ಇತಿಹಾಸ ಸೃಷ್ಠಿಸುವ ಹೊಸ ಭಾಷ್ಯ ಬರೆಯುವಂತಾಗಲಿ

ಜಿಲ್ಲಾ ಸುದ್ದಿ

ಕಾಯಕಯೋಗಿ ತಿಪ್ಪೇರುದ್ರಸ್ವಾಮಿಯವರ ತಪೋ ಭೂಮಿ ಚಳ್ಳಕೆರೆ ತಾಲ್ಲೂಕಿನ ಜನತೆಗೆ 2023ರ ಹೊಸ ವರ್ಷ ಪರಂಪರೆ ಮತ್ತು ಇತಿಹಾಸ ಸೃಷ್ಟಿಸುವ ಹೊಸ ಬಾಷ್ಯವನ್ನು ಬರೆಯುವಂತಾಗಲಿ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ಇಂದು ನಾಯಕನಹಟ್ಟಿ ಪಟ್ಟಣದ ತಿಪ್ಪೇರುದ್ರಸ್ವಾಮಿ ಒಳ ಮಠದಲ್ಲಿ ಪಟ್ಟಣದ ಸಾರ್ವಜನಿಕರೊಂದಿಗೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಮಾಧ್ಯಮದವರ ಉದ್ದೇಶಿಸಿ ಮಾತನಾಡಿದರು. 2022ನೇ ವರ್ಷದಲ್ಲಿ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಯಾವುದೇ ಸಾಂಕ್ರಾಮಿಕ ರೋಗ ಉಲ್ಬಳಿಸಿಲ್ಲ ಜನಜೀವನಕ್ಕೆ ತೊಂದರೆಯಾಗುವ ಯಾವುದೇ ಘಟನೆಗಳು ನಡೆದಿಲ್ಲ 2023ರ ಹೊಸ ವರ್ಷದಲ್ಲೂ ಕೂಡ ಇಂತಹ ಯಾವುದೇ ಘಟನೆ ನಡೆಯದಿರಲು ಕಾಯಕಯೋಗಿ ತಿಪ್ಪೇರುದ್ರಸ್ವಾಮಿಯವರ ಅನುಗ್ರಹವಿರಲಿ ತಾಲೂಕಿನ ಸಮಸ್ತ ಜನತೆಗೆ ಒಳ್ಳೆಯ ಮಳೆ ಬೆಳೆ ಆರೋಗ್ಯ ಐಶ್ವರ್ಯ ಮತ್ತು ಶಾಂತಿ ನೆಮ್ಮದಿ ವೃದ್ಧಿಸಲಿ ಚಿತ್ರದುರ್ಗದ ಚರಿತ್ರೆ ಮತ್ತು ಗತವೈಭವ ಮರುಕಳಿಸುವ ವಾತಾವರಣ ಸೃಷ್ಟಿಯಾಗಲಿ ಸಮಸ್ತ ಜನತೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲಿ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯಲ್ಲಿ ಯಶಸ್ಸು ಕಾಣಲಿ ಯುವಕರು ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕುವಂತಾಗಲಿ ಇವೆಲ್ಲವುಗಳಿಗೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯವರ ಪ್ರೇರಣೆಯಾಗಲಿ ಎಂದು ಬೇಡಿಕೊಂಡರು ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದಂತಹ ಎತ್ತಿನಹಟ್ಟಿ ಗೌಡ್ರು ದೇವಸ್ಥಾನದ ಮಾಜಿ ಅಧ್ಯಕ್ಷರಾದಂತ ಎಂ ವೈ ಟಿ ಸ್ವಾಮಿ ಬಸವರಾಜ್ ನಾಯ್ಕ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *