ಜಿಲ್ಲಾ ಸುದ್ದಿ

ಚಿತ್ರದುರ್ಗ,ಮಾ19(ಹಿಸ)-ಮುಂದಿನ ಚುನಾವಣೆಯಲ್ಲಿ ಶೇ, 35 ರಷ್ಟು ಸ್ಥಾನಗಳನ್ನು ಯವಕರಿಗೆ ಅಧ್ಯತೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕಲಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಾಕ್ಷ ರಾಮಯ್ಯ ಹೇಳಿದರು.
ಅವರು ಮಾದಾರ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

Chitradurga give importance to youths

 

 

ನಮ್ಮ ಜಿಲ್ಲೆಗಳಲ್ಲಿ ಕ್ಷೇತ್ರಗಳಲ್ಲಿ ಮೊದಲು ಸಂಘಟನೆ ಮಾಡುತ್ತೆವೆ. ಈ ಗುರಿಯನ್ನು ಇಟ್ಟುಕೊಂಡು 224 ಕ್ಷೇತ್ರಗಳಲ್ಲಿ ಆಗದೇ ಹೋದರು, 150 ಗುರಿಯನ್ನು ಇಟ್ಟುಕೊಂಡು ಅದರಲ್ಲಿ 50 ಟಿಕೇಟ್ ಪಡೆದು ಅವರನ್ನು ಗೆಲ್ಲಿಸುವ ಕೆಲಸ ಮಾಡಿ ಮತ್ತೆ ಸಂಘಟನೆ ಮಾಡುತ್ತೆವೆ. ಮೊದಲು ಹೈ ಕಮಾಂಡ್ ಇಲ್ಲ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಇದೀಗ ಬಿಜೆಪಿಗೂ ಹೈ ಕಮಾಂಡ್ ಇದೆ. ಅಲ್ಲಿಯೂ ಕೂಡ ದೆಹಲಿ ಕಡೆಗೆ ಮುಖ ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಕೂಡ ನಾಯಕರಾದವರು ಯುವ ಕಾಂಗ್ರೆಸ್ ನಿಂದಲೇ ಬಂದವರಾಗಿದ್ದಾರೆ. ಅವರು ಎಂಎಲ್ ಎ ಮಂತ್ರಿಗಳು ಆಗಿದ್ದಾರೆ. ನಮ್ಮಲ್ಲಿಯೂ ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಗಳಲ್ಲಿಯು ಕೂಡ ಶೆ.35 ರಷ್ಟು ಮೀಸಲಾತಿ‌ ನೀಡಬೇಕು ಅದರಲ್ಲಿ ಮಹಿಳಾ ಮತ್ತು ಪುರುಷ ಮೀಸಲಾತಿಯನ್ನು ನಾವು ಮಾಡಿಕೊಳ್ಳುತ್ತೇವೆ.

ಬಿಜೆಪಿ ಎಲ್ಲೆಡೆ ವಿಫಲವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಕುಸಿದಿದೆ.
ನಾವು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದೆವೆ. ನಾವೂ ಈಗಿನಿಂದಲೇ ಸಂಘಟನೆ ಮಾಡಿಕೊಂಡು ರೈತ, ಮಹಿಳೆಯರು ಕಾರ್ಮಿಕರ ವಿರುದ್ದ ಬಿಜೆಪಿ ಸರ್ಕಾರದ ತಂದಿರುವ ಕಾಯ್ದೆ ಗಳನ್ನು ವಿರೋಧಿಸಿ ಹೋರಾಟ ಮಾಡುತ್ತವೆ. ಇದರ ಜೊತೆಗೆ ,ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ದ ಹೋರಾಟಕ್ಕೆ ಮಾಡುತ್ತೆವೆ ಎಂದು ಹೇಳಿದರು.
ಈ ಸಮಯದಲ್ಲಿ ಜಿಪಂ ಸದಸ್ಯೆ ಸವಿತಾ ರಘು, ಯುವ ಕಾಂಗ್ರೆಸ್ ಮುಖಂಡ ರಘು, ಖುದ್ದೋಸ್ ಮುರುಳಾಧ್ಯ ಹಾಗೂ ಇತರರಿದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *