ಶಿಕ್ಷಕರಿಂದ ಎಲ್ಲಾ ರಂಗಗಳಲ್ಲೂ ಬದಲಾವಣೆ ಸಾಧ್ಯ

ಜಿಲ್ಲಾ ಸುದ್ದಿ

ಶಿಕ್ಷಕರಿಂದ ಎಲ್ಲಾ ರಂಗ ರಂಗಗಳಲ್ಲೂ ಸಮಾಜದ ಬದಲಾವಣೆ ಸಾಧ್ಯ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.

 

 

ಅವರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು, ಮತಗಟ್ಟೆ ಪರಿಷ್ಕರಣಿ ಸಮಯದಲ್ಲಿ ಚಳ್ಳಕೆರೆ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ಕ್ರಿಯಾತ್ಮಕವಾಗಿ ಕೆಲಸವನ್ನು ನಿರ್ವಹಿಸಿ ನಿಗಧಿತ ಅವಧಿಯೊಳಗೆ ನಮೂನೆ ಆರು ಏಳು ಮತ್ತು ಎಂಟು ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಕಂದಾಯ ಇಲಾಖೆಯ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುರೇಶ್ ಇವರ ಸಹಕಾರದಿಂದ ಮತ ಗಟ್ಟೆಗಳ ಪರಿಷ್ಕರಣೆ ಕಾರ್ಯ ವನ್ನು ಶಿಕ್ಷಕರುಗಳು ನಿರ್ವಹಿಸಿದ್ದಾರೆ. ಇವರ ಕೋರಿಕೆಯಂತೆ ಉತ್ತಮವಾಗಿ ಎಪಿಕ್ ಮತ್ತು ಆಧಾರ್ ಜೋಡಣೆಯನ್ನು ಮಾಡಿದ ಹತ್ತು ಜನ ಶಿಕ್ಷಕರಿಗೆ ಈ ದಿನ ಸಾಂಕೇತಿಕವಾಗಿ ಸನ್ಮಾನಿಸಲಾಗುತ್ತಿದೆ. ಸನ್ಮಾನಕ್ಕೆ ಭಾಜನರಾದ 10 ಜನ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉಳಿದ ಶಿಕ್ಷಕರುಗಳು ಕೂಡ ಈ ರೀತಿ ಕೆಲಸ ನಿರ್ವಹಿಸಲು ಸನ್ಮಾನ ಪ್ರೇರಣೆ ಯಾಗುತ್ತದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ಮುಂದಿನ ದಿನಗಳಲ್ಲಿಯೂ ಕೂಡ 2023ರ ಚುನಾವಣೆಯ ಕೊನೆಯ ನಾಮಪತ್ರ ಸಲ್ಲಿಸುವವರೆಗೆ ಸಲ್ಲಿಕೆಯಾಗುವ ನಮೂನೆ 6 7 ಮತ್ತು 8ರ ಅರ್ಜಿಗಳನ್ನು ಜಾಗರೂಕತೆಯಿಂದ ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಉಳಿದ ಮತಗಟ್ಟೆ ಅಧಿಕಾರಿಗಳು ಕೂಡ ಕೌಶಲ್ಯದಿಂದ ಕೆಲಸ ನಿರ್ವಹಿಸಬೇಕೆಂದು ಮತಗಟ್ಟೆ ಅಧಿಕಾರಿಗಳಿಗೆ ಹೇಳಿದರು. ಉತ್ತಮವಾಗಿ ಆಧಾರ್ ಮತ್ತು ಎಪಿಕ್ ಜೋಡಣೆ ಮಾಡಿದ ಹತ್ತು ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ತುರುವನೂರು ಉಪ ತಹಶೀಲ್ದಾರ್ ಪ್ರಕಾಶ್ ಶಿರಸ್ತೆದಾರ್ ಶಕುಂತಲಾ ಪರಶುರಾಂಪುರ ಉಪ ಶಿರಸ್ತೇದಾರ್ ಅನ್ನಪೂರ್ಣಮ್ಮ ಮತ್ತು ಎಲ್ಲಾ ಬಿ ಎಲ್ ಓ ಗಳು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *