಲಿ ಕೊಡಲು ಅಭ್ಯಂತರವಿಲ್ಲ, ಒಂದು ಬಾರಿ ಯೋಚನೆ ಮಾಡಿ, ಇನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಸದಸ್ಯತ್ವ ಕ್ಕೆ ಮುಂದೆ ಅವಕಾಶ ಸಿಕ್ಕಾಗ ಮಾಡೋಣ, ಕಾರ್ಮಿಕ ಇಲಾಖೆ ಬಗ್ಗೆ ಯೋಚಿಸಿಬೇಕು. ಪತ್ರಕರ್ತರಿಗೆ ನಿವೇಶನ ನೀಡುವುದು, ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತದೆ. ಜಾಹೀರಾತು ದರ ಹೆಚ್ಚಿಗೆ ಮಾಡಲಾಗುತ್ತದೆ. ಇಂತಹ ಬೇಡಿಕೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಶ್ರಮಿಸುತ್ತೇನೆ ಎಂದರು.
ಈ ಸಮಯದಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ,ಸಿಸಿ ಪಾಟೀಲ್, ಶಾಸಕ ಯತ್ಕಾನಾಳ್ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ  ಶಿವಾನಂದ ತಗಡೂರ್ ಪ್ರಾಧಾನ ಕಾರ್ಯದರ್ಶಿ ಜಿಸಿ ಲೊಕೇಶ್ ಇನ್ನಿತರರು  ಇದ್ದರು.

Leave a Reply

Your email address will not be published. Required fields are marked *