ಶಿಕ್ಷಣದಿಂದ ಸ್ವಾಭಿಮಾನ ಸ್ವಾವಲಂಬಿ ಬದುಕು ಸಾಧ್ಯ

ಜಿಲ್ಲಾ ಸುದ್ದಿ

ಬುಡಕಟ್ಟು ಜನರ ಆಚಾರಗಳು ಮತ್ತು ವಿಚಾರಗಳುಈ ನಾಡಿನ ಸಾಂಸ್ಕೃತಿಕ ಹಾಗು ಮತ್ತು ಸಾಹಿತ್ಯ ಬೆಳವಣಿಗೆಗಳಿಗೆ ಪೂರಕವಾಗಿದೆ ಎಂದು ಚಳ್ಳಕೆರೆ ತಾಸಿಲ್ದಾರ್ ಎನ್ ರಘುಮೂರ್ತ ಹೇಳಿದರು ಅವರು ದೇವರಹಳ್ಳಿ ಗ್ರಾಮದಲ್ಲಿ ಗೌರಸಮುದ್ರ ಮಾರಮ್ಮ ದೇವಿಯನೂತನ ಪಟ್ಟದ ಪೂಜಾರಿಯನ್ನು ಪೂಜಾ ವಿಧಿ ವಿಧಾನಗಳಿಗೆ ಲೋಕಾರ್ಪಣೆ ಗೊಳಿಸುವ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿ ಮಾತನಾಡಿ ಈ ಭಾಗದ ಬುಡಕಟ್ಟು ಜನರಲ್ಲಿ ದೈವಿಕ ಭಕ್ತಿ ಶ್ರದ್ಧೆ ಮತ್ತು ಶ್ರಮತೆ ಮನೆಮಾಡಿದೆ ಇದು ಗ್ರಾಮಗಳಲ್ಲಿ ಏಕತೆ ಮತ್ತು ಸಾಮರಸ್ಯಕ್ಕೆ ರಹದಾರಿ ಆಗುತ್ತದೆ ಜಗನ್ಮಾತೆ ಗೌರಸಮುದ್ರ ಮಾರಮ್ಮ ದೇವಿಯ ಅಸಂಖ್ಯಾತ ಭಕ್ತಗಣ ದೇವಿಯ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ ಈ ದೈವಿಕ ಭಾವನೆಗಳ ಜೊತೆ ವೈಚಾರಿಕತೆಯನ್ನು ಇಲ್ಲಿನ ಜನರು ಮೈಗೂಡಿಸಿಕೊಳ್ಳಬೇಕು ಇದರ ಮುಖಾಂತರ ಪ್ರತಿಯೊಂದು ಕುಟುಂಬದಲ್ಲೂ ಕೂಡ ವಿದ್ಯಾವಂತರ ಸಂಖ್ಯೆ ಜಾಸ್ತಿ ಆಗಬೇಕು ಸರ್ವರು ಕೂಡ ಶಿಕ್ಷಣ ಪಡೆಯಬೇಕು ಆಗ ಮಾತ್ರ ಸ್ವಾಭಿಮಾನದಿಂದ ಬದುಕಿ ಸ್ವಾವಲಂಬನೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು ಈ ಸಮಾರಂಭದಲ್ಲಿ ಗೌರಸಮುದ್ರ ಬ್ಯಾಡ ರೆಡ್ಡಿ ಹಳ್ಳಿ ಘಟಪರ್ತಿ ಮತ್ತು ದೇವರೆಡ್ಡಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು ಗ್ರಾಮ ಪಂಚಾಯಿತಿ ಸದಸ್ಯ ಓಬಣ್ಣ ವಕೀಲರುಗಳಾದ ಚಂದ್ರಪ್ಪ ಮತ್ತು ಶಶಿ ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *