ಅಂದು ಕಡಲೆ ಬೀಜ ಮಾರುವ ಕರ್ನಾಟಕದ ಬಾಲಕ ಇಂದು ಬ್ರಿಟನ್ನಿನ ಸೈನಿಕ

ರಾಜ್ಯ

“ಅಂದು ಕಡಲೆ ಬೀಜ ಮಾರುವ ಕರ್ನಾಟಕದ ಬಾಲಕ ಇಂದು ಬ್ರಿಟನ್ನಿನ ಸೈನಿಕ”

 

 

ಶ್ರೀಕೃಷ್ಣ ಪರಮಾತ್ಮನು ತನ್ನ ಎಂಟನೇ ಅವತಾರದಲ್ಲಿ ತಾಯಿ ದೇವಕಿ ಮಾತೆಯ ಗರ್ಭದಲ್ಲಿ ಜನಿಸಿದ್ದರೂ ಕೂಡ ಲಾಲನೆ, ಪಾಲನೆ, ಪೋಷಣೆಯನ್ನು ಪಡೆದು ಬೆಳೆದದ್ದು ತಾಯಿ ಯಶೋಧೆ ಮಾತೆಯ ಹತ್ತಿರ ಇಂತಹದ್ದೇ ಒಂದು ಘಟನೆಯು ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದಲ್ಲಿ ಹುಟ್ಟಿದ ಬಾಲಕ ಬ್ರಿಟನ್ ದಂಪತಿಗಳ ಪಾಲನೆ ಪೋಷಣೆಯಲ್ಲಿ ಬೆಳೆದು ಅದೇ ದೇಶದ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಸೌಭಾಗ್ಯವಂತ ಶ್ರೀ ಗೋಪಾಲ್ ವಾಕೋಡೆಯವರ ಜೀವನದ ಯಶೋಗಾಥೆಯಿದು.
ಯಲ್ಲಪ್ಪ ಮತ್ತು ಫಕೀರವ್ವ ದಂಪತಿಗಳಿಗೆ ಐವರು ಮಕ್ಕಳಲ್ಲಿ ಎರಡನೇ ಮಗನಾಗಿ ಜನಿಸಿದವನೇ ಈ ಗೋಪಾಲ. ಮನೆಯಲ್ಲಿ ಕಿತ್ತು ತಿನ್ನುವ ಕಡುಬಡತನದಿಂದ ಕೂಲಿ ಅರಸಿ ಹತ್ತನೇ ವಯಸ್ಸಿನ ಗೋಪಾಲನನ್ನು ಕರೆದುಕೊಂಡು ದುಡಿಮೆಗಾಗಿ ಪಾಲಕರು, ಗೋವಾಕ್ಕೆ ವಲಸೆ ಹೋದರು.
ತಂದೆ ತಾಯಿಯ ಜೊತೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೋಪಾಲನ ತಂದೆ ಅಕಾಲಿಕವಾಗಿ ತೀರಿಕೊಂಡರು ಗಂಡನ ನಿಧನದ ಕೊರಗಿನಲ್ಲಿಯೇ ತಾಯಿ ಫಕೀರವ್ವ ಕೂಡ ಮ್ರೃತ್ಯುಪಡುತ್ತಾಳೆ ಸಾಕಿ ಸಲುಹಬೇಕಾದ ತಂದೆ ತಾಯಿಗಳೆ ಮೃತ್ಯುವಿನ ಬಾಗಿಲು ತಟ್ಟಿದಾಗ ಗೋಪಾಲನಿಗೆ ದಿಕ್ಕು ತೋಚದೆ ದಿಗ್ರಾಂತನಾಗಿ ದುಃಖಕ್ಕೆ ಒಳಗಾದನು. ನಂತರ ಬಂಧುಗಳನ್ನು ಆಶ್ರಯಿಸಿ ಗೋಪಾಲ ತನ್ನ 16ನೇ ವಯಸ್ಸಿನಲ್ಲಿ ಗೋವಾದ ಸಮುದ್ರದ ತೀರಗಳಲ್ಲಿ ಕಡಲೆಬೀಜ ವ್ಯಾಪಾರ ಮಾಡುತ್ತಾ ಒಂಬತ್ತನೇ ತರಗತಿ ಶಿಕ್ಷಣ ಪೂರೈಸಿದರು.
ಗೋಪಾಲರ ಮಂದಹಾಸದ ಮುಗುಳುನಗೆ ಮೃದುವಾದ ಮಾತುಗಳು, ಗೋಪಾಲನ ಹತ್ತಿರವಿರುವ ಕಡಲೆ ಬೀಜವನ್ನು ಕೊಂಡುಕೊಳ್ಳುವಂತೆ ಮಾಡುತ್ತಿದ್ದವು. ಇಂಗ್ಲೆಂಡಿನಿಂದ ಪ್ರತಿವರ್ಷ ಭಾರತ ಪ್ರವಾಸಕ್ಕೆ ಬರುತ್ತಿದ್ದ ಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ತಮ್ಮ ಸಹವರ್ತಿಗಳಾದ ಲಿಂಡಾ ಹ್ಯಾನ್ಸನ್ ಅವರೊಂದಿಗೆ ಬಂದಾಗ ಈ ಬಾಲಕ ಗೋಪಾಲ ಅವರ ಕಣ್ಣಿಗೆ ಬಿದ್ದ. ಗೋವಾದ ಬೆತಲೆ ಬಾತ್ ಬೀಚ್ ನಲ್ಲಿ ಉರಿ ಬಿಸಿಲು ಲೆಕ್ಕಿಸದೇ ಕಡಲೆ ಬೀಜ ವ್ಯಾಪಾರ ಮಾಡುತ್ತಿದ್ದ ಬಾಲಕನ ಮುಗ್ಧತೆ, ಬ್ರಿಟಿಷ್ ದಂಪತಿಗಳ ಗಮನಸೆಳೆಯಿತು. ಆತ ವಾಸಿಸುವ ಗುಡಿಸಿಲಿಗೆ ಭೇಟಿ ನೀಡಿ ಹೊಸ ಬಟ್ಟೆ, ಕಡಲೆ ಮಾರುವ ಬುಟ್ಟಿ, ಗಡಿಯಾರ ಕೊಡಿಸಿದರು. ಮರು ವರ್ಷ ಬಂದಾಗ ಗೋಪಾಲನನ್ನು ಇವನಾರವ ಎಂದೆನಿಸದೆ ಇವನಮ್ಮವ ನಮ್ಮ ಮನೆಯ ಮಗನೆಂದೆನಿಸಿ ಬಾಲಕನನ್ನು ಅವರ ಮನೆಯವರನ್ನು ಭೇಟಿ ಮಾಡಿ ಈತನಿಗೆ ಉತ್ತಮ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಲ್ಲದೆ ಈತನನ್ನು ನಮ್ಮ ಜೊತೆ ಕಳಿಸುವುದಾದರೆ ಈತನಿಗೆ ಒಳ್ಳೆಯ ಪಾಲನೆ ಪೋಷಣೆ ಮಾಡುವುದಾಗಿ ಭರವಸೆ ನೀಡಿ ಬ್ರಿಟ್ಸ್ ಕೊರೊಲ್ ಥಾಮಸ್ ದಂಪತಿಗಳು ತಮ್ಮೊಂದಿಗೆ ಕರೆದೊಯ್ಯಿದು ಉತ್ತಮ ಶಿಕ್ಷಣದೊಂದಿಗೆ ಕ್ರೀಡಾ ತರಬೇತಿ ಕೊಡಿಸಿದರು. ಗೋಪಾಲರ ಬುದ್ಧಿ ಚಾಣಾಕ್ಷತೆ ಕಂಡು ಬ್ರಿಟನ್ ಸೈನ್ಯಕ್ಕೆ ಸೇರಿಸಲು ತರಬೇತಿ ನೀಡಿದರು.ಅವರ ಆಶಯದಂತೆ ವಾಯುಸೇನೆಯಲ್ಲಿ ಈಗ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುವುದರ ಮೂಲಕ ಜನ್ಮ ನೀಡಿದ ತಂದೆ ತಾಯಿಗೆ ಹುಟ್ಟಿದ ತನ್ನುರಿಗೆ ಪಡೆದು ಪೋಷಿಸಿದ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ನೀನೊಲಿದಡೆ ಕೊರಡು ಕೊನರುವುದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ
ನೀನೊಲಿದಡೆ ವಿಷವೆಲ್ಲ ಅಮ್ರೃತವಹುದಯ್ಯಾ
ನೀನೊಲಿದಡೆ ಸಕಲ ಪಡಿಪಧಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ.
ಎಂಬಂತೆ ಆ ಭಗವಂತನ ಕ್ರೃಪೆಯಿಂದ ಕಷ್ಟಗಳೆಲ್ಲವು ದೂರಾಗಿ ಬ್ರಿಟನ್ನಿನ ಪೋಲೀಸ್ ಅಸಿಸ್ಟೆಂಟ್ ಕಮೀಷನರ್ ಆಗಿರುವ ಜಸ್ಮೀನ್ ಎನ್ನುವ ಯುವತಿಯನ್ನು ಗೋಪಾಲ್ ಮದುವೆಯಾಗಿದ್ದಾರೆ.ಇವರಿಗೆ ಈಗ ಡೈಸಿ ಎನ್ನುವ ಮುದ್ದಾದ ಹೆಣ್ಣು ಮಗಳಿದ್ದಾಳೆ. ಈ ಎಲ್ಲಾ ಸೌಭಾಗ್ಯವನ್ನು ಆ ದೇವರು ಒದಗಿಸಿಕೊಟ್ಟಿದ್ದಾನೆ ಆದರೂ ಒಂದಿಷ್ಟು ಗರ್ವ ಮತ್ತು ದರ್ಪವಿಲ್ಲದ ಸಹನಾಮಯಿ ಗೋಪಾಲ್ ವಾಕೋಡೆಯವರು ತಾವು ಹುಟ್ಟಿದ ಕನ್ನಡ ನಾಡು ನುಡಿ ದೇಶಾಭಿಮಾನ ನನ್ನವರೇನ್ನುವ ಬಂಧುಗಳನ್ನು ಇಂದಿಗೂ ಮರೆತಿಲ್ಲ. ಕನ್ನಡ, ಮರಾಠಿ, ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ನನ್ನ ಸೇವಾ ನಿವೃತ್ತಿ ನಂತರ ಮತ್ತೆ ನನ್ನ ತಾಯ್ನಾಡಿಗೆ ಬಂದು ನನ್ನವರೊಂದಿಗೆ ನೆಲೆಸುವೆ ಎಂದು ವಿಶ್ವಾಸದ ಮಾತುಗಳನ್ನು ಅಭಿಮಾನದಿಂದ ಹೇಳುತ್ತಾರೆ.
ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಹುಟ್ಟೂರಿಗೆ ಬರುವಂತೆ ದಿ/10/12/2022ರಂದು ಬ್ರಿಟನ್ನಿನಿಂದ ಹುಬ್ಬಳ್ಳಿ ಮೂಲಕ ತಮ್ಮ ಹುಟ್ಟೂರಾದ
ಶಹಾಪುರಕ್ಕೆ ಆಗಮಿಸುತ್ತಿರುವ ನಮ್ಮ ಕನ್ನಡ ನಾಡಿನ ಮಾನಸ ಪುತ್ರ ಶ್ರೀ ಗೋಪಾಲ್ ವಾಕೋಡೆಯವರನ್ನು ಕನ್ನಡಿಗರೆಲ್ಲರೂ ಆತ್ಮೀಯ ಆಧಾರದ ಮನಸ್ಸುಗಳ ಸಂತೋಷದ ಮಲ್ಲಿಗೆಯ ಹೂ ಚೆಲ್ಲಿ ಆತ್ಮೀಯವಾಗಿ ಸುಸ್ವಾಗತಿಸೋಣ.ನಮ್ಮವರೆಂದು ಹೆಮ್ಮೆ ಪಡೋಣ.
✍️ ಹನಮಂತ ಬಿ.ಕುರಬರ.

Leave a Reply

Your email address will not be published. Required fields are marked *