ಕಠಿಣ ಪರಿಶ್ರಮ ಮತ್ತು ಶ್ರದ್ದೆ ಮುಖ್ಯ: ತಹಶೀಲ್ದಾರ್ ರಘುಮೂರ್ತಿ

ಜಿಲ್ಲಾ ಸುದ್ದಿ

ತಪಸ್ಸು ಸ್ಪರ್ಧಾತ್ಮಕ ಪರೀಕ್ಷೆ, ಉತ್ಕೃಷ್ಟವಾದ ಪರೀಕ್ಷೆ ಈ ಪರೀಕ್ಷೆಯನ್ನು ತೇರ್ಗಡೆ ಮಾಡಿದ ಮಕ್ಕಳು ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕೊಂಡುಕೊಳ್ಳಬಹುದು. ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಬಹಳ ಮುಖ್ಯ ಈ ಪರೀಕ್ಷೆಯು ಸೇರಿದಂತೆ ವಾಸವಿ ವಿದ್ಯಾ ಸಂಸ್ಥೆಯವರು ಮುಂದಿನ ದಿನಗಳಲ್ಲಿ ಆಯೋಜಿಸುತ್ತಿರುವ ಐಐಟಿ ಜೆಇ ತರಬೇತಿಯನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವಂತೆ ಇದರ ಮುಖಾಂತರ ಮಕ್ಕಳನ್ನು ಅಣಿಗೊಳಿಸಿಕೊಳ್ಳುವಂತೆ ಪೋಷಕರಿಗೆ ಮನವಿಯನ್ನು ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಮಾಡಿದರು. ಅವರು ಚಳ್ಳಕೆರೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ನಡೆದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿಯೇ ಉತ್ಕೃಷ್ಟವಾದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ ಐ ಐ ಎಸ್ ಸಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ ಇವು ದೇಶದಲ್ಲಿಯೇ ಪ್ರತಿಷ್ಠವಾದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಈ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗ ಬೇಕಾದರೆ ಉತ್ಕೃಷ್ಟವಾದ ತರಬೇತಿ ನೀಡಿ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಲು ವಾತಾವರಣವನ್ನು ಚಳ್ಳಕೆರೆಯಲ್ಲಿ ಸೃಷ್ಟಿ ಮಾಡಬಹುದು, ವಿಜ್ಞಾನ ಮತ್ತು ಗಣಿತದ ಶಿಕ್ಷಕರುಗಳು ಮನಸು ಮಾಡಿದರೆ ಇಂತಹ ಒಂದು ಪ್ರಯತ್ನವನ್ನು ಇದೇ ತಾಲೂಕು ಕೇಂದ್ರದಲ್ಲಿ ಮಾಡಬಹುದು, ಇದಕ್ಕೆ ವಾಸವಿ ವಿದ್ಯಾ ಸಂಸ್ಥೆಯವರು ಇಂದು ಒಂದು ಸಂಕಲ್ಪ ಮಾಡಿದ್ದಾರೆ. ಈ ಸಂಕಲ್ಪದ ಪ್ರಯತ್ನವಾದರೆ ಪ್ರತಿ ವರ್ಷ ಚಳ್ಳಕೆರೆ ತಾಲೂಕಿನಿಂದ 10 ವಿದ್ಯಾರ್ಥಿಗಳು ಐಐಟಿ ಪ್ರತಿಷ್ಠಿತ ಕಾಲೇಜುಗಳಿಗೆ ದಾಖಲಾಗಬಹುದೆಂದು ರಘುಮೂರ್ತಿ ಹೇಳಿದರು.

 

 

Leave a Reply

Your email address will not be published. Required fields are marked *