ಹಾಸ್ಟೆಲ್ ಗೆ ಡಿಸಿ ದಿಢೀರ್ ಭೇಟಿ: ನಿರ್ವಹಣೆ ಕುರಿತು ಕೆಂಡಾಮಂಡಲ

ಜಿಲ್ಲಾ ಸುದ್ದಿ

ಹಾಸ್ಟೆಲ್ ನಿರ್ವಹಣೆಯ ನಿರ್ಲಕ್ಷ್ಯ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಕೆಂಡಾಮಂಡಲ

 

 

ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಮದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಸತಿ ಶಾಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಗುತ್ತಿಗೆದಾರರಿಂದ ಹಾಸ್ಟೆಲಿಗೆ ಸರಬರಾಜುರಾಗುತ್ತಿರುವ ಆಹಾರ ಪಡಿತರ ಮತ್ತು ಇನ್ನಿತರ ಸಾಮಗ್ರಿಗಳಸರಬರಾಜಾದ ಬಗ್ಗೆ ಯಾವುದೇ ವಹಿಗಳು ಅಥವಾ ದಾಖಲೆಗಳನ್ನು ನಿರ್ವಹಿಸಿರುವುದು ಕಂಡುಬಂದಿರುವುದಿಲ್ಲ ಇದಕ್ಕೆ ಸಂಬಂಧಪಟ್ಟಂತೆ ತಾಲೂಕು ಬಿಸಿಎಮ್ ಅಧಿಕಾರಿಯಾಗಿ ಹಾಸ್ಟೆಲ್ ವಾರ್ಡನ್ ಆಗ್ಲಿ ಅಥವಾ ಹಾಸ್ಟೆಲನ್ನು ನಿರ್ವಹಣೆ ಮಾಡುತ್ತಿರುವ ಯಾವುದೇ ನೌಕರರು ಮಾಹಿತಿ ನೀಡಲಿಲ್ಲ ಗುತ್ತಿಗೆದಾರರು ಕಳೆದ ಒಂದು ವಾರದಿಂದ ಯಾವುದೇ ಆಹಾರ ಸಾಮಗ್ರಿ ನೀಡಿಲ್ಲದೆ ಇರುವುದು ಪರಿಶೀಲನೆಯಿಂದ ಕಂಡು ಬಂತು ದಾಸ್ತಾನು ಕೊಠಡಿಯಲ್ಲಿ ಯಾವುದೇ ಸಾಮಗ್ರಿಗಳು ಇಲ್ಲದಿರುವುದನ್ನು ಕೂಡ ಪರಿಶೀಲಿಸಲಾಯಿತು ಪೂರ್ಣವಾದ ಮಾಹಿತಿಯನ್ನು ನೀಡಲು ಹಾಸ್ಟೆಲ್ ಸಿಬ್ಬಂದಿಗಳು ತಡಕಾಡಿದರು ಹಾಗೂ ಹಾಗೂ ತರಕಾರಿಯನ್ನು ಕೂಡ ಹಾಸ್ಟೆಲ್ ಸಿಬ್ಬಂದಿಗಳೇ ಹೋಗಿ ಖರೀದಿ ಮಾಡುತ್ತಿರುವುದು ಕಂಡುಬಂತು. ಈ ಸಂದರ್ಭದಲ್ಲಿ ಹಾಜರಾಗಿದ್ದ ಗ್ರಾಮಸ್ಥರು ಆಸ್ಪತ್ರೆಯಲ್ಲಿನ ಲೋಪಗಳ ಬಗ್ಗೆ ಇವತ್ತೇ ನಮಗೆ ಗೊತ್ತಾಗಿದ್ದು ಬೇರೆ ಬೇರೆ 40 ಕಿಲೋಮೀಟರ್ ವ್ಯಾಪ್ತಿಯ ಊರುಗಳಿಂದ ಬರುವಂತಹ ಈ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು ನಿಯಮಾವಳಿ ಪ್ರಕಾರ ಗುತ್ತಿಗೆದಾರರೇ ಈ ತರಕಾರಿಯನ್ನು ಹಾಸ್ಟೆಲಿಗೆ ಒದಗಿಸಬೇಕಾಗಿದ್ದು ಈ ಎಲ್ಲಾ ವ್ಯಕ್ತಿಗಳ ಬಗ್ಗೆ ವಿಸ್ತೃತವಾದ ತನಿಖೆ ವರದಿಯನ್ನು ತಕ್ಷಣ ನೀಡುವಂತೆ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಎನ್ ರಘುಮೂರ್ತಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ಮೊಳಕಾಲ್ಮೂರು ರಾಜಾಸ್ವ ನಿರಿಕ್ಷಕರಾದಂತಹ ಪ್ರಾಣೇಶ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *