21 ಪ್ರಕರಣಗಳು, 8 ಜನ ಆರೋಪಿಗಳು ಕಳವು ಮಾಡಿದ್ದೆಷ್ಟು?

ಕ್ರೈಂ

ಚಿತ್ರದುರ್ಗ:ವಿವಿಧ ಪ್ರಕರಣಗಳಲ್ಲಿ ಕೋಟೆ ನಾಡಿನ ಪೋಲಿಸರು 8 ಜನರನ್ನು ಬಂಧಿಸಿ 12 ಲಕ್ಷದ 76 ಸಾವಿರ ಮೌಲ್ಯದ ಚಿನ್ನದ ಒಡವೆಗಳು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಜೈಲಿಗೆಟ್ಟಿದ್ದಾರೆ.

Chitradurga how much they theft

ಚಿತ್ರದುರ್ಗ ನಗರದ ಆಶ್ರಯ ಬಡಾವಣೆಯ ಸೈಯದ್ ಆಕ್ಬರ್ ಎಂಬ ವ್ಯಕ್ತಿಯೂ ಮನೆಯೊಂದರಲ್ಲಿ ಬೀರುವಿನ ಬೀಗ ಮುರಿದು 160 ಗ್ರಾಂ ತೂಕದ 7.20 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ, ಇವನನ್ನು ನಗರ ಠಾಣೆ ಪೋಲಿಸರು ಬಂಧಿಸಿದ್ದು ಕಳವು ಮಾಡಿದ್ದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.ಇನ್ನೊಂದೆಡೆ ಕೋಟೆ ಠಾಣೆ ಪೋಲಿಸರು ಬೈಕ್ ಕಳ್ಳನನ್ನು ಹಿಡಿದು ಅವನಿಂದ. 2,70 ಲಕ್ಷ ಮೌಲ್ಯದ ಸುಮಾರು 10 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

 

 

Chitradurga how much they theft

ಇವನು ದಾವಣೆಗೆರೆ ಮೂಲದವನಾಗಿದ್ದು, ದಾವಣೆಗೆರೆ ,ಚಿತ್ರದುರ್ಗ ಹಾಗು ಹರಿಹರದಲ್ಲಿ ಬೈಕ್ ಕಳವು ಮಾಡುತ್ತಿದ್ದು, ಇವನನ್ನು ಕಿರಣ್ ಎಂದು ಗುರುತಿಸಲಾಗಿದೆ. ಹಾಗೆಯೇ ಬಡಾವಣೆ ಠಾಣೆ ಪೋಲಿಸರು ಮೋಟಾರ್ ಸೈಕಲ್ ಕಳವು ಮಾಡುತ್ತಿದ್ದ ನಿದ್ರಘಟ್ಟದ ಶ್ರೀಧರ್ ನನ್ನು ಬಂಧಿಸಿ ಅವನಿಂದ 3 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಚಳ್ಳಕೆರೆ ಪೋಲಿಸರು ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ದರೋಡೆ ಮಾಡಿದ್ದ ಚಿತ್ರದುರ್ಗ ನಗರದ ಮಹಮದ್ ನೂರೂಲ್ಲಾ, ಇಮ್ರಾನ್ ಎಂಬ ಇಬ್ಬರು ದರೋಡೆ ಕೋರರನ್ನು ಬಂಧಿಸಿ ಅವರಿಂದ 7 ಸಾವಿರ ಹಣ, 2 ಮೊಬೈಲ್ಗಳು, 1 ಚಾಕು ಹಾಗೂ 1 ಬೈಕ್ ವಶಪಡಿಸಿಕೊಂಡಿದ್ದು, ನಾಯಕನಹಟ್ಟಿ ಠಾಣೆ ಪೋಲಿಸರು ಇನ್ನು ಹಿರಿಯೂರು ತಾಲೂಕಿನ ಅಬ್ಬಿನ ಹೊಳೆ ಪೋಲಿಸ್ ರು ಅಭಿಷೇಕ್ ಹಾಗೂ ಮಹಮದ್ ಶಾಕೀರ್ ಎಂಬ ಇಬ್ಬರು ಜಾನುವಾರು ಕಳ್ಳರನ್ನು ಬಂಧಿಸಿ ಅವರಿಂದ ಜಾನುವಾರು ಮಾರಾಟ ಮಾಡಿದ್ದ 1 ಲಕ್ಷದ 50 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನ ನಾಯಕನಹಟ್ಟಿ ಪೋಲಿಸರು ನಕಲಿ ಕ್ರಿಮಿ ನಾಶಕ ಮಾರಾಟ ಮಾಡುತ್ತಿದ್ದ ಬಿಟಿ ಶಿವಾರೆಡ್ಡಿ ಎಂಬ ವ್ಯಕ್ತಿಯನ್ನು ಬಂಧಿಸಿ ಅವನಿಂದ ನಕಲಿ ಕೋರಾಜಿನ್ ಕ್ರಿಮಿ ನಾಶಕ ಮಾರಾಟ ಮಾಡುತ್ತಿದ್ದ ರಸೀದಿಗಳು ಸೇಲ್ಸ್ ರಸೀದಿ ಹಾಗೂ ಅಂಗಡಿಯ ಲೈಸೆನ್ಸ್ ಪ್ರತಿಯನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಆರೋಪಿಗಳೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ರಾಧಿಕಾ ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *