ಅಭಿವೃದ್ದಿ ನಿಗಮದ ಬಗ್ಗೆ ಪಂಡಿತಾರಾಧ್ಯಶ್ರೀಗಳು ಹೇಳಿದ್ದೇನು?

ಜಿಲ್ಲಾ ಸುದ್ದಿ ರಾಜ್ಯ

ಚಿತ್ರದುರ್ಗ: ವೀರಶೈವ ಲಿಂಗಾಯಿತ ಅಭಿವೃದ್ದಿ‌ನಿಗಮದ ಬದಲಿಗೆ ಬಸವೇಶ್ವರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

 

 

Chitradurga abhivruddige nigamada bagge swamiji heliddenu

ಯಡಿಯೂರಪ್ಪ ಅವರು ವೀರಶೈವ ಲಿಂಗಾಯಿತರ ನಡುವೆ ಭಿನ್ನಾಭಿಪ್ರಾಯಗಳಿವೆ. ರಾಜ್ಯ ಸರ್ಕಾರ ಅಂಬೇಡ್ಕರ್, ಬಾಬು ಜಗಜೀವನರಾಂ, ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಿದೆ.‌ಅದರಂತೆ ವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ಬಸವೇಶ್ವರ ಅಭಿವೃದ್ದಿ ನಿಗಮ ಎಂದು ಹೆಸರಿಡಬೇಕು. ಇದಕ್ಕೆ ಸಾವಿರಾರು ಕೋಟಿ ಅನುದಾನ ನೀಡಬೇಕು.
ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಲಿಂಗಾಯಿತರಿಗೆ ಶೇ. 16 % ಮೀಸಲಾತಿ ಕೊಡಬೇಕು. ಲಿಂಗಾಯಿತ ಧರ್ಮ ಪ್ರತ್ಯೇಕ ಧರ್ಮ ಎಂದು ಮಾನ್ಯತೆ ಸಿಗುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು‌. ಅಭಿವೃದ್ಧಿ ನಿಗಮಗಳು ಚುನಾವಣೆಯ ಗಿಮಿಕ್ ಆಗಬಾರದು. ನಿಜವಾದ ಬಡವರಿಗೆ ಸಂತ್ರಸ್ತರಿಗೆ ಸೌಲಭ್ಯಗಳು ಸಿಗುವಂತಾಗಬೇಕು. ಆರ್ಥಿಕ ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ ಮೀಸಲಾತಿ ಸಿಗಬೇಕು. ಇತ್ತೀಚಿಗೆ ಎಲ್ಲರೂ ಮೀಸಲಾತಿ ಕೇಳುತ್ತಿರುವುದು ವಿಷಾಧನೀಯ ಎಂದು ಪಂಡಿತಾರಾಧ್ಯ ಶ್ರೀಗಳು ಮನವಿಯನ್ನು ಸಲ್ಲಿಸುವ ಜೊತೆಗೆ ಕಿವಿ ಮಾತು ಹೇಳಿದ್ದಾರೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *