ರಕ್ತದಾನ ಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ

ಜಿಲ್ಲಾ ಸುದ್ದಿ

ರಕ್ತದಾನ ಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ

ನಗರದ ಡಾನ್ ಬಾಸ್ಕೋ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಡಿಜಿಟಲ್ ಆರೋಗ್ಯ ಕಾರ್ಡ್ ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಮನ್ ಕೆ.ಜೆ. ರವರು ಎಲ್ಲರೂ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳ ಜೀವ ರಕ್ಷಣೆ ಮಾಡಿದ ಸರ್ಥಾಕತೆ ಭಾವ ಮೂಡುತ್ತದೆ. ನಮ್ಮ ಕಾಲೇಜಿನಲ್ಲಿ
ಎರಡನೇ ಬಾರಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಇಂದಿನ ಯುವ ಪೀಳಿಗೆ ತಪ್ಪು ಕಲ್ಪನೆ ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂದು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕರೆ ನೀಡಿದರು.

 

 

ಜಿಲ್ಲಾ ಸರ್ಕಾರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರೂಪ ರವರು 18 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ನಾವು ವೈಜ್ಞಾನಿಕವಾಗಿ ಎಷ್ಟೆ ಬೆಳವಣಿಗೆ ಸಾಧಿಸಿದ್ದರೂ ದೇಹದ ವಿವಿಧ ಅಂಗಗಳ ಕೃತಕ ಸಾದನಗಳ ಆವಿಷ್ಕಾರ ಮಾಡಿದ್ದರೂ ಸಹ ಕೃತಕವಾಗಿ ರಕ್ತ ತಯಾರಿಸಲು ಆಗಿಲ್ಲ ಅದ್ದರಿಂದ ತಾವು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಭೇಕು ಹಾಗೂ ಇಲ್ಲಿ ಸಂಗ್ರಹಿಸಿದ ರಕ್ತದ ಯುನಿಟ್ ಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಇರುವವರಿಗೆ, ರಕ್ತದ ಪ್ರಮಾಣ ಕಡಿಮೆ ಗರ್ಭಿಣಿ ಹೆರಿಗೆಗೆ, ಅಪಘಾತಗಳಲ್ಲಿ ಗಾಯಗೊಂಡ ರೋಗಿಗಳ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡುತ್ತಾ ಎಲ್ಲಾ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ಮಾಡಿ ಅಪ್ತಸಮಾಲೋಚನೆಯ ನಂತರ ಅರ್ಹರಾದವರಿಂದ ಮಾತ್ರ ರಕ್ತ ಸಂಗ್ರಹಿಸಲಾಗುತ್ತದೆ ಎಂದರು.ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಾಧನಮಂತ್ರಿ ಜನ ಆರೋಗ್ಯ ಯೋಜನೆಯ ಡಿಜಿಟಲ್ ಕಾರ್ಡ್ ನೊಂದಣಿಯನ್ನು ಸಹ ಮಾಡಿಸುತ್ತಿದ್ದು ಕಾಲೇಜಿನ ಎಲ್ಲಾ ಬಿ.ಪಿ.ಎಲ್ ವಿದ್ಯಾರ್ಥಿಗಳು ಮತ್ತು ತಮ್ಮ ಕುಟುಂಬದ ಸದಸ್ಯರು ಡಿಜಿಟಲ್ ಆರೋಗ್ಯ ಕಾರ್ಡುಗಳನ್ನು ಮಾಡಿಸಿಕೊಳ್ಳುವಂತೆ ಡಿ.ಹೆಚ್.ಓ ಕಛೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎ.ಗಂಗಾಧರ ಮಾಹಿತಿ ನೀಡಿದರು. ಇಂದು ಒಟ್ಟು 34 ವಿದ್ಯಾರ್ಥಿಗಳು ರಕ್ತದಾನ ಮತ್ತು ಒಟ್ಟು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಜಿಟಲ್ ಆರೋಗ್ಯ ಕಾರ್ಡ್ ಮಾಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಸಮನ್ವಯಾಧಿಕಾರಿ ಡಾ.ಧನಕೋಟಿ, ಎಚ್. ಡಿ. ಎಫ್. ಸಿ ಬ್ಯಾಂಕ್ ಸಿಬ್ಬಂದಿ, ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *